ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ: ಪ್ರತಿಭಟನೆ

Posted By:
Subscribe to Oneindia Kannada

ದಾವಣಗೆರೆ, ಜನವರಿ 11: ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ(ಚಿಗಟೇರಿ) ನಾಲ್ಕುತಿಂಗ ಮಗು ಮೃತವಾಗಿದ್ದು ಮಗು ಸಂಬಂಧಿಕರಿಂದ ವೈದ್ಯರ ಮೇಲೆ ಹಲ್ಲೆ ನಡೆದಿದೆ. ಜಿಲ್ಲಾಸ್ಪ್ರತ್ರೆ ಎದುರು ವೈದ್ಯರು ಪ್ರತಿಭಟನೆ ನಡೆಸಿದ್ದಾರೆ.

ದಾವಣಗೆರೆಯ ಅವರಗೆರೆ ನಿವಾಸಿಗಳು ನಾಲ್ಕು ತಿಂಗಳ ಮಗುವನ್ನು ಹಾಲು ಕುಡಿಯುತ್ತಿಲ್ಲ ಎಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿದ್ದು, ಶ್ವಾಸಸಂಬಂಧಿ ತೊಂದರೆಯಿಂದ ಮಗು ಬುಧವಾರ ಬೆಳಗ್ಗೆ 4 ಗಂಟೆ ವೇಳೆ ಮೃತವಾಗಿದೆ. ಆಕ್ರೋಶಗೊಂಡ ಮಗುವಿನ ಸಂಬಂಧಿಕರು ಆಸ್ಪತ್ರೆಯ ವೈದ್ಯರ ಕಪಾಳಕ್ಕೆ ಬಾರಿಸಿ ಹಲ್ಲೆ ಮಾಡಿದ್ದಾರೆ. ಸಿಬ್ಬಂದಿ ಮತ್ತು ನರ್ಸ್ ಗಳನ್ನು ಥಳಿಸಿದ್ದಾರೆ ಎನ್ನಲಾಗಿದೆ.[ವ್ಯಾಕ್, ಗಬ್ಬು ನಾರುತ್ತಿರುವ ಚಾಮರಾಜನಗರ ಜಿಲ್ಲಾಸ್ಪತ್ರೆ!]

Assault on a doctor in Davanagere District Hospital: Doctor's protest

ಮಗುವಿನ ಸಂಬಂಧಕರು ಐದಾರು ಜನರಿದ್ದು ರಾತ್ರಿ ಪಾಳಿಯಲ್ಲಿ ಮೂವರು ವೈದ್ಯರು ಇದ್ದರು ಮಗು ಅಸುನೀಗಿರುವ ಕುರಿತು ಸಂಬಂಧಿಕರು ಖಾಸಗಿ ಕೊಠಡಿಯಲ್ಲಿ ಓಡಾಡಿ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ವೈದ್ಯರು ತಮ್ಮ ಕರ್ತವ್ಯವನ್ನು ತ್ಯಜಿಸಿ ಜಿಲ್ಲಾ ಆಸ್ಪತ್ರೆ ಎದಿರು ಪ್ರತಿಭಟಿಸುತ್ತಿದ್ದಾರೆ ಎಂದು ದಾವಣಗೆರೆ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯೆ ಡಾ. ನಿಲಾಂಬಿಕೆ ತಿಳಿಸಿದರು.

Assault on a doctor in Davanagere District Hospital: Doctor's protest

ಮಗು ಕಳೆದುಕೊಂಡ ಆಕ್ರೋಶದಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ ದೃಶ್ಯಗಳು ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ ವೈದ್ಯರು ದಾವಣಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವೈದ್ಯರು ಈ ಕುರಿತು ತಮ್ಮ ಜೀವ ಭದ್ರತೆಗಾಗಿ ಪ್ರತಿಭಟಿಸುತ್ತಿದ್ದು ರೋಗಿಗಳನ್ನು ಯಾರು ಗಮನಿಸಬೇಕು ಎಂಬುದೇ ಪ್ರಶ್ನೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Assault on a doctor in Davanagere District Hospital. The four month child dead in hospital at 4 am Wednesday. The child relatives are hit the doctor's and Staff. Doctors protest agenest the life of the security in front of Hospital.
Please Wait while comments are loading...