ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯ 8 ಕ್ಷೇತ್ರಗಳು ಮತದಾನಕ್ಕೆ ಸಜ್ಜು : ಡಿಸಿ ರಮೇಶ್

By Mahesh
|
Google Oneindia Kannada News

ದಾವಣಗೆರೆ, ಮೇ 11:ದಾವಣಗೆರೆ ಜಿಲ್ಲೆಯ 8 ಮತಕ್ಷೇತ್ರಗಳಲ್ಲಿ ಮೇ 12ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು,
ಒಟ್ಟು 1946 ಮತಗಟ್ಟೆಗಳಲ್ಲಿ ಎಲ್ಲಾ ರೀತಿಯ ಸಿದ್ಧತೆಗಳಾಗಿವೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಹೇಳಿದ್ದಾರೆ.

ಶೇ. 100 ಎಪಿಕ್ ಗುರುತಿನ ಪತ್ರಗಳನ್ನು ನೀಡಲಾಗಿದ್ದು, ಒಂದು ವೇಳೆ ಎಪಿಕ್ ಕಾರ್ಡ್ ಇಲ್ಲದವರು ನಿಗದಿಪಡಿಸಿರುವ 12 ವಿವಿಧ ಗುರುತು ಪತ್ರಗಳಲ್ಲಿ ಯಾವುದಾರೊಂದನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ ಎಂದು ಹೇಳಿದರು.

ದಾವಣಗೆರೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿರುವ ಮತದಾರರ ಅಂತಿಮ ಚಿತ್ರಣ ದಾವಣಗೆರೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿರುವ ಮತದಾರರ ಅಂತಿಮ ಚಿತ್ರಣ

ಈ ಬಾರಿ ಜಿಲ್ಲೆಯಲ್ಲಿ 14,555 ವಿಕಲಚೇತನ ಮತದಾರರಿದ್ದು ಅವರುಗಳು ಮತದಾನ ಮಾಡಲು ಎಲ್ಲಾ ವ್ಯವಸ್ಥೆಗಳಾಗಿವೆ. ಇವರಿಗೆ ಮತದಾನಕ್ಕೆ ನೆರವು ನೀಡಲು ಸ್ವಯಂ ಸೇವಕರು ಮುಂದೆ ಬಂದಿದ್ದಾರೆ. 611 ಮತಗಟ್ಟೆಗಳಲ್ಲಿ ವೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ

Karnataka Assembly Elections 2018 : Davanagere 8 Constituencies is ready

ಜಿಲ್ಲೆಯಲ್ಲಿ ಒಟ್ಟು 8 ಮತ ಕ್ಷೇತ್ರಗಳಿದ್ದು, 16,32,949 ಮತದಾರರಿದ್ದಾರೆ. ಅವರಲ್ಲಿ ಪುರುಷರು 8,24,774, ಮಹಿಳೆಯರು 8,08,058 ಹಾಗೂ

ಇತರೆ 117 ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿದ್ದಾರೆ. ಈ ಬಾರಿ ವಿಶೇಷವಾಗಿ 15 ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಶೇ 100 ರಷ್ಟು ಮಹಿಳಾ ಸಿಬ್ಬಂದಿಗಳು ಈ ಮತಗಟ್ಟೆಗಳನ್ನು ನಿರ್ವಹಿಸಲಿದ್ದಾರೆ ಎಂದರು. ಮೇ 12 ಮತದಾನದ ದಿನ ಹಾಗೂ ಮತಎಣಿಕೆ ದಿನದಂದು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಂತೆ ಮತ್ತು ಜಾತ್ರೆಗಳನ್ನು ನಿಷೇಧಿಸಲಾಗಿದೆ ಎಂದರು.

English summary
Davanagere has 16,32,949 voters in 8 Assembly Constituencies, Voting will be held in 1,946 polling booth across the district said Deputy commissioner D S Ramesh,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X