ಕರ್ನಾಟಕ ಬಜೆಟ್ 2022; ದಾವಣಗೆರೆ ಜಿಲ್ಲೆಯ ನಿರೀಕ್ಷೆಗಳೇನು?

ದಾವಣಗೆರೆ, ಫೆಬ್ರವರಿ 26: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ 4ರಂದು ಚೊಚ್ಚಲ ಬಜೆಟ್ ಮಂಡಿಸಲು ತಯಾರಿ ನಡೆಸುತ್ತಿರುವ ಬೆನ್ನಲ್ಲೇ ರಾಜ್ಯದ ಪ್ರತಿ ಜಿಲ್ಲೆ, ವಿವಿಧ ಸಮುದಾಯ ಮತ್ತು ಇಲಾಖೆಗಳಿಗೆ ಯಾವ ರೀತಿಯ ಪ್ರಾಶಸ್ತ್ಯ ನೀಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಅದೇ ರೀತಿ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಜನರು ಅನೇಕ ಬೇಡಿಕೆಗಳು ಹಾಗೂ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆದರೆ ಯಾವುದೇ ಸರ್ಕಾರಗಳು ಬಂದರೂ ಬೆಣ್ಣೆ ನಗರಿ ಜಿಲ್ಲೆಗೆ ಆಶಾದಾಯಕವಾದಂತಹ ಯೋಜನೆ ನೀಡದಿರುವುದು ಬೇಸರದ ಸಂಗತಿಯಾಗಿದೆ.

ಈ ಬಾರಿಯ ಬಜೆಟ್‌ನಲ್ಲಿ ದಾವಣಗೆರೆ ಜಿಲ್ಲೆ ಜನರ ನಿರೀಕ್ಷೆಗಳು

1. ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ಚುರುಕಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು.

Karnataka Budget 2022: Expectations of Davanagere District in Budget

2. ದಾವಣಗೆರೆ ಜಿಲ್ಲೆಗೊಂದು ಐಟಿ ಹಬ್ ಬೇಕು ಎಂಬುವುದು ಜನರ ಬಹುದಿನದ ಬೇಡಿಕೆಯಾಗಿದೆ.

3. ಪ್ರವಾಸೋದ್ಯಮಕ್ಕೆ ಬೇಕಾದ ಯೋಜನೆ ಜನರ ನಿರೀಕ್ಷೆ (ಶಾಂತಿಸಾಗರ, ಕೊಂಡಜ್ಜಿ, ಹರಿಹರ, ಅನಗೋಡು ಪಾರ್ಕ್)

4. ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಗೆ ಬೇಕಾದ ಯೋಜನೆಗಳು, ಜಿಲ್ಲೆಯಲ್ಲಿ ಜವಳಿ ಪಾರ್ಕ್ ನಿರ್ಮಾಣ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಬಡಾವಣೆ ನಿರ್ಮಾಣ, ಬೃಹತ್‌ ಕೈಗಾರಿಕೆ ಘಟಕಗಳ ಆರಂಭಕ್ಕೆ "ಲ್ಯಾಂಡ್‌ ಬ್ಯಾಂಕ್‌' ಅಗತ್ಯ.

5. ರೈಲ್ವೆ, ಹೆದ್ದಾರಿ ಯೋಜನೆಗಳಿಗೆ ಹಣ ಬಿಡುಗಡೆ.

6. ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಜವಳಿ ಫ್ಯಾಕ್ಟರಿ, ಜೊತೆ ಇತರೆ ಕೈಗಾರಿಕೆಗಳು, ದಾವಣಗೆರೆ ಜಿಲ್ಲೆಯಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆ ಮಾಡಬೇಕು.

7. ದಶಕದಿಂದ ಬೇಡಿಕೆಯಿರುವ ದಾವಣಗೆರೆ ವಿಮಾನ ನಿಲ್ದಾಣ ಮಂಜೂರು ಹಾಗೂ ಅನುದಾನ ಬಿಡುಗಡೆ (ಉಡಾನ್ ಯೋಜನೆಯಡಿ ದಾವಣಗೆರೆ ವಿಮಾನ ನಿಲ್ದಾಣ ನಿರ್ಮಾಣ), ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಯಾಗಬೇಕಿದೆ, ಪಾಳು ಬಿದ್ದಿರುವ ಕೈಗಾರಿಕಾ ಪ್ರದೇಶಕ್ಕೆ ಬೃಹತ್‌ ಕೈಗಾರಿಕೆಗಳನ್ನು ಸೆಳೆಯಬೇಕು.

Karnataka Budget 2022: Expectations of Davanagere District in Budget

8. ತುಂಗಭದ್ರಾ ನದಿಯ ಹೂಳು ತೆಗೆದರೆ ದಾವಣಗೆರೆ ಭಾಗದ ಎಲ್ಲಾ ರೈತರಿಗೂ ಅನುಕೂಲವಾಗಲಿದೆ.

9. ದಾವಣಗೆರೆ- ಚಿತ್ರದುರ್ಗ- ತುಮಕೂರು ನೇರ ರೈಲು ಮಾರ್ಗದ ಭೂ ಖರೀದಿ ಕಾರ್ಯವನ್ನು ಚುರುಕುಗೊಳಿಸಬೇಕು.

10. ಸ್ಥಳೀಯ ಆರ್ಥಿಕ ಅಭಿವೃದ್ಧಿ, ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಒತ್ತು ನೀಡಲಿ.

11. ದಾವಣಗೆರೆ ಹೊರ ವರ್ತುಲ ರಸ್ತೆಗೆ ಹೆಚ್ಚಿನ ಅನುದಾನ ಒದಗಿಸಲಿ.

12. ದಾವಣಗೆರೆ ಮಕ್ಕಳ ಉದ್ಯಾನವನಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಲಿ.

13. ದಾವಣಗೆರೆ ನಗರದ ನಾನಾ ಬಡಾವಣೆ, ಸಾಕಷ್ಟು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಕೆರೆ ತುಂಬಿಸುವ ಯೋಜನೆ ಅನುಷ್ಠಾನವಾಗಬೇಕು.

14. ದಾವಣಗೆರೆ ಜಿಲ್ಲೆಯ ಕೃಷಿ ಉತ್ಪಾದನೆ ಸಂರಕ್ಷಣೆಗಾಗಿ ಫುಡ್‌ ಪಾರ್ಕ್ ಆರಂಭಿಸಬೇಕು.

15. ದಾವಣಗೆರೆ ಟ್ರಾಫಿಕ್‌ ದಟ್ಟಣೆ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.

16. ದಾವಣಗೆರೆ ಜಿಲ್ಲೆಯಲ್ಲಿ ಒಂದು ಹೊಸದಾದ, ಸುಸಜಿತ ಜಿಲ್ಲಾ ಕ್ರೀಡಾಂಗಣ ಮತ್ತು ಕ್ರೀಡಾ ಹಾಸ್ಟೆಲ್‌ಗಳನ್ನು ಸ್ಥಾಪಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+