• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿ.ಕೆ.ಶಿವಕುಮಾರ್‌ ಗೆ ಹೊಸ ಹೆಸರು ನಾಮಕರಣ ಮಾಡಿದ ರೇಣುಕಾಚಾರ್ಯ

|

ದಾವಣಗೆರೆ, ಡಿಸೆಂಬರ್ 28: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಗೆ ಬಿಜೆಪಿ ಶಾಸಕ ರೇಣುಕಾಚಾರ್ಯ ಹೊಸ ಹೆಸರು ನಾಮಕರಣ ಮಾಡಿದ್ದಾರೆ.

ಏಷ್ಯಾದಲ್ಲಿ ಎತ್ತರದ ಏಸುವಿನ ಪ್ರತಿಮೆಯನ್ನು ಡಿ.ಕೆ.ಶಿವಕುಮಾರ್‌ ಕನಕಪುರದಲ್ಲಿ ನಿರ್ಮಾಮಿಸಲು ಶಿಲಾನ್ಯಾಸ ಮಾಡಿರುವ ಬಗ್ಗೆ ಟೀಕಿಸಿದ ರೇಣುಕಾಚಾರ್ಯ, 'ಇನ್ನು ಮುಂದೆ ಡಿ.ಕೆ.ಶಿವಕುಮಾರ್ ಅನ್ನು ಇನ್ನುಮುಂದೆ 'ಏಸುಕುಮಾರ' ಎಂದು ಕರೆಯಬೇಕು ಎಂದರು.

ಏಸು ಪ್ರತಿಮೆ ನಿರ್ಮಾಣವನ್ನು ತಡೆಯುವ ಹಠಕ್ಕೆ ಬಿದ್ದಂತಿರುವ ಬಿಜೆಪಿ, ಏಸು ಪ್ರತಿಮೆ ನಿರ್ಮಾಣ ಮಾಡುತ್ತಿರುವ ಸ್ಥಳವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಿಎಂ ಗೆ ಪತ್ರ ಬರೆದಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಏಸು ಪ್ರತಿಮೆಗೆ ಶಿಲಾನ್ಯಾಸ ಮಾಡಿರುವ ವಿಷಯವನ್ನು ಬಿಜೆಪಿ ನಾಯಕರು ಸತತವಾಗಿ ಟೀಕಿಸುತ್ತಿದ್ದು, ಸಿ.ಟಿ.ರವಿ, ಈಶ್ವರಪ್ಪ, ಅನಂತ್‌ಕುಮಾರ್ ಹೆಗಡೆ, ಬಿ.ವೈ.ವಿಜಯೇಂದ್ರ, ಭಗವಂತ ಖೂಬಾ ಸೇರಿದಂತೆ ಇನ್ನೂ ಹಲವು ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಬಿಜೆಪಿ ಮುಖಂಡರು ಡಿಕೆಶಿ ನಡೆಗೆ ಟೀಕಾಪ್ರಹಾರ ನಡೆಸುತ್ತಿದ್ದರೆ, "ನನ್ನ ಕ್ಷೇತ್ರದಲ್ಲಿ ಎಲ್ಲಾ ಜಾತಿಧರ್ಮದವರಿದ್ದಾರೆ. ಬಿಜೆಪಿಯಿಂದ ಪಾಠ ಕಲಿಯಬೇಕಾಗಿಲ್ಲ" ಎಂದು ಡಿ.ಕೆ.ಶಿವಕುಮಾರ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

English summary
BJP MLA Renukacharya critisize DK Shivakumar inaugurating Jesus statue. He said DK Shivakumar should change his name as 'Esu Kumara'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X