Harapanahalli constituency; ಕಾಂಗ್ರೆಸ್, ಬಿಜೆಪಿ ಪೈಪೋಟಿ!
ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕು 2018ರಲ್ಲಿ ಮತ್ತೆ ಬಳ್ಳಾರಿ ಜಿಲ್ಲೆಗೆ ಸೇರಿದೆ. ಅತ್ತ ಬಳ್ಳಾರಿ ಜಿಲ್ಲೆ ಬಳ್ಳಾರಿ, ವಿಜಯನಗರ ಎಂದು ವಿಭಜನೆಗೊಂಡಿದೆ. 1997ರಲ್ಲಿ ದಾವಣಗೆರೆ ಜಿಲ್ಲೆ ಹೊಸದಾಗಿ ರೂಪಗೊಂಡಾಗ ಬಳ್ಳಾರಿ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕನ್ನು ದಾವಣಗೆರೆಗೆ ಸೇರಿಸಲಾಯಿತು. ಬಳ್ಳಾರಿ ಜಿಲ್ಲೆಗೆ 371 (ಜೆ) ಸವಲತ್ತು ದೊರೆತ ಬಳಿಕ ಹರಪನಹಳ್ಳಿ ಭಾಗದ ಜನರು ನಮಗೂ ಆ ಸೌಲಭ್ಯ ಬೇಕು ಎಂದು ಪಟ್ಟು ಹಿಡಿದರು. ನಾವು ಬಳ್ಳಾರಿಗೆ ಸೇರಿದವರು, ಆದರೆ ನಮ್ಮನ್ನು ದಾವಣಗೆರೆಗೆ ಸೇರಿಸಲಾಗಿದೆ ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟರು.
ಅತಿ ಹಿಂದುಳಿದ ತಾಲೂಕು ಹಣೆಪಟ್ಟಿ ಹೊತ್ತಿರುವ ಹರಪನಹಳ್ಳಿ ಅಭಿವೃದ್ಧಿಯಾಗಬೇಕು ಎಂದು ಜನಪ್ರತಿನಿಧಿಗಳು ಸಹ ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಸೇರಬೇಕು ಎಂದು ಪಕ್ಷಾತೀತ ಹೋರಾಟ ಆರಂಭಿಸಿದರು. ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ದಿ. ಎಂ. ಪಿ. ಪ್ರಕಾಶ್ ಪುತ್ರ ಎಂ. ಪಿ. ರವೀಂದ್ರ ಸಿದ್ದರಾಮಯ್ಯ ಸರ್ಕಾರವಿದ್ದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹರಪನಹಳ್ಳಿ ಜನರ ಜೊತೆ ನಿಲ್ಲಲು ಮುಂದಾದರು. ಅಂತಿಮವಾಗಿ ಕಾಂಗ್ರೆಸ್ ಸರ್ಕಾರ ಹರಪನಹಳ್ಳಿಯನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಿ ಅಧಿಸೂಚನೆ ಹೊರಡಿಸಿತು.

ರಾಜಕೀಯವಾಗಿ ಕರ್ನಾಟಕ ರಾಜಕಾರಣದ ಸಜ್ಜನ ಎಂ. ಪಿ. ಪ್ರಕಾಶ್ ತವರು ಕ್ಷೇತ್ರ ಹರಪನಹಳ್ಳಿ. ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕ್ಷೇತ್ರದ ಹಾಲಿ ಶಾಸಕರು ರೆಡ್ಡಿ ಸಹೋದರರ ಹಿರಿಯಣ್ಣ ಜಿ. ಕರುಣಾಕರ ರೆಡ್ಡಿ. 2018ರ ಚುನಾವಣೆಯಲ್ಲಿ 67,603 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿಯೂ ಅವರು ಟಿಕೆಟ್ ಆಕಾಂಕ್ಷಿ. ಆದರೆ ಅವರು ಹೊರಗಿನವರು ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇದೆ.
ಜಿ. ಕರುಣಾಕರ ರೆಡ್ಡಿ 2008ರಲ್ಲಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಗೆದ್ದರು. ಸರ್ಕಾರದ ಮೇಲಿದ್ದ ರೆಡ್ಡಿ ಸಹೋದರರ ಪ್ರಭಾವದ ಕಾರಣ ಸರ್ಕಾರದಲ್ಲಿ ಕಂದಾಯ ಸಚಿವರಾದರು. 2013ರಲ್ಲಿ ಅವರು 48,548 ಮತಗಳನ್ನು ಪಡೆದು 56,954 ಮತಗಳನ್ನು ಪಡೆದ ಕಾಂಗ್ರೆಸ್‌ನ ಎಂ. ಪಿ. ರವೀಂದ್ರ ವಿರುದ್ಧ ಸೋಲು ಕಂಡರು. 2018ರಲ್ಲಿ ಹರಪನಹಳ್ಳಿ ಕ್ಷೇತ್ರದಲ್ಲಿ ಮತ್ತೆ ಜಯಗಳಿಸಿದ್ದಾರೆ. ಮಾಜಿ ಸಚಿವ ಬಿ. ಶ್ರೀರಾಮುಲು ಬಿಎಸ್ಆರ್ ಕಾಂಗ್ರೆಸ್ ಸ್ಥಾಪನೆ ಮಾಡಿದಾಗಲೂ ಅವರು ಬಿಜೆಪಿ ಬಿಟ್ಟು ಹೋಗದೇ ಪಕ್ಷ ನಿಷ್ಠೆ ತೋರಿದ್ದಾರೆ. ಈ ಬಾರಿಯೂ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ಹರಪನಹಳ್ಳಿ ಕ್ಷೇತ್ರಕ್ಕೆ ಜಿ. ಕರುಣಾಕರ ರೆಡ್ಡಿ ಹೊರಗಿನವರು, ಸ್ಥಳೀಯರಿಗೆ ಟಿಕೆಟ್ ನೀಡಿ ಎಂಬ ಕೂಗು ಎದ್ದಿದೆ. ಯು. ನಂದನಗೌಡ, ಅರುಂಡಿ ನಾಗರಾಜು, ಚನ್ನಬಸಪ್ಪ ಪಾಟೀಲ್ ಮುಂತಾದವರು ಸ್ಥಳೀಯರು ಎಂಬ ಕೋಟಾದಲ್ಲಿ ಬಿಜೆಪಿ ಟಿಕೆಟ್ ಬಯಸಿದ್ದಾರೆ. ಬಳ್ಳಾರಿಯ ಬಿಜೆಪಿ ಸಂಸದ ವೈ. ದೇವೇಂದ್ರಪ್ಪ ಪುತ್ರ ವೈ. ಡಿ. ಅಣ್ಣಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ. ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಜಿ. ಕರುಣಾಕರ ರೆಡ್ಡಿಗೆ ಹಿನ್ನಡೆ ಉಂಟು ಮಾಡಿದರೂ ಮಾಡಬಹುದಾಗಿದೆ.
ಕಾಂಗ್ರೆಸ್ ಟಿಕೆಟ್ ಯಾರಿಗೆ?; 2018ರಲ್ಲಿ ಎಂ. ಪಿ. ರವೀಂದ್ರ ಪಕ್ಷದ ಅಭ್ಯರ್ಥಿಯಾಗಿದ್ದರು. 57,956 ಮತಗಳನ್ನು ಪಡೆದು ಹರಪನಹಳ್ಳಿ ಕ್ಷೇತ್ರದಲ್ಲಿ ಸೋತಿದ್ದರು. ಅವರ ಅಕಾಲಿಕ ಮರಣ ಪಕ್ಷಕ್ಕೆ ಸಹ ಹಿನ್ನಡೆ ಉಂಟು ಮಾಡಿದೆ. ಈ ಬಾರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ 17 ಅರ್ಜಿಗಳು ಸಲ್ಲಿಕೆಯಾಗಿವೆ. ಇವರಲ್ಲಿ ಮಾಜಿ ಉಪಮುಖ್ಯಮಂತ್ರಿ ಎಂ. ಪಿ. ಪ್ರಕಾಶ್ ಪುತ್ರಿಯರಾದ ಎಂ. ಪಿ. ಲತಾ, ಎಂ. ಪಿ. ವೀಣಾ ಸಹ ಸೇರಿದ್ದಾರೆ. ಉಳಿದಂತೆ ಅರಸೀಕೆರೆ ಎನ್. ಕೊಟ್ರೇಶ್, ಪಿ. ಟಿ. ಪರಮೇಶ್ವರ ನಾಯ್ಕ್ ಆಪ್ತ ಶಶಿಧರ ಪೂಜಾರಿ, ಎಸ್. ವಿ. ಪರುಶರಾಮಪ್ಪ ಸೇರಿದ್ದಾರೆ. ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ 37,685 ಮತಗಳನ್ನು ಪಡೆದಿದ್ದ ಅರಸೀಕೆರೆ ಎನ್. ಕೊಟ್ರೇಶ್ ಈ ಬಾರಿ ಕಾಂಗ್ರೆಸ್‌ನ ಟಿಕೆಟ್ ಬಯಸಿದ್ದಾರೆ.
ಜೆಡಿಎಸ್‌ನಿಂದ ಬೇಲ್ದಾರ್ ಬಾಷಾ ಅವರು ಅಭ್ಯರ್ಥಿ ಎಂಬ ಮಾತು ಇತ್ತು. ಈಗ ಕೂಡ್ಲಗಿ ಕ್ಷೇತ್ರದ ಮಾಜಿ ಶಾಸಕ ಎನ್. ಎಂ. ನಬಿ ಅವರ ಪುತ್ರ ನೂರ್ ಅಹ್ಮದ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಹರಪನಹಳ್ಳಿ ಕ್ಷೇತ್ರದಲ್ಲಿ ಯಾರನ್ನು ಅಭ್ಯರ್ಥಿ ಮಾಡುತ್ತಾರೆ? ಎಂದು ಕಾದು ನೋಡಬೇಕಿದೆ.
ಹರಪನಹಳ್ಳಿ ಕ್ಷೇತ್ರದ ಒಟ್ಟು ಮತದಾರರು 2,01,133. ಪುರುಷರು 1,03,360, ಮಹಿಳೆಯರು 97,669 ಮತ್ತು ಇತರರು 17.
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications