• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುತ್ರನನ್ನು ನೆನೆದು ಭಾವುಕರಾದ ಹೊನ್ನಾಳಿ ಶಾಸಕ ರೇಣುಕಾಚಾರ್ಯ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಏಪ್ರಿಲ್ 08: "ನನ್ನ ಪುತ್ರ ಎಂ.ಆರ್ ಚೇತನ್ ಅಮೆರಿಕದ ಲಾಸ್ ಎಂಜಿಲ್ಸ್ ನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾನೆ. ಈಗ ಅಮೆರಿಕದಲ್ಲಿ‌ ಕೊರೋನಾ ಭೀತಿ ಜಾಸ್ತಿ ಆಗಿದೆ. ನಾನು, ನನ್ನ ಪತ್ನಿ ನಿತ್ಯ ನಾಲ್ಕು ಸಲ ಪೋನ್ ನಲ್ಲಿ‌ಮಾತಾಡುತ್ತಿದ್ದೇವೆ'' ಎಂದು ಪುತ್ರನನ್ನು ನೆನೆದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಭಾವುಕರಾಗಿದ್ದಾರೆ.

""ಅವನಿಗೆ ಅಲ್ಲಿಯೇ ಇರಲು ಹೇಳಿದ್ದೇವೆ, ಕರೆತರುವ ಪರಿಸ್ಥಿತಿ ಇಲ್ಲ. ನನ್ನ ಕಷ್ಟ ಹೇಳಿಕೊಳ್ಳಲು ಮಾಧ್ಯಮದ ಮುಂದೆ ಬಂದಿಲ್ಲ. ನಮ್ಮ ಮತದಾರರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ'' ಎಂದರು.

ಕೊರೊನಾ ಹಿನ್ನೆಲೆ ನಗರದ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ಮಾಸ್ಕ್ ಜಾಗೂ ಸ್ಯಾನಿಟೈಸರ್ ವಿತರಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರು ಸರ್ಕಾರವನ್ನು ಆಡಳಿತ ಮಾಡಿರುವವರು, ಅವರಿಗೆ ನಾನು ಹೇಳುವುದೇನಿದೆ ಎಂದು ತಿರುಗೇಟು ನೀಡಿದರು.

ಕೊರೊನಾ ನಿಯಂತ್ರಣ ಕಾರ್ಯನಿರತ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯವರ ಮೇಲೆ ಹಲ್ಲೆಗಳು ನಡೆಯುತ್ತಿವೆ, ಇದಕ್ಕೆ ಏನ್ ಉತ್ತರ ಕೊಡುವಿರಿ ಎಂದು ಪ್ರಶ್ನಿಸಿದ ಅವರು, ಜಮೀರ್ ಅಹ್ಮದ್ ರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಆಗ್ರಹಿಸಿದರು.

ವಿಚಾರಣಾದೀನ ಕೈದಿಗಳಿಗೆ ಮಾನವೀಯತೆಯಿಂದ ನಾವು ಮಾಸ್ಕ್, ಸ್ಯಾನಿಟೈಸರ್ ವಿರತಣೆ ಮಾಡಿ ಬುದ್ಧಿವಾದ ಹೇಳಿದ್ದೇವೆ. ತಬ್ಲಿಘಿ ಸಂಘಟನೆಯಿಂದ ದೇಶಕ್ಕೆ ಮಾರಕವಾಗಿದೆ. ತಬ್ಲಿಘಿ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದ ಅವರು ಈ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದರು.

English summary
“My son MR Chetan is studying engineering in Los Angeles,” said That Honnali MLA Renukacharya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X