• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗ್ರೀನ್ ಝೋನ್ ಆಗಿದ್ದ ದಾವಣಗೆರೆಯಲ್ಲಿ ಕೊರೊನಾಗೆ ಮೊದಲ ಬಲಿ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಮೇ 02: ಮಹಾಮಾರಿ ಕೊರೊನಾಗೆ ದಾವಣಗೆರೆಯಲ್ಲಿ ಮೊದಲ ಬಲಿಯಾಗಿದೆ. ನಿನ್ನೆ ರಾತ್ರಿ 69 ವರ್ಷದ ವೃದ್ಧ ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

   ಹೈದರಾಬಾದ್‌ನಲ್ಲಿ ಕೆಲಸ ಮಾಡಿ ಹಿಂತಿರುಗಿದ ಡಾಕ್ಟರ್‌ಗೆ ಸಿಕ್ಕ ಸ್ವಾಗತ ಹೇಗಿತ್ತು | Oneindia Kannada

   ನಗರದ ಜಾಲಿನಗರ ನಿವಾಸಿಯಾಗಿದ್ದ ಈ ವೃದ್ಧ ಮೂರು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ ಕೊರೊನಾ ಸೋಂಕು ಇರುವುದು ಗುರುವಾರ ದೃಢಪಟ್ಟಿತ್ತು. ವೈರಸ್ ಪತ್ತೆಯಾದ ಒಂದೇ ದಿನದಲ್ಲಿ ವೃದ್ಧ ಮೃತಪಟ್ಟಿದ್ದಾರೆ.

   ದಾವಣಗೆರೆಯಲ್ಲಿ ಮತ್ತೆ ಆರು ಪಾಸಿಟಿವ್: ರೆಡ್ ಝೋನ್ ಪಕ್ಕಾ

   ಇವರಿಂದ ಇತರ 5 ಮಂದಿಗೂ ಸೋಂಕು ತಗುಲಿತ್ತು. ಇವರ 3 ಸೊಸೆಯಂದಿರು, ಒಬ್ಬ ಮಗ ಸೇರಿದಂತೆ ಒಂದು ವರ್ಷದ ಮೊಮ್ಮಗನಿಗೂ ಸೋಂಕು ತಗುಲಿದ್ದು, ಎಲ್ಲರಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ. ವೃದ್ಧನ ಸಾವಿನಿಂದ ಇದೀಗ ದಾವಣಗೆರೆ ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.

   ಈ ನಡುವೆ ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಪರ್ಕ ಹೊಂದಿದ್ದ ಸುಮಾರು 82 ಮಂದಿಯ ಗಂಟಲ ದ್ರವವನ್ನು ಪರೀಕ್ಷೆ ಗೆ ಒಳಪಡಿಸಲಾಗಿದೆ. ಇಂದು ಅವರ ವರದಿ ಕೂಡ ಬರಲಿದ್ದು, ಫಲಿತಾಂಶ ಏನು ಬರುತ್ತದೆಯೋ ಕಾದು ನೋಡಬೇಕಿದೆ.

   English summary
   First death reported in davanagere by coronavirus. 69 year old man died yesterday due to coronavirus,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X