ದಾವಣಗೆರೆಯಲ್ಲಿ ಊಟವಿಲ್ಲದೇ ಪರದಾಡುತ್ತಿದ್ದ ವೃದ್ಧೆ ಸಹಾಯಕ್ಕೆ ಬಂದ ಡಿಸಿ

ದಾವಣಗೆರೆ, ಏಪ್ರಿಲ್ 11: ದಾವಣಗೆರೆಯ ಯಲ್ಲಮ್ಮ ನಗರದಲ್ಲಿ ಹದಿನೈದು ದಿನಗಳಿಂದ ಊಟ ಸಿಗದೇ ಪರದಾಡುತ್ತಿದ್ದ ವೃದ್ಧೆ ಪಕೀರಮ್ಮ ಹಾಗೂ ಮಗ ಇದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಎಸ್ ಪಿ ಹನುಮಂತರಾಯ ಭೇಟಿ ನೀಡಿ ಆಹಾರ ಕಿಟ್ ವಿತರಿಸಿದರು.

ಲಾಕ್ ಡೌನ್ ನಿಂದಾಗಿ ಹದಿನೈದು ದಿನಗಳಿಂದ ಸರಿಯಾಗಿ ಆಹಾರವಿಲ್ಲದೇ ಇಬ್ಬರೂ ಪರಿತಪಿಸುತ್ತಿದ್ದರು. ಮಗ ಪಾರ್ಶ್ವವಾಯು ಪೀಡಿತನಾಗಿದ್ದು, ಪಕೀರಮ್ಮ ಮನೆಗೆಲಸ ಮಾಡಿಕೊಂಡು ಮಗನನ್ನು ಸಾಕುತ್ತಿದ್ದರು. ಆದರೆ ಲಾಕ್ ಡೌನ್ ಆದಾಗಿನಿಂದ ಕೆಲಸಕ್ಕೆ ಹೋಗಲು ಆಗದೇ, ಆಹಾರವೂ ಸಿಗದೇ ಒದ್ದಾಡುತ್ತಿದ್ದರು.

Davangere Came To Help Old Mother And Son

ಈ ವಿಷಯ ಗಮನಕ್ಕೆ ಬಂದ ನಂತರ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಸ್ಥಳಕ್ಕೆ ಬಂದು ಆಹಾರ ನೀಡಿದ್ದಾರೆ. ಅಲ್ಲದೇ, ವೃದ್ಧೆ ಹಾಗೂ ಆಕೆಯ ಮಗನಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಸರೆ ಕಲ್ಪಿಸಿದ್ದಾರೆ. ಸ್ಥಳದಿಂದಲೇ ಅಧಿಕಾರಿಗಳಿಗೆ ಕರೆ ಮಾಡಿ ಜಿಲ್ಲಾಧಿಕಾರಿಗಳು ತರಾಟೆಗೆ ತೆಗೆದುಕೊಂಡರು.

ಕೂಡಲೇ ತಾಯಿ ಮತ್ತು ಮಗನನ್ನು ನಿರಾಶ್ರಿತರ ಕೇಂದ್ರಕ್ಕೆ ಕರೆದೊಯ್ಯುವಂತೆ ಆದೇಶಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+