ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರು ಚಾಲಕನ ಚಾಲಾಕಿತನ ನೋಡಿ ಬೆಚ್ಚಿಬಿದ್ದ ಪೊಲೀಸರು!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 28; ಬಾಡಿಗೆ ಹಣದ ಆಮೀಷವೊಡ್ಡಿ ಕಾರು ಪಡೆದು, ಬಳಿಕ ಹಣಕ್ಕೆ ಒತ್ತೆಯಿಟ್ಟು ಮೋಜು ಮಸ್ತಿ ಮಾಡಿ ಮಾಲೀಕರಿಗೆ ಚಾಲಾಕಿ ಚಾಲಕನೊಬ್ಬ ವಂಚಿಸಿರುವ ಘಟನೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.

ಒಬ್ಬರು, ಇಬ್ಬರಲ್ಲ ಬರೋಬ್ಬರಿ 25ಕ್ಕೂ ಹೆಚ್ಚು ಮಂದಿಗೆ ವಂಚಿಸಿರುವ ಈತನ ಹೆಸರು ಅರ್ಜುನ್. ಈತ ವೃತ್ತಿಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ಕಾರು ಮಾಲೀಕರು ಪರಿಚಯವಿದ್ದರು. ಇದನ್ನು ಬಂಡವಾಳವನ್ನಾಗಿ ಮಾಡಿಕೊಂಡ ಅರ್ಜುನ್ ಹಲವರಿಗೆ ಮೋಸ ಮಾಡಿರುವುದು ಪತ್ತೆಯಾಗಿದ್ದು, ಆತನ ಬಲೆಗೆ ಕೆಟಿಜೆ ನಗರ ಪೊಲೀಸರು ಬಲೆ ಬೀಸಿದ್ದಾರೆ.

ದಾವಣಗೆರೆ; ರೈತರು, ವರ್ತಕರಿಗೆ ವಂಚನೆ, 2 ಕೋಟಿ ಪೊಲೀಸರ ವಶಕ್ಕೆ! ದಾವಣಗೆರೆ; ರೈತರು, ವರ್ತಕರಿಗೆ ವಂಚನೆ, 2 ಕೋಟಿ ಪೊಲೀಸರ ವಶಕ್ಕೆ!

ಪೆಟ್ರೋಲ್, ಡೀಸೆಲ್ ರೇಟ್ ದಿನೇ ದಿನೇ ಗಗನಕ್ಕೇರುತ್ತಿದೆ. ಹೆಗಪ್ಪಾ ಕಾರಲ್ಲಿ ಹೋಗೋದು?, ಎಲ್ಲಿಗಾದರೂ ಹೊರಟರೆ ಹಣ ಎಲ್ಲಿಂದ ತರಬೇಕು? ಎಂಬುದು ಕಾರು ಹೊಂದಿರುವ ಮಾಲೀಕರು ಹೇಳುವ ಮಾತು. ಅದೇ ತಿಂಗಳಿಗೆ 25 ಸಾವಿರ ರೂಪಾಯಿ ಬಾಡಿಗೆ ಸಿಗುತ್ತದೆ ಅಂದರೆ ಬಿಡುತ್ತಾರಾ?.

 ಕೆಎಸ್‌ಆರ್‌ಟಿಸಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ; ಆರೋಪಿಗಳ ಬಂಧನ ಕೆಎಸ್‌ಆರ್‌ಟಿಸಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ; ಆರೋಪಿಗಳ ಬಂಧನ

Car Driver Cheated People By Taking Car For Rent Davanagere Police Probing Case

ಮೊದಲು ಕೊಡೋಣ ಕೊರೊನಾ ಸೋಂಕು, ಲಾಕ್‌ಡೌನ್‌ ನಿಂದ ಸಾಕು ಸಾಕಾಗಿ ಹೋಗಿದೆ ಎಂಬ ಉದ್ಘಾರ ಬರುವುದು ಸಾಮಾನ್ಯ. ಆದರೆ ಈತ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ವಂಚನೆ ಮಾಡಿರುವ ಪ್ರಕರಣಗಳು ಒಂದೊಂದಾಗಿಯೇ ಬಯಲಿಗೆ ಬರುತ್ತಿವೆ.

ಸಚಿವ ಈಶ್ವರಪ್ಪ ಹೆಸರಿನಲ್ಲಿ ಲಕ್ಷ-ಲಕ್ಷ ಹಣ ಪಡೆದು ವಂಚನೆ ಸಚಿವ ಈಶ್ವರಪ್ಪ ಹೆಸರಿನಲ್ಲಿ ಲಕ್ಷ-ಲಕ್ಷ ಹಣ ಪಡೆದು ವಂಚನೆ

ಈತ ಪಂಗನಾಮ ಹಾಕಿರುವುದು ಕೇಳಿದರೆ ಬೆರಗಾಗುವುದು ಖಚಿತ. ಯಾಕೆಂದರೆ ಈತ ಹಲವಾರು ಮಂದಿಯ ಕಾರು ಪಡೆದು ಬಳಿಕ ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಬಾಡಿಗೆಗೆ ಬಿಟ್ಟಿದ್ದೇನೆ. ತಿಂಗಳಿಗೆ 20 ಸಾವಿರ ರೂಪಾಯಿ ಬಾಡಿಗೆ ಕೊಡುತ್ತೇನೆ ಎಂದು ಪುಸಲಾಯಿಸಿ ಕಾರು ತೆಗೆದುಕೊಂಡು ಹೋಗಿದ್ದಾನೆ.

ಈತನನ್ನು ನಂಬಿದ್ದ ಕೆಲವರು ಕಾರು ಕೊಟ್ಟಿದ್ದಾರೆ. ಆದರೆ ಈಗ ಕಾರು ಮಾಲೀಕರು ಕೈಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಜೊತೆಗೆ ಪಂಗನಾಮ ಹಾಕಿದವನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮಾತ್ರವಲ್ಲ, ಮೊದ ಮೊದಲು ಸರಿಯಾಗಿ ಬಾಡಿಗೆ ಹಣ ಕೊಟ್ಟು ನಂಬಿಕೆ ಗಿಟ್ಟಿಸುತ್ತಿದ್ದ. ಆ ಬಳಿಕ ಆತನೂ ಇಲ್ಲ, ಬಾಡಿಗೆಯೂ ಇಲ್ಲ, ಕಾರೂ ಪತ್ತೆಯಿಲ್ಲ. ಇದು ಮಾಲೀಕರಿಗೆ ಆತಂಕ ತಂದಿತ್ತು.

ಈ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಕಾರ್ಯಾಚರಣೆಗೆ ಇಳಿದಿದ್ದು, ಸುಮಾರು 21ಕ್ಕೂ ಹೆಚ್ಚು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಹೈಫೈ ಕಾರುಗಳ ಜೊತೆಗೆ ಕಡಿಮೆ ಮೌಲ್ಯದ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಕೆಟಿಜೆ ನಗರ ಪೊಲೀಸ್ ಠಾಣೆಯ ಪಕ್ಕದ ಶಾಲೆಯ ಆವರಣದಲ್ಲಿ ಕಾರುಗಳನ್ನು ಸಾಲು ಸಾಲಾಗಿ ನಿಲ್ಲಿಸಲಾಗಿದೆ. ಇವೆಲ್ಲಾ ಅರ್ಜುನ್ ಎಂಬಾತ ಮೋಸ ಮಾಡಿ ಮಾರಾಟ ಮಾಡಿದ ಕಾರುಗಳು. ಈಗಾಗಲೇ 21ಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಇಲ್ಲಿಯೇ ನಿಲ್ಲಿಸಿದ್ದಾರೆ.

ಠಾಣೆಗೆ ಕಾರುಗಳ ಮಾಲೀಕರು ಒಬ್ಬೊಬ್ಬರಾಗಿ ಬರುತ್ತಿದ್ದು, ಇದು ನಮ್ಮದೇ ಕಾರು, ಬಾಡಿಗೆಗೆ ಬಿಟ್ಟಿದ್ದೆವು ಎಂದು ಹೇಳತೊಡಗಿದ್ದಾರೆ. ಮಾತ್ರವಲ್ಲ, ಇನ್ನು ಹಲವೆಡೆ ಅರ್ಜುನ್ ಇದೇ ರೀತಿಯ ಕುಕೃತ್ಯ ಮಾಡಿರುವುದು ಬೆಳಕಿಗೆ ಬರುತ್ತಿದೆ.

ಅರ್ಜುನ್ ಮೊದ ಮೊದಲು ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಕಂಪೆನಿಗಳಿಗೆ ಕಾರು ಬಾಡಿಗೆ ಬಿಟ್ಟರೆ ಹಣ ಸಿಗುತ್ತದೆ. ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸುವ ಅವಶ್ಯಕತೆ ಬೀಳಲ್ಲ. ಯಾವ ರಿಸ್ಕ್ ಇಲ್ಲದೇ 20 ಸಾವಿರ ರೂಪಾಯಿ ತಿಂಗಳಿಗೆ ಆದಾಯ ಬರುತ್ತೆ ಎಂಬ ಬಣ್ಣಬಣ್ಣದ ಮಾತುಗಳನ್ನು ಆಡಿದ್ದಾನೆ. ಇದನ್ನೇ ನಂಬಿ ಕೆಲವರು ಕಾರು ಬಾಡಿಗೆಗೆ ಕೊಡು ಎಂದು ಕೊಟ್ಟಿದ್ದಾರೆ.

ಈತ ಮಾತ್ರ ಮಾಡಿದ್ದು ಬೇರೆನೇ. ಮೊದಲ ತಿಂಗಳು ಕಾರು ಮಾಲೀಕರಿಗೆ ಹಣ ಸರಿಯಾಗಿಯೇ ನೀಡಿದ್ದಾನೆ. ಇದರಿಂದ ಮಾಲೀಕರಿಗೂ ನಂಬಿಕೆ ಬಂದಿದೆ. ಜೊತೆಗೆ ಕಾರು ಚಾಲಕ ಆದ ಕಾರಣ ಕಂಪನಿಗಳಿಗೆ ನೀಡಿರಬಹುದು ಎಂದುಕೊಂಡು ಕೊಟ್ಟಿದ್ದಾರೆ. ಆದರೆ ಈ ರೀತಿಯಾಗಿ ವಂಚನೆ ಮಾಡುತ್ತಾನೆ ಎಂಬ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಒಂದೊಂದೇ ಕಾರು ವಶಕ್ಕೆ ಪಡೆದು ಠಾಣೆಗೆ ತೆಗೆದುಕೊಂಡು ಬರುತ್ತಿರುವ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಪೊಲೀಸರ ಕೈಗೆ ಸಿಗದೇ ಅರ್ಜುನ್ ಪರಾರಿಯಾಗುತ್ತಿದ್ದಾನೆ.

ಅರ್ಜುನ್ ಹೀಗೆ ಪಡೆದ ಕಾರುಗಳನ್ನು ಹಣದಾಸೆಗೆ ಬಡ್ಡಿ ದುಡ್ಡಿಗೆ ಅಡವಿಟ್ಟು ಹೋಗುತ್ತಿದ್ದ. ಕಾರು ಮಾಲೀಕರಿಗೆ ಹಣ ಕೊಟ್ಟಿರುವುದರಿಂದ ಅವರು ತಲೆಕೆಡಿಸಿಕೊಂಡಿರಲಿಲ್ಲ. ಈಗ ಕಾರುಗಳ ಜಪ್ತಿ ವಿಚಾರ ತಿಳಿಯುತ್ತಿದ್ದಂತೆ ಮಾಲೀಕರು ಠಾಣೆಗೆ ಬರುತ್ತಿದ್ದು, ಇದು ನಮ್ಮ ಕಾರು, ಅದು ನಮ್ಮ ಕಾರು ಎನ್ನತೊಡಗಿದ್ದಾರೆ.

ಇದೇ ರೀತಿಯಲ್ಲಿ ಬೇರೆ ಬೇರೆ ಕಡೆಗಳಲ್ಲಿ ಅರ್ಜುನ್ ಮೋಸ ಮಾಡಿದ್ದಾನೆ ಎಂಬ ಮಾಹಿತಿ ಇದ್ದು, ಪೊಲೀಸರು ಈ ಆಯಾಮದಲ್ಲಿಯೂ ತನಿಖೆ ಮುಂದುವರಿಸಿದ್ದಾರೆ. ಮಾತ್ರವಲ್ಲ, ಈತ ಕೇವಲ ದಾವಣಗೆರೆಯಲ್ಲಿ ಮಾತ್ರ ಈ ರೀತಿ ಮಾಡಿದ್ದಾನೋ ಅಥವಾ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಮೋಸ ಮಾಡಿದ್ದಾನಾ? ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

ಇನ್ನು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾತನಾಡಿ, "ಈ ರೀತಿಯಾಗಿ ಮೋಸ ಮಾಡಿರುವುದು ಗೊತ್ತಾಗಿದೆ. ಕಾರುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಎಲ್ಲೆಲ್ಲೆ ಮೋಸ ಮಾಡಿದ್ದಾನೆ ಎಂಬ ಮಾಹಿತಿ ಇಲ್ಲ. ಆರೋಪಿ ಸಿಕ್ಕ ಬಳಿಕ ಸ್ಪಷ್ಟವಾಗಿ ಮಾಹಿತಿ ನೀಡಲಾಗುವುದು" ಎಂದು ತಿಳಿಸಿದ್ದಾರೆ.

English summary
Davanagere KTG Nagar police found that car driver cheated people by taking car for rent. Police searching for car driver Arjun.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X