ದಾವಣಗೆರೆ: ಸೀಲ್ ಡೌನ್ ಪ್ರದೇಶದಲ್ಲೇ ಅದ್ಧೂರಿ ವಿವಾಹ
ದಾವಣಗೆರೆ, ಜುಲೈ 10: ಕೊರೊನಾ ವೈರಸ್ ಎಂಬ ಮಹಾಮಾರಿ ರಾಜ್ಯಕ್ಕೆ ವಕ್ಕರಿಸಿದ ಬಳಿಕ ಸಭೆ-ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಹೆಚ್ಚು ಜನ ಸೇರಬಾರದೆಂಬ ಆದೇಶದ ನಡುವೆಯೂ, ಅದರಲ್ಲೂ ಸೀಲ್ ಡೌನ್ ಪ್ರದೇಶದಲ್ಲೇ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಹರಿಹರದ ಗಾಂಧಿನಗರ ಕಂಟೈನ್ಮೆಂಟ್ ಏರಿಯಾದಲ್ಲಿ ಈ ಅದ್ಧೂರಿ ಮದುವೆ ನಡೆದಿದ್ದು, ಈ ಮೂಲಕ ಕಂಟೈನ್ಮೆಂಟ್ ಏರಿಯಾದಲ್ಲಿಯೇ ಹೇಳೋರಿಲ್ಲ ಕೇಳೋರಿಲ್ಲ ಅನ್ನುವಂತಾಗಿದೆ. ಅಲ್ಲದೆ ಈ ಘಟನೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಗಾಂಧಿನಗರ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿತ್ತು. ಆದರೂ ಇಸ್ಮಾಯಿಲ್ ಸಾಬ್ ಅವರ ಮೊಮ್ಮಗಳ ಮದುವೆ ನಡೆದಿದೆ. ಪೆಂಡಾಲು ಹಾಕಿ ಮದುವೆ ಮಾಡುವವರೆಗೆ ಮೈಮರೆತಿದ್ದ ಅಧಿಕಾರಿಗಳು ಮದುವೆ ಮುಗಿದ ನಂತರ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಆದರೂ ಕೊರೊನಾ ವೈರಸ್ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಸೀಲ್ ಡೌನ್ ಪ್ರದೇಶ ಕೇವಲ ನಾಮಾಕಾವಾಸ್ತೆಗೆ ಆಯ್ತಾ ಅನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.












Click it and Unblock the Notifications