• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಳನೇ ವೇತನ ಆಯೋಗ ರಚನೆಗೆ ನಿರ್ಧಾರ: ದಾವಣಗೆರೆಯಲ್ಲಿ ಸಿಎಂ ಬೊಮ್ಮಾಯಿ ಘೋಷಣೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್‌, 09: ಏಳನೇ ವೇತನ ಆಯೋಗ ರಚನೆ ಮಾಡಲು ತೀರ್ಮಾನ ಮಾಡಿದ್ದೇವೆ. ನಿವೃತ್ತ ಮುಖ್ಯ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ನೇತೃತ್ವದಲ್ಲಿ ಏಳನೇ‌ ವೇತನ ಆಯೋಗ ರಚನೆ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಣಗೆರೆಯಲ್ಲಿ ತಿಳಿಸಿದರು.

ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಏಳು ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ. ಶೇಕಡಾ 80ರಷ್ಟು ಬೆಂಗಳೂರು ಹೊರತುಪಡಿಸಿ ಹೂಡಿಕೆ ಆಗುತ್ತದೆ. ಹುಬ್ಬಳ್ಳಿ, ಧಾರವಾಡ, ಮಂಗಳೂರು, ಮೈಸೂರು, ದಾವಣಗೆರೆ, ಬೀದರ್ ಸೇರಿದಂತೆ 13 ಜಿಲ್ಲೆಗಳಲ್ಲಿ ಹೂಡಿಕೆ ಆಗಲಿದೆ. ಪ್ರಾದೇಶಿಕತೆಗೆ ಅನುಗುಣವಾಗಿ ಕೈಗಾರಿಕೆಗಳು ಬರುತ್ತವೆ ಎಂದು ತಿಳಿಸಿದರು.

ಚಂದ್ರು ಸಾವು: ಶಾಸಕ ರೇಣುಕಾಚಾರ್ಯ ನಿವಾಸಕ್ಕೆ ಅ.9ರಂದು ಸಿಎಂ ಬೊಮ್ಮಾಯಿ ಭೇಟಿಚಂದ್ರು ಸಾವು: ಶಾಸಕ ರೇಣುಕಾಚಾರ್ಯ ನಿವಾಸಕ್ಕೆ ಅ.9ರಂದು ಸಿಎಂ ಬೊಮ್ಮಾಯಿ ಭೇಟಿ

ಜಕಾತಿ ಸಂಗ್ರಹಕ್ಕೆ ಟೆಂಡರ್ ನೀಡಲು 3 ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆ ದಾವಣಗೆರೆ ಮಹಾನಗರ ಪಾಲಿಕೆ ವ್ಯವಸ್ಥಾಪಕ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ವ್ಯವಸ್ಥಾಪಕ ಹಾಗೂ ಗುತ್ತಿಗೆದಾರ ಕೃಷ್ಣಪ್ಪ ನಡುವಿನ ಆಡಿಯೋ ಸಂಭಾಷಣೆಯಲ್ಲಿ ಸಚಿವ ಬೈರತಿ ಬಸವರಾಜ್ ಅವರಿಗೆ 15 ಲಕ್ಷ ರೂಪಾಯಿ ಹಣ ಸಂದಾಯವಾಗಿದೆ ಎಂಬ ಆರೋಪವೂ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ ಅವರು, "ವಿರೋಧ ಪಕ್ಷಗಳು ವಿನಾಕಾರಣ ಆರೋಪ ಮಾಡುತ್ತಿರುವುದು ರೂಢಿ ಆಗಿದೆ. ಈಗಾಗಲೇ‌ ಲೋಕಾಯುಕ್ತ ತನಿಖೆಯಡಿ ಬಂದಿದೆ. ಲೋಕಾಯುಕ್ತ ಪೊಲೀಸರು ದಾಳಿ ಮಾಡಿದಾಗ ಆರೋಪಿ ಹೇಳಿಕೆ‌ ಸಮೇತ ತನಿಖೆ ಆಗುತ್ತದೆ. ಯಾರೇ ತಪ್ಪಿತಸ್ಥರು ಇದ್ದರೂ ತನಿಖೆಯಿಂದ ತಿಳಿದು ಬರುತ್ತದೆ," ಎಂದರು.

ಸತೀಶ್ ಜಾರಕಿಹೊಳಿ ವಿರುದ್ಧ ಸಿಎಂ ಆಕ್ರೋಶ

ಸತೀಶ್ ಜಾರಕಿಹೊಳಿ ವಿರುದ್ಧ ಸಿಎಂ ಆಕ್ರೋಶ

ಇನ್ನು ಹಿಂದು ಪದ ಅಶ್ಲೀಲ ಎಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಯಾವುದೋ ಒಂದು ಪುಸ್ತಕ, ವಿಕಿಪೀಡಿಯಾ ಉಲ್ಲೇಖಿಸಿ ಮಾತನಾಡಿದ್ದಾರೆ. ವಿಕಿಪೀಡಿಯಾ ವಿಶ್ವಾಸಾರ್ಹತೆ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸಾಕಷ್ಟು ಕೇಸ್ ಆಗಿ ಮುಖ್ಯಸ್ಥ ಜೈಲಲ್ಲಿ ಇದ್ದು ಬಂದವರಾಗಿದ್ದಾರೆ. ಅಂತಹವರ ವಿಚಾರ ನಂಬಿಕೊಂಡು ಪ್ರತಿಪಾದಿಸುತ್ತಾರೆ ಎಂದರೆ ನಾನು ಏನು ಹೇಳಲು ಆಗುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಸಭೆ, ಸಮಾವೇಶದಲ್ಲಿ‌ ಸತೀಶ್ ಜಾರಕಿಹೊಳಿ ಇಂತಹ ಮಾತನಾಡಿಲ್ಲ. ಬಹಿರಂಗ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್ ಈ ರೀತಿಯಾಗಿ ವರ್ತಿಸುವುದು ಸರಿಯಲ್ಲ. ಕಾಂಗ್ರೆಸ್ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಲಿ. ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲದಕ್ಕೂ ಪ್ರತಿಕ್ರಿಯೆ ನೀಡುತ್ತಾರೆ. ಇದಕ್ಕೆ ಯಾಕೆ ಸಿದ್ದರಾಮಯ್ಯರ ಪ್ರತಿಕ್ರಿಯಿಸುತ್ತಿಲ್ಲ? ಎಂದು ಪ್ರಶ್ನಿಸಿದರು‌. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುವುದಿಲ್ಲ. ಪದೇ ಪದೇ ಈ ವಿಚಾರ ಯಾಕೆ ಕೇಳುತ್ತೀರಾ. ದಾವಣಗೆರೆಯಲ್ಲಿ ಈ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ದಾವಣಗೆರೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಪುನರುಚ್ಚರಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಸಹೋದರ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣ ಕುರಿತಂತೆ ಎಲ್ಲಾ ಆಯಾಮದಲ್ಲಿಯೂ ಸಮಗ್ರ ತನಿಖೆ ನಡೆಸುವಂತೆ ಸೂಚನೆ‌ ನೀಡಿದ್ದೇನೆ. ಗೌರಿಗದ್ದೆಯಿಂದ ಹೊನ್ನಾಳಿಯ ಹೆಚ್. ಕಡದಕಟ್ಟೆಯವರೆಗೆ ಚಂದ್ರು ಬರುವವರೆಗಿನ ಘಟನೆ ಮರುಸೃಷ್ಟಿಸಿ ತನಿಖೆ ಮಾಡಲಾಗುವುದು. ಮರಣೋತ್ತರ, ಎಫ್‌ಎಸ್ಎಲ್ ವರದಿ ಬರುವವರೆಗೆ ಸ್ಪಷ್ಪತೆ ನೀಡಲು ಆಗುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಇನ್ನೆರಡು ದಿನಗಳಲ್ಲಿ ಎಫ್‌ಎಸ್‌ಎಲ್ ವರದಿ

ಇನ್ನೆರಡು ದಿನಗಳಲ್ಲಿ ಎಫ್‌ಎಸ್‌ಎಲ್ ವರದಿ

ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಸಂಪೂರ್ಣ ತನಿಖೆ ಮುಗಿಯುವವರೆಗೂ ಯಾವುದೇ ಅಂತಿಮ ತೀರ್ಮಾನಕ್ಕೆ ಬರುವುದು ಬೇಡ. ಚಂದ್ರು ಜನಪ್ರಿಯತೆ ನೋಡಿದರೆ ಕೊಲೆ ಆಗಿರಬಹುದು ಎಂಬ ಅನುಮಾನ ಕಾಡುತ್ತದೆ. ಕಾರು ಬಿದ್ದಿರುವ ಸ್ಥಳ ನೋಡಿದರೆ ಅಪಘಾತದಂತೆ ಕಾಣುತ್ತದೆ. ಕೊಲೆ ಹಾಗೂ ಅಪಘಾತ ಕುರಿತಂತೆ ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ಎಫ್‌ಎಸ್‌ಎಲ್ ವರದಿ ಬರುತ್ತದೆ. ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ವರದಿ ಪೊಲೀಸರ ಕೈ ಸೇರಿದ ಬಳಿಕ ತನಿಖೆ ಮತ್ತಷ್ಟು ವೇಗ ಪಡೆಯುತ್ತದೆ. ಘಟನೆಯ ಬಗ್ಗೆ ಇಂಚಿಂಚೂ ಪರಿಶೀಲಿಸಿ ತನಿಖೆ ನಡೆಸುವಂತೆ ಹೇಳಿದ್ದೇನೆ. ಚಂದ್ರಶೇಖರ್ ಮೃತದೇಹದ ಶ್ವಾಸಕೋಶದಲ್ಲಿ‌ ನೀರು ಪತ್ತೆಯಾಗಿದೆ ಎಂದರು.

ಮಾಹಿತಿ ಕಲೆ ಹಾಕುವಂತೆ ಸೂಚನೆ

ಮಾಹಿತಿ ಕಲೆ ಹಾಕುವಂತೆ ಸೂಚನೆ

ಚಂದ್ರಶೇಖರ್ ಸಾವಿನ ಬಗ್ಗೆ ಊಹಾಪೋಹ ಬೇಡ. ಸಾಕ್ಷ್ಯಗಳನ್ನು ಕಲೆ ಹಾಕಬೇಕು. ಕಾರಿನ ಮುಂದೆ ಗ್ಲಾಸ್ ಹೊಡೆದಿದೆ. ಡ್ಯಾಶ್ ಬೋರ್ಡ್ ಹೊಡೆದಿದೆ. ಕಾರು ಜಖಂ ಆಗಿರುವುದು ನೋಡಿದರೆ ಅಪಘಾತದಂತೆ ಕಾಣುತ್ತದೆ. ಚಂದ್ರಶೇಖರ್ ಅವರು ಕೊಪ್ಪ ತಾಲೂಕಿನ ಗೌರಿಗದ್ದೆಗೆ ಹೋಗಿ ವಾಪಸ್ ಬರುವವರೆಗೆ ಏನೆಲ್ಲಾ ಆಗಿರಬಹುದು ಎಂಬ ಮಾಹಿತಿ ಕಲೆ ಹಾಕುವಂತೆ ಹೇಳಿದ್ದು, ಇದು ಸಿಕ್ಕ ಬಳಿಕ ಒಂದು ಹಂತಕ್ಕೆ ಪ್ರಕರಣ ಬರುತ್ತದೆ. ಆಗ ಯಾವ ಆಯಾಮ, ಯಾವ ದಿಕ್ಕಿನಲ್ಲಿ ತನಿಖೆ ಮಾಡಬೇಕು ಎನ್ನುವ ನಿರ್ಧಾರಕ್ಕೆ ಪೊಲೀಸರು ಬರುತ್ತಾರೆ ಎಂದರು.

English summary
We decided to seventh pay commission. Chief Minister Basavaraj Bommai said in Davangere Seventh Pay Commission will be under leadership of retired Chief Secretary Sudhakar Rao. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X