KSRTC: ದಾವಣಗೆರೆ-ಮಂತ್ರಾಲಯಕ್ಕೆ ಪ್ರತಿ‌ನಿತ್ಯ ಎಸಿ ವೋಲ್ವೊ ಬಸ್‌ ಸೇವೆ

KSRTC: ಕೆಎಸ್‌ಆರ್‌ಟಿಸಿ ರಾಜ್ಯದ ಜೀವನಾಡಿ ಸಾರಿಗೆ ಆಗಿದೆ. ಇದು ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹೊಸ ಮಾರ್ಗಗಳಿಗೆ ತನ್ನ ಸೇವೆಯನ್ನು ವಿಸ್ತರಿಸುತ್ತಲಿರುತ್ತದೆ. ಹಾಗೆಯೇ ಇದೀಗ ದಾವಣಗೆರೆ-ಮಂತ್ರಾಲಯಕ್ಕೆ ಪ್ರತಿ ನಿತ್ಯ ಹವಾನಿಯಂತ್ರಿತ ವೋಲ್ಟ್ ಬಸ್‌ ಸೌಲಭ್ಯವನ್ನು ಆರಂಭಿಸಿದೆ. ಹಾಗಾದ್ರೆ ಸಮಯ ಹಾಗೂ ಮಾರ್ಗಗಳ ವಿವರನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕರುನಾಡ ರಥ ಅಂತಲೇ ಹೆಸರುವಾಸಿಯಾಗಿರುವ ಕೆಎಸ್‌ಆರ್‌ಟಿಸಿ ಆಗಾಗ ಕೈಗೆಟಕುವ ದರದಲ್ಲಿ ಟೂರ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲಿರುತ್ತದೆ. ಜೊತೆಗೆ ಪ್ರಯಾಣಿಕರ ಬೇಡಿಕೆ ತಕ್ಕಂತೆ ಹೊಸ ಮಾರ್ಗಗಳಲ್ಲಿ ಬಸ್‌ ಸೇವೆಯನ್ನು ನೀಡುತ್ತಲೇ ಬಂದಿದೆ. ಹಾಗೆಯೇ ಇದೀಗ ದಾವಣಗೆರೆ-ಮಂತ್ರಾಲಯಕ್ಕೆ ಪ್ರತಿ ನಿತ್ಯ ಹವಾನಿಯಂತ್ರಿತ ವೋಲ್ಟ್ ಬಸ್‌ ಸೇವೆ ಆರಂಭ ಮಾಡಿದೆ.

KSRTC Launches Daily AC Volvo Bus Service from Davanagere to Mantralayam

ದಾವಣಗೆರೆ ಜಿಲ್ಲೆ ಪ್ರಯಾಣಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಮಂತ್ರಾಲಯಕ್ಕೆ ಪ್ರತಿ ನಿತ್ಯ ಹವಾನಿಯಂತ್ರಿತ (AC) ವೋಲ್ಟ್ ಬಸ್‌ ಸೌಲಭ್ಯವನ್ನು ಕಲ್ಪಿಸಿದೆ. ಈ ಬಸ್‌ ಪ್ರತಿ ನಿತ್ಯ ರಾತ್ರಿ 9 ಗಂಟೆಗೆ ದಾವಣಗೆರೆ‌‌ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತದೆ. ಬಸ್ ಚಿತ್ರದುರ್ಗ, ಬಳ್ಳಾರಿ ಮೂಲಕ ಬೆಳಗ್ಗೆ 4‌ಗಂಟೆಗೆ ಮಂತ್ರಾಲಯಕ್ಕೆ ತಲುಪಲಿದೆ. ನಂತರ ಅದೇ ದಿನ ಬೆಳಗ್ಗೆ 11 ಗಂಟೆಗೆ ಮಂತ್ರಾಲಯದಿಂದ ಹೊರಡಲಿದ್ದು, ಸಂಜೆ 6 ಗಂಟೆಗೆ ದಾವಣಗೆರೆಗೆ ವಾಪಾಸ್‌ ಆಗಲಿದೆ.

ದಾವಣಗೆರೆಯಿಂದ ಮಂತ್ರಾಲಯ ರಾಘವೇಂದ್ರಸ್ವಾಮಿ ದರ್ಶನಕ್ಕೆ ತೆರಳುವವರಿಗೆ ಈ ಸೇವೆ ತುಂಬಾ ಅನುಕೂಲ ಆದಂತಾಗಲಿದೆ. ಇನ್ಮುಂದೆ ದಾವಣಗೆರೆಯಿಂದ ಮಂತ್ರಾಲಯಕ್ಕೆ ಹೋಗುವವರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕೌಂಟರ್ ಅಥವಾ ksrtc.karnataka.gov.in ಸಂಪರ್ಕಿಸಿ ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ಕೆಎಸ್‌ಆರ್‌ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್.ಶಿವಕುಮಾರಯ್ಯ ತಿಳಿಸಿದ್ದಾರೆ.

ಈಗಾಗಲೇ ಈ ಬಸ್‌ಗೆ ಸಂಸದೆ ಡಾ.ಪ್ರಭಾಮಲಿಕಾರ್ಜುನ್ ನವೆಂಬರ್ 25ರ ಮಂಗಳವಾರ ಚಲಾನೆ ನೀಡಿದ್ದಾರೆ. ಪ್ರಯಾಣಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ಮನವಿ ಮಾಡಿದೆ. ಕೆಎಸ್‌ಆರ್‌ಟಿಸಿ ಇಂತಹ ಸೇವೆಗಳನ್ನು ಕಲ್ಪಿಸುತ್ತಿರುವುದು ಇದೇ ಮೊದಲೇನಲ್ಲ. ಹಿಂದಿನಿಂದಲೂ ಸಹ ಪ್ರಯಾಣಿಕರ ಬೇಡಿಕೆ ಮೇರೆ ತನ್ನ ಸೇವೆಯನ್ನು ವಿಸ್ತರಣೆ ಮಾಡುತ್ತಾ ಬಂದಿದೆ.

ದಾವಣಗೆರೆ-ಶ್ರೀಶೈಲಕ್ಕೆ 'ಪಲ್ಲಕ್ಕಿ' ಸೇವೆ: ಇತ್ತೀಚೆಗಷ್ಟೇ ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗದಿಂದ ಪ್ರತಿನಿತ್ಯ ಹವಾನಿಯಂತ್ರಿತ ರಹಿತ ಸ್ಲೀಪರ್ ಪಲ್ಲಕ್ಕಿ ಸಾರಿಗೆ ಸೌಕರ್ಯವನ್ನು ಪ್ರಯಾಣಿಕರ ಹಿತದೃಷ್ಠಿಯಿಂದ ದಾವಣಗೆರೆಯಿಂದ ಶ್ರೀಶೈಲಕ್ಕೆ ಆರಂಭಿಸಲಾಗಿದೆ. ಸಮಯ, ದರ, ಯಾವ ಮಾರ್ಗಗಲ್ಲಿ ಸಂಚಾರ ಮಾಡಲಿದ ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ.

ದಾವಣಗೆರೆಯಿಂದ-ಹರಿಹರ-ಹರಪನಹಳ್ಳಿ-ಹೊಸಪೇಟೆ-ಬಳ್ಳಾರಿ-ಶ್ರೀಶೈಲಂಗೆ ಸಂಜೆ 5:15ಕ್ಕೆ ಹೊರಟು ಬೆಳಗ್ಗೆ 6.30 ಗಂಟೆಗೆ ತಲುಪುತ್ತದೆ. ಪ್ರಯಾಣ ದರ 1,216 ರೂಪಾಯಿ ನಿಗದಿಪಡಿಸಲಾಗಿದೆ. ಶ್ರೀಶೈಲ-ಬಳ್ಳಾರಿ-ಹೊಸಪೇಟೆ-ಹರಪನಹಳ್ಳಿ-ಹರಿಹರ-ದಾವಣಗೆರೆಗೆ ಸಂಜೆ 5:15ಕ್ಕೆ ಹೊರಟು ಬೆಳಗ್ಗೆ 6.30ಕ್ಕೆ ತಲುಪುತ್ತದೆ. ಮುಂಗಡ ಬುಕ್ಕಿಂಗ್ ಕೌಂಟರ್‌ಳಲ್ಲಿ ಹಾಗೂ ksrtc.karnataka.gov.inಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ಕೆಎಸ್‌ಆರ್‌ಟಿಸಿ ಪ್ರಯಾಣಿಕೆ ಬೇಡಿಕೆ ಮೇರೆಗೆ ಅವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಹೊಸ ಮಾರ್ಗಗಳಲ್ಲಿ ಬಸ್‌ ಸೇವೆಯನ್ನು ಕಲ್ಪಿಸುತ್ತಲೇ ಬಂದಿದೆ. ಇಂತಹ ಸೇವೆಗಳಿಗೆ ಪ್ರಯಾಣಿಕರಿಂದ ಭಾರೀ ಮೆಚ್ಚುಗೆಗಳ ಸರಮಾಲೆಯೇ ಹರಿದುಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+