ದಾವಣಗೆರೆ: ಅಡಿಕೆ ದರ ಮತ್ತೆ ಏರಿಕೆ-ಜೂನ್ 6ರ ಅಂಕಿಅಂಶಗಳ ವಿವರ ಇಲ್ಲಿದೆ ತಿಳಿಯಿರಿ
Arecanut Price: ಇದೀಗ ದಾವಣಗೆರೆ ಜಿಲ್ಲೆಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಏರಿಕೆಯಾಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಹಾಗಾದರೆ ಇದೀಗ ಇಂದು (ಜೂನ್ 06) ಕ್ವಿಂಟಾಲ್ ಅಡಿಕೆ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಅದರಲ್ಲೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲೇ ಹೆಚ್ಚು ಅಡಿಕೆ ಬೆಳೆಯುತ್ತಾರೆ. ಇಷ್ಟು ದಿನ ಬೆಲೆ ಕಡಿತದಿಂದ ಬೇಸತ್ತಿದ್ದ ಈ ಭಾಗದ ಜನರಿಗೆ ಇದೀಗ ದರ ಏರಿಕೆಯಾಗಿ ತುಸು ಸಂತಸ ಆದಂತಾಗಿದೆ. ಮತ್ತೊಂದೆಡೆ ಬೆಲೆ ಏರಿಕೆಯಾದಾಗಲೇ ಕಳ್ಳರ ಕಾಟ ಹೆಚ್ಚಾದ ಹಿನ್ನೆಲೆ ಈ ಭಾಗದ ಜನರಿಗೆ ಆತಂಕ ಹೆಚ್ಚಾಗಿದೆ.

ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರ ಕ್ವಿಂಟಾಲ್‌ಗೆ 55,000 ರೂಪಾಯಿ ಗಡಿಯನ್ನುವ ಮುಟ್ಟುವ ಸಮೀಪದಲ್ಲಿದೆ. ಇದೀಗ ಜೂ 06ರಂದು ಸಹ 200 ರೂಪಾಯಿ ಏರಿಕೆಯಾಗಿದ್ದು, ಈ ಮೂಲಕ ಗರಿಷ್ಠ ಬೆಲೆ ಕ್ವಿಂಟಲ್‌ಗೆ 54,669 ರೂಪಾಯಿ ಇದ್ದರೆ, ಕನಿಷ್ಠ ದರ 50,012 ರೂಪಾಯಿ ಆಗಿದೆ. ಕಳೆದ ತಿಂಗಳು ಅಂದರೆ ಮೇ ಮಧ್ಯದಲ್ಲಿ ಗರಿಷ್ಠ 55,000 ರೂಪಾಯಿ ದಾಟಿ ಮತ್ತೆ ಇಳಿಕೆಯಾಗಿಯತ್ತು. ಇದೀಗ ಜೂನ್ ಮೊದಲ ವಾರದಲ್ಲೇ ಮತ್ತೆ ಏರಿಕೆಯತ್ತ ಸಾಗಿದೆ.
ಇನ್ನು ಕಳೆದ ವರ್ಷ ಅಂದರೆ 2023ರ ಜುಲೈನಲ್ಲಿ ಗರಿಷ್ಠ ಬೆಲೆ ಕ್ವಿಂಟಾಲ್‌ಗೆ 57,000 ರೂಪಾಯಿ ಇತ್ತು. ಇದೀಗ 2024ರ ಜೂನ್‌ನಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದ್ದು, ಬಿಸಿ ಗಾಳಿಯ ಅಲೆ ಕಡಿಮೆಯಾಗಿದೆ. ಕಳೆದ ಬಾರಿಯ ತೀವ್ರ ಬರದಿಂದ ಬೋರ್ ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಭಾರೀ ಕುಸಿತವಾಗಿದ್ದು, ಇದೀಗ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕು ಪಡೆದಿದೆ. ಅಲ್ಲದೆ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಇದರಿಂದ ಅಡಿಕೆ ಬೆಳೆಗಾರರು ಸಂತಗೊಂಡಿದ್ದಾರೆ.
ಜನವರಿ 2024, 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ಮುಟ್ಟಿದ್ದು, ಫೆಬ್ರವರಿಯಲ್ಲಿ ದಿಢೀರ್ 48,000 ರೂಪಾಯಿಗೆ ಇಳಿಕೆಯಾಗಿತ್ತು. ಮತ್ತೆ ಮಾರ್ಚ್‌ನಲ್ಲಿ ತುಸು ಏರಿಕೆಯಾಗಿದ್ದು, 50,000 ರೂಪಾಯಿಗೆ ತಲುಪಿತ್ತು. ಇನ್ನು ಏಪ್ರಿಲ್‌ನಲ್ಲಿ ಗರಿಷ್ಠ 54,000 ರೂಪಾಯಿಗೆ ತಲುಪಿತ್ತು. ಮೇನಲ್ಲಿ ಗರಿಷ್ಠ 55,000 ರೂಪಾಯಿ ತಲುಪಿ ಬಳಿಕ ಕೆಲವೇ ದಿನಗಳಲ್ಲಿ ಮತ್ತೇ ಇಳಿಕೆಯಾಗಿತ್ತು. ಇದೀಗ ಜೂನ್ ಮೊದಲ ವಾರದಿಂದ ಏರಿಕೆಯತ್ತ ಸಾಗಿದ್ದು, ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.
ಅದರಲ್ಲೂ ದಾವಣಗೆರೆ ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಜೂನ್ 06ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 50,012 ರೂಪಾಯಿ ಆಗಿದ್ದರೆ, ಗರಿಷ್ಠ ದರ 54,669 ರೂಪಾಯಿ ಮತ್ತು ಸರಾಸರಿ ದರ 53,118 ರೂಪಾಯಿಗೆ ಮಾರಾಟ ಆಗಿದೆ. ಇನ್ನು ಬೆಟ್ಟೆ ಅಡಿಕೆ ಗರಷ್ಠ ದರ 38,070 ರೂಪಾಯಿ ಆಗಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಜೂನ್ ಆರಂಭದಿಂದ ಅಡಿಕೆ ದರ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಭಾರೀ ಮಳೆ ಸುರಿದು ಮತ್ತೆ ಏರಿಕೆಯಾದರೆ ಬೆಳಗಾರರ ಮುಖದಲ್ಲಿ ಮಂದಹಾಸ ಮತ್ತಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.












Click it and Unblock the Notifications