ದಾವಣಗೆರೆ: ಜೂನ್ 15ರಂದು ಅಡಿಕೆ ದರ ಮತ್ತೆ ಏರಿಕೆ.!-ತಾಲೂಕುವಾರು ದರಗಳ ಅಂಕಿಅಂಶಗಳ ವಿವರ ತಿಳಿಯಿರಿ
Arecanut Price on June 15: ಅಡಿಕೆ ಬೆಯಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದರೆ, ಇಳಿಕೆಯತ್ತ ಸಾಗಿದ್ದ ಅಡಿಕೆ ದರ ಇದೀಗ ಏರಿಕೆಯತ್ತ ಸಾಗಿದೆ. ಹಾಗಾದರೆ ಇಂದು (ಜೂನ್ 15) ದಾವಣಗೆರೆ ಜಿಲ್ಲೆಯ ತಾಲೂಕುವಾರು ಕ್ವಿಂಟಾಲ್ ಅಡಿಕೆ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ತಿಳಿಯಿರಿ.
ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರ ಮತ್ತೆ ಏರಿಕೆಯಾಗಿದೆ. ಜೂನ್ ಮೊದಲ ವಾರ 55,000 ರೂಪಾಯಿ ಗಡಿಯತ್ತ ಸಾಗಿದ್ದ ಅಡಿಕೆ ದರ, ಎರಡನೇ ವಾರ 54,000 ಕೆಳಗೆ ಇಳಿಕೆಯಾಗಿತ್ತು. ಇನ್ನು ಇದೀಗ ಮತ್ತೆ ಇಂದು (ಜೂ 15) ಗರಿಷ್ಠ ಬೆಲೆ ಕ್ವಿಂಟಲ್‌ಗೆ 54,100 ರೂಪಾಯಿ ಇದ್ದರೆ, ಕನಿಷ್ಠ ದರ 49,019 ರೂಪಾಯಿ ಆಗಿದೆ. ಇನ್ನು ಕಳೆದ ದಿನದ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ 300 ರೂಪಾಯಿ ಏರಿಕೆಯಾಗಿದೆ.

2023ರ ಜುಲೈನಲ್ಲಿ ಗರಿಷ್ಠ ಬೆಲೆ 57,000 ರೂಪಾಯಿ ಮುಟ್ಟಿತ್ತು. ಇನ್ನು ಇದೀಗ ಕಳೆದ ಕೆಲ ವಾರಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ತಾಪಮಾನದ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ಬಾರಿಯ ತೀವ್ರ ಬರದಿಂದ ಬೋರ್ ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿದ್ದು,ಇದೀಗ ತುಸು ಚೇತರಿಕೆ ಕಂಡಿದೆ. ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಸುರಿಯಲಿದೆ ಎಂದು ಮುನ್ಸೂಚನೆ ಇದ್ದು, ಇದರಿಂದ ಅಡಿಕೆ ಬೆಳೆಗಾರರಲ್ಲಿ ಸಂತಸ ಮನೆ ಮಾಡಿದೆ.
ಇನ್ನು 2024ರ ಜನವರಿ 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ಮುಟ್ಟಿದ್ದು, ಫೆಬ್ರವರಿಯಲ್ಲಿ ದಿಢೀರ್ 48,000 ರೂಪಾಯಿಗೆ ಇಳಿಕೆಯಾಗಿತ್ತು. ಮಾರ್ಚ್‌ನಲ್ಲಿ ತುಸು ಏರಿಕೆಯಾಗಿ 50,000 ರೂಪಾಯಿ ಮುಟ್ಟಿತ್ತು. ಈಗ ಏಪ್ರಿಲ್‌ನಲ್ಲಿ ಗರಿಷ್ಠ 54,000 ರೂಪಾಯಿಗೆ ಮುಟ್ಟಿತ್ತು. ಮೇ ತಿಂಗಳಲ್ಲಿ ಗರಿಷ್ಠ 55,000 ರೂಪಾಯಿ ತಲುಪಿ ಮತ್ತೆ ಕುಸಿತವಾಗಿತ್ತು. ಇದೀಗ ಜೂನ್ ತಿಂಗಳ ಎರಡನೇ ವಾರ ಕುಸಿದು ಮತ್ತೆ ಏರಿಕೆಯಾಗಿದ್ದು, ರೈತರ ಮುಖದಲ್ಲಿ ಮತ್ತೆ ಮಂದಹಾಸ ಮೂಡಿದಂತಾಗಿದೆ.
ಅದರಲ್ಲೂ ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಜೂನ್ 15ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 49,019 ರೂಪಾಯಿ, ಗರಿಷ್ಠ ಬೆಲೆ 54,100 ರೂಪಾಯಿ ಹಾಗೂ ಸರಾಸರಿ ಬೆಲೆ 52,502 ರೂಪಾಯಿಗೆ ಮಾರಾಟ ಆಗಿದೆ. ಬೆಟ್ಟೆ ಅಡಿಕೆ ಗರಿಷ್ಠ ಬೆಲೆ 38,100 ರೂಪಾಯಿ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಟ್ಟಿನಲ್ಲಿ ಇಳಿಕೆಯತ್ತ ಸಾಗಿದ್ದ ಅಡಿಕೆ ದರ ಮತ್ತೆ ಇಳಿಕೆಯತ್ತ ಸಾಗಿದೆ. ಅಲ್ಲದೆ ಇದೀಗ ಮುಂದಿನ ದಿನಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆಯಲಿರುವ ಮುನ್ಸೂಚನೆ ಇದ್ದು, ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.












Click it and Unblock the Notifications