1.5 ವರ್ಷಕ್ಕೆ ಲೋಕ ಮೆಚ್ಚುವ ಸಾಧನೆ: ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿದ ದಾವಣಗೆರೆಯ ಪುಟ್ಟ ಕಂದ

ದಾವಣಗೆರೆ ಆಗಸ್ಟ್‌ 22: ಸುಮಾರು 20 ದೇಶಗಳ ಧ್ವಜಗಳು, 25 ಕ್ಕೂ ಹೆಚ್ಚು ಪಕ್ಷಿಗಳು, 25 ಕ್ಕೂ ಅಧಿಕ ತರಕಾರಿಗಳು 30 ಕ್ಕೂ ಅಧಿಕ ಪ್ರಾಣಿಗಳು 18 ಹೆಸರಾಂತ ಪರ್ವತಗಳು, ಪ್ರಾಣಿಗಳು ಹಾಗೂ ವರ್ಣಮಾಲೆಗಳನ್ನ ಗುರುತಿಸುವಲ್ಲಿ ದಾವಣಗೆರೆಯ 1 ವರ್ಷ 3 ತಿಂಗಳ ಕಂದ ನಿಪುಣನಾಗಿದ್ದಾನೆ. ಸದ್ಯ ಈ ಕಾರಣಕ್ಕೆ ದೇಶ ಮೆಚ್ಚುವ ಸಾಧನೆ ಮಾಡಿದ್ದಾನೆ.

ಈಗ ತಾನೆ ಪ್ರಪಂಚದ ಜ್ಞಾನಕ್ಕಾಗಿ ಹಂಬಲಿಸುತ್ತಿರುವ ಪುಟ್ಟ ಪೊರ. ದೇಶವೇ ಮೆಚ್ಚುವ ಸಾಧನೆ ಮಾಡಿದ್ದಾನೆ. ಕೇವಲ 1 ವರ್ಷ ಮೂರು ತಿಂಗಳಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆ ಆಗಿದ್ದಾನೆ. ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಕಾಂಗ್ರೆಸ್ ಮುಖಂಡ, ಗ್ರಾಮ ಪಂಚಾಯಿತಿ ಸದಸ್ಯ ಗುಡ್ಡಣ್ಣ ಗೀತಾ ದಂಪತಿಯ ಮೊಮ್ಮಗ ಮನ್ವಿತ್ ಸಿ.ಎಸ್ ಈ ಅಪ್ರತಿಮ ಸಾಧನೆ ಮಾಡಿದ್ದಾನೆ.

Davangeres 1.5-Year-Old Toddler Entered The India Book Of Records

ಮನ್ವಿತ್ ತಾಯಿ ಸೌಮ್ಯಶ್ರೀ ಜಿ. ಹಾಗೂ ತಂದೆ ಚೇತನ್ ಎಂ. ಈ ದಂಪತಿ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿಯರ್. ಮನೆಯಲ್ಲಿದ್ದ ಸಂದರ್ಭದಲ್ಲಿ ತನ್ನ ಮಗ ಮನ್ವಿತ್‍ಗೆ ಸಾಮನ್ಯ ಜ್ಞಾನದ ಬಗ್ಗೆ ಹೇಳಿಕೊಟ್ಟಿದ್ದಾರೆ. ಇನ್ನೂ ಮಾತು ಬರುವ ಸಂದರ್ಭದಲ್ಲೇ ಮನ್ವಿತ್ ಅಪಾರ ಜ್ಞಾಪಕ ಶಕ್ತಿ ಹೊಂದಿದ್ದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿದ್ದಾನೆ.

ಈತನ ಬುದ್ಧಿಶಕ್ತಿ ಹಾಗೂ ನೆನಪಿನ ಶಕ್ತಿ ಗುರುತಿಸಿದ ಈತನ ಪೋಷಕರು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಶಿಫಾರಸ್ಸು ಮಾಡಿದ್ದರು. ಇದೀಗ ಮನ್ವಿತ್ ಈ ಸಾಧನೆಯನ್ನು ರೆಕಾರ್ಡ್ ಎಂದು ಘೋಷಣೆ ಮಾಡಿ ಪ್ರಮಾಣ ಪತ್ರವನ್ನು ನೀಡಿದ್ದಾರೆ.

Davangeres 1.5-Year-Old Toddler Entered The India Book Of Records

ಈ ಪುಟ್ಟ ಪೋರನ ಸಾಧನೆ ಮೆಚ್ಚಿ ಶಾಸಕ ಬಸವರಾಜು ವಿ. ಶಿವಗಂಗಾ ಸೇರಿದಂತೆ ಗ್ರಾಮದ ಮುಖಂಡರು ಸನ್ಮಾನಿಸಿ ಅಭಿನಂಧನೆ ಸಲ್ಲಿಸಿ ಶುಭಕೋರಿದ್ದಾರೆ. ಆಡುವ ವಯಸ್ಸಲ್ಲೇ ದೊಡ್ಡ ಸಾಧನೆ ಮಾಡಿದ ಈ ಬಾಲಕ ಮುಂದೆಯೇ ಹೆಚ್ಚು ಸಾಧನೆ ಮಾಡಲಿ ಎನ್ನುವುದು ಎಲ್ಲರ ಆಶಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+