ದಾವಣಗೆರೆ: ಮೇಕೆ ಮರಿ ಹಿಡಿದ ಚಿರತೆಯನ್ನು ಜೀವಂತವಾಗಿ ಸುಟ್ಟರು

Posted By:
Subscribe to Oneindia Kannada

ದಾವಣಗೆರೆ, ಏಪ್ರಿಲ್ 18 : ಮೇಕೆ ಮರಿಯನ್ನು ತಿನ್ನಲು ಬಂದಿದ್ದ ಚಿರತೆಯನ್ನು ಜೀವಂತವಾಗಿ ಸುಟ್ಟುಹಾಕಿರುವ ಘಟನೆ ಸೋಮವಾರ ತಡ ರಾತ್ರಿ ಜಗಳೂರು ತಾಲೂಕಿನ ಮಾಗಡಿ ಗ್ರಾಮದಲ್ಲಿ ನಡೆದಿದೆ.

ಮೇಕೆ ಮರಿಯನ್ನು ಹಿಡಿದ ಚಿರತೆ ಕೆರೆಯ ತೂಬಿನೊಳಕ್ಕೆ ಹೋಗಿತ್ತು. ಇದರಿಂದ ರೊಚ್ಚಿಗೆದ್ದ ಇಲ್ಲಿನ ಜನರು ತೂಬಿನ ಎರಡು ಬದಿಯನ್ನು ಮುಚ್ಚಿ ಕಬ್ಬಿಣದ ಹಾರೆಗಳಿಂದ ದಾರುಣವಾಗಿ ಚುಚ್ಚಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಚಿರತೆಯನ್ನು ಜೀವಂತವಾಗಿ ಸುಟ್ಟು ಕೈತೊಳೆದುಕೊಂಡಿದ್ದಾರೆ.

Leopard burnt alive by enraged villagers for attacking goats in Davanagere

ಕೆಲ ತಿಂಗಳ ಹಿಂದೆ ಇದೇ ದಾವಣಗೆರೆ ಜಿಲ್ಲೆ ಬೈಂದೂರು ಗ್ರಾಮದಲ್ಲಿ ಚಿರತೆಯೊಂದು ಹಲವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದರಿಂದ ಗ್ರಾಮಸ್ಥರು ಚಿರತೆಯನ್ನು ಹೊಡೆದು ಸಾಯಿಸಿದ್ದರು.

ಅಷ್ಟಕ್ಕೆ ಸುಮ್ಮನಾಗದ ಗ್ರಾಮಸ್ಥರು ಕೊಂದ ಚಿರತೆಯನ್ನು ಕಂಬವೊಂದಕ್ಕೆ ಕಟ್ಟಿ ತಮ್ಮ ಸಿಟ್ಟನ್ನು ಹೊರ ಹಾಕಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a shocking incident, Magadi villagers in Jagalur taluk limits burnt down a leopard which attacked their livestock, mainly goats. The incident came to light on the night of April 17.
Please Wait while comments are loading...