ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅಕಾಂಕ್ಷಿ ಅಲ್ಲ: ಡಿಕೆಶಿ ಸ್ಪಷ್ಟನೆ
ದಾವಣಗೆರೆ, ಜನವರಿ 15: ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಎನ್ನುವುದು ಸುಳ್ಳು, ನನ್ನ ಹೆಸರು ಪ್ರಸ್ತಾಪ ಇಲ್ಲ, ಅಧ್ಯಕ್ಷನಾಗಲು ಯಾವುದೇ ರೀತಿಯಲ್ಲಿ ಪ್ರಯತ್ನ ಪಟ್ಟಿಲ್ಲ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹರಿಹರದ ಪಂಚಮಸಾಲಿ ಪೀಠದಲ್ಲಿ ನಡೆಯುತ್ತಿರುವ ಹರ ಜಾತ್ರೆಗೆ ಆಗಮಿಸಿ ಮಾರ್ಗ ಮಧ್ಯೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ನಾನು ಯಾವುದೇ ಸ್ಥಾನದ ಅಕಾಂಕ್ಷಿ ಅಲ್ಲ. ನನ್ನ ಹೆಸರು ಎಲ್ಲೂ ಪ್ರಸ್ತಾಪವಾಗಿಲ್ಲ, ಜನರ ಮಧ್ಯೆ ಇದ್ದು ಕೆಲಸ ಮಾಡುತ್ತೇನೆ ಅಷ್ಟೇ ಎಂದರು.
ಇನ್ನೂ ಒಂದು ಕಡೆ ರಾಮನಗರದಲ್ಲಿ ಏಸೂ ಪ್ರತಿಮೆಗೆ ವಿರೋಧಿಸುವ ಬಿಜೆಪಿ, ಇತ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಹರಿಹರದಲ್ಲಿ ಚರ್ಚ್ ಗೆ ಭೇಟಿ ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಅವರವರ ನೀತಿ, ಧರ್ಮ, ಪಾರ್ಟಿ, ಅವರ ಓಟಿನ ವಿಚಾರ ಅವರು ಏನು ಬೇಕಾದ್ರು ಮಾಡಿಕೊಳ್ಳಲಿ ಎಂದು ಹೇಳಿದರು.

ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಕು. ನಮಗೆ ಎಲ್ಲಾ ಧರ್ಮದ ಜನ ಬೇಕು, ನಮ್ಮ ತಾಲ್ಲೂಕಿನ ಒಬ್ಬರು ಪ್ರತಿಮೆ ಮಾಡ್ತಿದ್ದಾರೆ, ನಾನು ಕ್ಷೇತ್ರದ ಶಾಸಕನಾಗಿ ನನ್ನ ಡ್ಯೂಟಿ ನಾನು ಮಾಡ್ತೀನಿ ಎಂದು ಸ್ಪಷ್ಟನೆ ನೀಡಿದರು.












Click it and Unblock the Notifications