Durgambika Jatra 2024: ದಾವಣಗೆರೆ ಶಕ್ತಿ ದೇವತೆ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಮೌಢ್ಯಾಚರಣೆಗೆ ನಿಷೇಧ
ದಾವಣಗೆರೆ, ಮಾರ್ಚ್, 18: ಮಾರ್ಚ್ 19 ಹಾಗೂ 20ರಂದು ದುರ್ಗಾಂಬಿಕಾ ತಾಯಿ ಹಾಗೂ ವಿನೋಬನಗರದ ಶ್ರೀ ಚೌಡಶ್ವರಿ ದೇವಸ್ಥಾನದ ಆವರಣದಲ್ಲಿ ಮೌಢ್ಯಾಚರಣೆಗೆ ನಿಷೇಧ ಹೇರಲಾಗಿದೆ. ಪೊಲೀಸ್ ಇಲಾಖೆಯು ಕೆಲ ಸೂಚನೆಗಳನ್ನು ಕೊಟ್ಟಿದೆ.
ಮೌಲ್ಯವಾದ ವಸ್ತುಗಳ ಬಗ್ಗೆ ಜಾಗ್ರತೆವಹಿಸುವುದು. ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಮತ್ತು ವಿನೋಭಾನಗರ ಶ್ರೀ ಚೌಡೇಶ್ವರಿ ದೇವಿಯ ದೇವಸ್ಥಾನದ ಆವರಣದಲ್ಲಿ ಮೌಢ್ಯಾಚರಣೆ ಯಾರೂ ಕೂಡ ಆಚರಣೆ ಮಾಡದೆ ಕಾನೂನು ಪಾಲನೆ ಮಾಡಬೇಕು.

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಮತ್ತು ವಿನೋಬನಗರ ಶ್ರೀ ಚೌಡೇಶ್ವರಿ ದೇವಿಯ ದೇವಸ್ಥಾನದ ಆವರಣದ ಸುತ್ತ ಮುತ್ತ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಯಾವುದೇ ಪ್ರಾಣಿ ಬಲಿ ಮಾಡುವುದಕ್ಕೆ ಅವಕಾಶ ಇಲ್ಲ. ಜಾತ್ರೆಯ ಸಮಯದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ತುರ್ತು ಸೇವೆಗಾಗಿ ತುರ್ತು ಸಹಾಯವಾಣಿ 112 ನಂಬರ್‌ಗೆ ಕರೆ ಮಾಡುವುದು ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಲಾಗಿದೆ.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಜಾತ್ರೆ ಹಬ್ಬ, ಮೆರವಣಿಗೆ, ಕಾರ್ಯಾಕ್ರಮ ನಡೆಸುವ ಬಗ್ಗೆ ಹಾಗೂ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಲು ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ದೇವಸ್ಥಾನದ ಆವರಣದಲ್ಲಿ ಮೌಢ್ಯಾಚರಣೆಗೆ ನಿಷೇಧವಿದ್ದು, ಯಾರೂ ಕೂಡ ಮೌಢ್ಯಾಚರಣೆ ಮಾಡಬಾರದು. ಪ್ರಾಣಿ ಬಲಿ ಮಾಡಬಾರದು. ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಎಚ್ಚರಿಕೆ ನೀಡಿದೆ.
ದೇವಸ್ಥಾನ ಆವರಣ ಹಾಗೂ ಜಾತ್ರೆಯ ಸಮಯದಲ್ಲಿ ಅಹಿತಕರ ಘಟನೆಗಳು ಜರುಗಿದಾಗ ಯಾರೂ ಕೂಡ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಲೋಕಸಭಾ ಚುನಾವಣೆ ನೀತಿ ಸಂಹಿತ ಜಾರಿಯಲ್ಲಿ ಇರುವುದರಿಂದ ಯಾರೂ ಉಲ್ಲಂಘನೆ ಮಾಡಬಾರದು ಎಂದು ಸೂಚನೆ ನೀಡಿದೆ.
ಹೇಗಿದೆ ಗೊತ್ತಾ ಹದ್ದಿನ ಕಣ್ಣು?: ದುರ್ಗಾಂಬಿಕೆ ದೇವಿ ಹಾಗೂ ವಿನೋಬನಗರದ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದು, ಮಾರ್ಚ್ 19 ಹಾಗೂ 20ರಂದು ವಿಜೃಂಭಣೆಯಿಂದ ನೆರವೇರಲಿದೆ. ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಪೊಲೀಸ್ ಬಂದೋಬಸ್ತ್: ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಿ ಜಾತ್ರೆ ಮತ್ತು ವಿನೋಬನಗರ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆಯ ಸಂಬಂಧ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ಪೊಲೀಸ್ ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ.
4 ಕೆಎಸ್‌ಆರ್‌ಪಿ ತುಕಡಿಗಳು, 7 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ ವಿಶೇಷ ಗಸ್ತು ವಾಹನಗಳನ್ನು ನಿಯೋಜನೆ ಮಾಡಲಾಗಿದೆ. ಮತ್ತು ಪ್ರಾಣಿ ಬಲಿ ತಡೆಗೆ ಚೆಕ್ ಪೋಸ್ಟ್‌ಗಳನ್ನು ತೆರೆದ ನಿಗಾಕ್ಕಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಕೆ ಮಾಡಲಾಗಿದೆ. ನಗರದಾದ್ಯಂತ ಕಣ್ಗಾವಲು ಇರಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಜಾತ್ರಾ ಸಮಯದಲ್ಲಿ ನಗರದಲ್ಲಿ ಅಕ್ರಮ ಮದ್ಯ ಮಾರಾಟ, ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ರೌಡಿ ಮತೀಯ ಗೂಂಡ ಮತ್ತು ಎಂಬಿಗಳು ಜಾತ್ರೆ ಸಮಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸಿದಲ್ಲಿ ಕಟ್ಟು ನಿಟ್ಟಿನ ಕಾನೂನು ಕ್ರಮ ವಹಿಸಲಾಗುವುದು.
ಜಾತ್ರೆಗೆ ಆಗಮಿಸುವ ಮಹಿಳೆಯರಿಗೆ ಚುಡಾಯಿಸುವುದು, ಮಕ್ಕಳಿಗೆ ಕಿಚಾಯಿಸುವುದು ಮತ್ತು ಮದ್ಯ ಸೇವನೆ ಮಾಡಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮ ವಹಿಸಲಾಗುವುದು.
ಜಾತ್ರೆ ಸಂಬಂಧ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಪ್ರಚೋದನಕಾರಿ ಪೋಸ್ಟರ್‌ಗಳನ್ನು ಹಾಕುವುದಾಗಲೀ, ಸುಳ್ಳುಸುದ್ದಿ, ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಡುವುದಾಗಲಿ ಹಾಗೂ ಯಾವುದೇ ಧರ್ಮ, ವ್ಯಕ್ತಿಯ ವಿರುದ್ಧ ಅವಹೇಳನಕಾರಿ ಪೋಸ್ಟ್, ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು, ರವಾನಿಸುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಜಾತ್ರೆ ಸಂಬಂಧ ಸಾರ್ವಜನಿಕವಾಗಿ ಪ್ರಾಣಿ ಬಲಿ ಮಾಡಲು ಪ್ರಯತ್ನಿಸಿದ್ದಲ್ಲಿ ಅಂತವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ವಹಿಸಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಪಾರ್ಕಿಂಗ್ ಎಲ್ಲಿ ಮಾಡಬೇಕು?: ಜಾತ್ರೆಯ ಬಂದೋಬಸ್ತ್ ಪ್ರಯುಕ್ತ ದಾವಣಗೆರೆ ನಗರದಲ್ಲಿ ಒಮ್ಮುಖ ರಸ್ತೆಗಳನ್ನಾಗಿ ತಾತ್ಕಾಲಿಕವಾಗಿ ಮಾಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಸುಗಮ ಸಂಚಾರದ ಪ್ರಯುಕ್ತ ಹಳೇ ಪಿ.ಬಿ.ರಸ್ತೆಯ ಅರುಣಾ ಸರ್ಕಲ್‌ನಿಂದ ಹೊಂಡದ ಸರ್ಕಲ್‌ವರೆಗೆ, ಹೊಂಡದ ರಸ್ತೆ ಹಾಗೂ ಹೊಂಡದ ಸರ್ಕಲ್‌ನಿಂದ ಕೋರ್ಟ್ ಸರ್ಕಲ್‌ವರೆಗೆ, ಜಾಲಿನಗರ 2ನೇ ಮುಖ್ಯ ರಸ್ತೆ ಮತ್ತು ಶಿವಾಲಿ ರಸ್ತೆಗಳನ್ನು ಮಾರ್ಚ್ 18ರಿಂದ 21ರವರೆಗೆ ತಾತ್ಕಾಲಿಕವಾಗಿ ಒಮ್ಮುಖ ರಸ್ತೆಗಳನ್ನಾಗಿ ಮಾಡಲಾಗಿದೆ.
ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಗೆ ಬರುವ ಸಾರ್ವಜನಿಕರು ಅರುಣಾ ಸರ್ಕಲ್‌ನಿಂದ ಹೊಂಡದ ರಸ್ತೆ ಕಡೆಗೆ ಬಂದು, ಜಾಲಿನಗರ 2ನೇ ಮೇನ್ ರಸ್ತೆಯಿಂದ ಶಿವಾಲಿ ರಸ್ತೆಯ ಮೂಲಕ ಕೋರ್ಟ್ ಸರ್ಕಲ್ ಕಡೆಗೆ ಹೋಗಲು ಸೂಚಿಸಿದೆ. ಹಳೇ ಪಿಬಿ ರಸ್ತೆ ಕಡೆಯಿಂದ ಬರುವ ಭಕ್ತಾದಿಗಳು ಅರುಣ ಸರ್ಕಲ್ ಸಮೀಪದ ಹಳೇ ವಾಣಿ ಹೋಂಡ ಶೋ ರೂಂ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಿ ಅರುಣ ವೃತ್ತದಿಂದ ಹೊಂಡದ ವೃತ್ತದ ಮಾರ್ಗಾವಾಗಿ ಕಾಲು ನಡಿಗೆಯಲ್ಲಿ ದೇವರ ದರ್ಶನಕ್ಕೆ ತೆರಳಬೇಕು.
ಸಂಗೋಳ್ಳಿ ರಾಯಣ ವೃತ್ತದ ಮೂಲಕ ಆರ್.ಟಿ.ಓ ವೃತ್ತಕ್ಕೆ ಬಂದು ಬೂದಾಳ್ ರಸ್ತೆ ಮತ್ತು ಕೊಂಡಜ್ಜಿ ರಸ್ತೆಗೆ ಹೊಂದಿಕೊಂಡಂತೆ ಮಾಡಿರುವ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿ ಕಾಲು ನಡಿಗೆಯಲ್ಲಿ ದೇವರ ದರ್ಶನಕ್ಕೆ ತೆರಳಲು ವ್ಯವಸ್ಥೆ ಮಾಡಲಾಗಿದೆ.
ಈ ಕೆಳಕಂಡ ಸ್ಥಳಗಳಲ್ಲಿ ವಾಹನ ನಿಲುಗಡೆ: ದುರ್ಗಾಂಬಿಕ ಕಾಂಪ್ಲೆಕ್ಸ್ ಕೊಂಡಜ್ಜಿ ರಸ್ತೆ, ದುರ್ಗಾಂಬಿಕ ಶಾಲೆಯ ಆವರಣದ ಒಳಭಾಗದಲ್ಲಿ, ಜಾಲಿನಗರ ರಸ್ತೆ , ಹೊಂಡದ ವ್ಯತ್ತ ಹತ್ತಿರ, ಎಂಎನ್‌ಸಿ ಕಾನ್ವೆಂಟ್ ಸ್ಕೂಲ್ ಮುಂಭಾಗ ಕೊಂಡಜ್ಜಿ ರಸ್ತೆ, ದುರ್ಗಾಂಬಿಕಾ ಮೈದಾನ (ಕಾಂಪೌಂಡ್ ಹಾಕಿರುವ ಖಾಲಿ ಜಾಗ) ಬೂದಾಳ್ ರಸ್ತೆ, ಇಂದಿರಾ ಕ್ಯಾಂಟಿನ್ ಹತ್ತಿರ, ಫ್ರೆಶ್ ಬೇಕರಿ ಎದುರು ಗೌರಸಂದ್ರ ಮಾರಮ್ಮ ದೇವಾಸ್ಥಾನ ರಸ್ತೆ (ಬೂದಾಳ್ ರಿಂಗ್ ರೋಡ್ ಸಮೀಪ)ಯಲ್ಲಿ ವಾಹಗಳ ನಿಲುಗಡೆ ಮಾಡಬಹುದಾಗಿದೆ.
ಅನ್ನಪೂರ್ಣ ಲ್ಯಾಬ್ ಮುಂಭಾಗ , ಮುರುಘರಾಜೇಂದ್ರ ಶಾಲೆ ಬಳಿ, ಚೌಡೇಶ್ವರಿ ದೇವಾಸ್ಥಾನ ಮೈದಾನ , ಶಿವ ನಗರ , ಕೈಲಾಸ ರಸ್ತೆಯಲ್ಲಿ ವಾಹಗಳ ನಿಲುಗಡೆ ಮಾಡಬಹುದಾಗಿದೆ.
ವಿವಿಐಪಿ ವಾಹನಗಳ ಪಾರ್ಕಿಂಗ್: ಖಡಕ್ ಷಾ ವಲಿ ದರ್ಗಾ ಸಮೀಪ (ದುರ್ಗಮ್ಮ ದೇವಾಸ್ಥಾನದ ಸಮೀಪ), ಕಾಳಿಕಾದೇವಿ ದೇವಾಸ್ಥಾನದ ಮುಂಭಾಗ (ಹಗೆದಿಬ್ಬ ವೃತ್ತದ ಸಮೀಪ), ದೇವರಾಜ್ ಅರಸ್ ಬಡಾವಣೆ ಮೈದಾನ, ಸ್ವಿಮ್ಮಿಂಗ್ ಫೂಲ್.
ದ್ವಿ ಚಕ್ರ ವಾಹನಗಳು ದ್ವಿ ಚಕ್ರ ವಾಹನಗಳು ನಾಲ್ಕು ಚಕ್ರ ವಾಹನಗಳು ಹಳೇ ವಾಣಿಹೊಂಡ ಶೋ ರೂಂ ಪಕ್ಕದ ಖಾಲಿ ಜಾಗ, ವಿಶ್ವ ಭಾರತಿ ವಿದ್ಯಾಪೀಠದ ಹತ್ತಿರ ಖಾಲಿ ಜಾಗ, ನಲ್ಲೂರು ಶಾಂತರಾಮ್ ರಸ್ತೆ, ಎಂಸಿಸಿ ಎ ಬ್ಲಾಕ್, ಜಿಯೋ ಅಫೀಸ್ ಹತ್ತಿರದ ಖಾಲಿ ಜಾಗ, ನಲ್ಲೂರು ಶಾಂತರಾಮ್ ರಸ್ತೆ, ಎಂಸಿಸಿ ಎ ಬ್ಲಾಕ್‌ನಲ್ಲಿ ನಿಲುಗಡೆ ಮಾಡಬಹುದಾಗಿದೆ.
-
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ












Click it and Unblock the Notifications