ಜಗಳೂರು: ಕರ್ನಾಟಕ ಪೌರ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸಿ.ಚಿನ್ನಪ್ಪ ಆಯ್ಕೆ
ಜಗಳೂರು, ಮಾರ್ಚ್, 02: ಕರ್ನಾಟಕ ಪೌರ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಿನ್ನೆ (ಮಾರ್ಚ್ 1) ಚುನಾವಣೆ ನಡೆದಿದ್ದು, ಈ ವೇಳೆ ಸಿ.ಚಿನ್ನಪ್ಪ ಗೆಲುವು ಸಾಧಿಸಿದ್ದಾರೆ. ಬಳಿಕ ತಕ್ಷಣವೇ ಜಾರಿಗೆ ಬರುವಂತೆ ಜಗಳೂರು ಪಟ್ಟಣ ಪಂಚಾಯಿತಿ ಶಾಖೆಯ ನೂತನ ಅಧ್ಯಕ್ಷರಾಗಿ ಸಿ.ಚಿನ್ನಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಇವರಿಗೆ ಧನಂಜಯ.ಜಿ ಡಾ.ವಿಷ್ಣು ಸೇನಾ ಸಮಿತಿ ತಾಲೂಕು ಉಪಾಧ್ಯಕ್ಷರು ಜಗಳೂರು ಸೇರಿದಂತೆ ಮತ್ತಿತರರು ಶುಭಕೋರಿದ್ದಾರೆ.

ಚಿತ್ರದುರ್ಗದ 6 ಜನರಿಗೆ ಒಲಿದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ: ಸರ್ಕಾರದಿಂದ ನೇಮಕ ಮಾಡುವ ವಿವಿಧ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಕ್ಕೆ ಕೊನೆಗೂ ಅಂತ್ಯ ಕಂಡಿದೆ. 44 ಜನರನ್ನು ನಿಗಮ ಮಂಡಳಿಗೆ ನೇಮಕ ಮಾಡುವ ಮೂಲಕ ಸರ್ಕಾರ ಇದ್ದ ಗೊಂದಲಕ್ಕೆ ತೆರೆ ಎಳೆದಿದ್ದು, ಇತ್ತ ಕೋಟೆ ನಾಡು ಚಿತ್ರದುರ್ಗದ ಆರು ಮಂದಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸಿದೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ವಂಚಿತರಾಗಿದ್ದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್ ಬಾಬು ಅವರಿಗೆ ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಹೊಳಲ್ಕೆರೆಯ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಸವಿತಾ ರಘು ಅವರಿಗೆ ಕರ್ನಾಟಕ ಸಿಪಾಯಿ ಕರ್ಮಚಾರಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಜಿಎಸ್ ಮಂಜುನಾಥ್ ಅವರಿಗೆ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಸ್ಥಾನ, ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ತಾಜ್ ಪೀರ್ ಅವರಿಗೆ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಮುಂಡರಗಿ ನಾಗರಾಜ್ ಅವರಿಗೆ ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಧ್ಯಕ್ಷ ಸ್ಥಾನ, ಮೆಹಬೂಬ್ ಪಾಷಾ, ಕಂಠೀರವ ಸ್ಟುಡಿಯೋ ನೀಡಲಾಗಿದೆ. ಇದಕ್ಕೂ ಮೊದಲು ನಿಗಮ ಮಂಡಳಿ ಪಟ್ಟಿಯಲ್ಲಿ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಹಾಗೂ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡಲಾಗಿದೆ.












Click it and Unblock the Notifications