ದಾವಣಗೆರೆಯಲ್ಲಿ 1.13 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು
ದಾವಣಗೆರೆ, ಏಪ್ರಿಲ್, 3: ರಾಜ್ಯದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹಾಗೆಯೇ ಇದೀಗ ಖತರ್ನಾಕ್ ಬುರ್ಖಾ ಗ್ಯಾಂಗೊಂದು ಜ್ಯೂವೆಲರಿ ಅಂಗಡಿ ಸಿಬ್ಬಂದಿಯನ್ನೇ ಯಾಮಾರಿಸಿ ಚಿನ್ನಾಭರಣ ಎಗರಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯಲ್ಲಿ ರವಿ ಜ್ಯುವೆಲರಿ ಅಂಗಡಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು 1.13 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ.

ಬುರ್ಖಾ ಧರಿಸಿದ ಐವರು ಮಹಿಳೆಯರು ಹಾಗೂ ಟೋಪಿ ಧರಿಸಿದ ಒಬ್ಬ ಪುರುಷ ಈ ಕೃತ್ಯವನ್ನು ನಡೆಸಿದ್ದಾರೆ. ಜ್ಯುವೆಲರಿ ಅಂಗಡಿ ಸಿಬ್ಬಂದಿ ಗಮನವನ್ನು ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡಿದ್ದಾರೆ. ಈ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ.ದಾವಣಗೆರೆ ಮಂಡಿಪೇಟೆಯ ರವಿ ಜ್ಯುವೆಲರಿ ಶಾಪ್‌ನಲ್ಲಿ ಈ ಘಟನೆ ನಡೆದಿದೆ.
ಚಿನ್ನಾಭರಣ ಖರೀದಿಯ ನೆಪದಲ್ಲಿ ಶಾಪ್‌ಗೆ ಎಂಟ್ರಿ ಕೊಟ್ಟ ಖತರ್ನಾಕ್ ಗ್ಯಾಂಗ್, ಅಲ್ಲಿನ ಸಿಬ್ಬಂದಿಯನ್ನು ಗಮನ ಬೇರೆಡೆ ಸೆಳೆದು 1.13 ಕೋಟಿ ರೂಪಾಯಿ ಮೌಲ್ಯದ 1 ಕೆ.ಜಿ 400 ಗ್ರಾಂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ಚಿನ್ನಾಭರಣ ಅಂಗಡಿಗೆ ಬುರ್ಖಾ ಧರಿಸಿದ ಐವರು ಮಹಿಳೆಯರು ಹಾಗೂ ಟೋಪಿ ಧರಿಸಿದ ವ್ಯಕ್ತಿಯೊಬ್ಬ ಮಾರ್ಚ್ 26ರಂದು ಮಧ್ಯಾಹ್ನ 1ಕ್ಕೆ ಬಂದಿದ್ದಾರೆ.
ಅಂಗಡಿಯಲ್ಲಿದ್ದ 50 ಸಿಬ್ಬಂದಿಯಲ್ಲಿ ಮೂವರು ಊಟಕ್ಕೆ ತೆರಳಿದ್ದರು. ಬೆಳ್ಳಿ ಲೋಟ, ಆಭರಣ ಖರೀದಿಗೆ ಬಂದಿರುವುದಾಗಿ ಹೇಳಿಕೊಂಡು ಕೆಲ ಹೊತ್ತು ಕಾಲಾಹರಣ ಮಾಡಿ, ಕಳ್ಳತನಕ್ಕೆ ಹೊಂಚು ಹಾಕಿದ್ದಾರೆ. ತೋರಿಸಿದ ಆಭರಣವನ್ನು ಒಪ್ಪದೆ ಬೇರೆ ಅಭರಣ ತರುವಂತೆ ಹೇಳಿದ್ದಾರೆ. ಆಗ ಮಹಿಳೆಯೊಬ್ಬರು ಚಿನ್ನಾಭರಣದ ಪೆಟ್ಟಿಗೆಯೊಂದನ್ನು ಎತ್ತಿಕೊಂಡು ಬುರ್ಖಾದಲ್ಲಿ ಇಟ್ಟುಕೊಂಡು ಹೊರನಡೆದ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ.
ವಾರಕ್ಕೊಮ್ಮೆ ಚಿನ್ನಾಭರಣಗಳ ಲೆಕ್ಕ ಪಡೆಯುತ್ತೇವೆ. ಈ ವೇಳೆ ಒಂದು ಕೆ.ಜಿ.ಗೂ ಅಧಿಕ ಚಿನ್ನಾಭರಣ ಕಡಿಮೆ ಬಂದಿದೆ. ಆಗ ಸಿಸಿಟಿವಿ ಪರಿಶೀಲಿಸಿದಾಗ ಮಹಿಳೆ ಕಳವು ಮಾಡಿದ್ದು ಪತ್ತೆಯಾಗಿದೆ ಎಂದು ದೂರಿನಲ್ಲಿ ಅಂಗಡಿಯ ಮಾಲಕಿ ರೇಖಾ ರವಿಕುಮಾರ್ ಉಲ್ಲೇಖಿಸಿದ್ದಾರೆ. ಬಸವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications