ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ: ಪಿಎಸ್ಐ ಜೊತೆ ವಾಗ್ವಾದಕ್ಕಿಳಿದ ಯುವತಿ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗರೆ, ಜುಲೈ 26: ಭಾನವಾರ ಲಾಕ್‌ಡೌನ್ ಇದ್ದರೂ ಮಾಸ್ಕ್, ಹೆಲ್ಮೆಟ್ ಇಲ್ಲದೇ ಬೈಕ್ ನಲ್ಲಿ ಸುತ್ತಾಡುತ್ತಿದ್ದ ಯುವಕ-ಯುವತಿಗೆ ದಂಡ ಕಟ್ಟಲು ಹೇಳಿದಾಗ, ಪೊಲೀಸರಿಗೆ ಯುವತಿಯು ಧಮ್ಕಿ ಹಾಕಿದ ಘಟನೆ ಭಾನುವಾರ ದಾವಣಗೆರೆ ನಗರದ ಗುಂಡಿ ಛತ್ರದಲ್ಲಿ ನಡೆದಿದೆ.

Recommended Video

Karnataka Government ಒಂದು ವರ್ಷದ ಸಾಧನೆ ಕುರಿತ ಪುಸ್ತಕ ಬಿಡಗಡೆ | Oneindia Kannada

ಮಾಸ್ಕ್ ಇಲ್ಲದ್ದನ್ನು ಪ್ರಶ್ನೆ ಮಾಡಿದ ಬಡಾವಣೆ ಠಾಣೆ ಅಪರಾಧ ವಿಭಾಗದ ಪಿಎಸ್ಐ ಚಿದಾನಂದ ಜೊತೆ ದಂಡ ಕಟ್ಟುವುದಿಲ್ಲ ಎಂದು ವಾಗ್ವಾದಕ್ಕೆ ಇಳಿದರು.

ದಾವಣಗೆರೆ ಮಹಾನಗರ ಪಾಲಿಕೆ‌ ಮೇಯರ್ ಗೆ ಕೊರೊನಾ ಪಾಸಿಟಿವ್ದಾವಣಗೆರೆ ಮಹಾನಗರ ಪಾಲಿಕೆ‌ ಮೇಯರ್ ಗೆ ಕೊರೊನಾ ಪಾಸಿಟಿವ್

ಭಾನುವಾರದ ಲಾಕ್ ಡೌನ್ ಗೆ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿಗಳು ಬಂದ್ ಆಗಿದ್ದವು. ಪ್ರಮುಖ ವೃತ್ತಗಳಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

Davanagere: A Young Woman Argued With PSI

ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಾಗಿತ್ತು. ದ್ವಿಚಕ್ರ ವಾಹನ ಸವಾರರಿಗೆ ಕಡಿವಾಣ ಹಾಕಲು ಪೊಲೀಸರು ನಗರದ ಪ್ರಮುಖ ವೃತ್ತದಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿದರು. ಅನಗತ್ಯವಾಗಿ ಸಂಚರಿಸುವವರಿಗೆ ಪೊಲೀಸರು ಬುದ್ಧಿವಾದ ಹೇಳಿದರು. ಮಾಸ್ಕ್ ಹಾಕದವರಿಗೆ ದಂಡವನ್ನು ವಿಧಿಸಿದರು.

ಕಂಟೈನ್ಮೆಂಟ್ ಝೋನ್ ಮಾಡಿಲ್ಲ ಎಂದು ದಾವಣಗೆರೆಯಲ್ಲಿ ಪಾಲಿಕೆ ಸದಸ್ಯನ ಮೇಲೆ ಹಲ್ಲೆಕಂಟೈನ್ಮೆಂಟ್ ಝೋನ್ ಮಾಡಿಲ್ಲ ಎಂದು ದಾವಣಗೆರೆಯಲ್ಲಿ ಪಾಲಿಕೆ ಸದಸ್ಯನ ಮೇಲೆ ಹಲ್ಲೆ

ಪ್ರಮುಖ ರಸ್ತೆಗಳಾದ ಅಶೋಕ ರಸ್ತೆ, ಪಿ.ಬಿ ರಸ್ತೆ ಜನರಿಲ್ಲದೇ ಬಣಗುಡುತ್ತಿದ್ದರೆ, ಗುಂಡಿ ಸರ್ಕಲ್, ಅಂಬೇಡ್ಕರ್ ವೃತ್ತಗಳಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಎಪಿಎಂಸಿಯಲ್ಲಿ ಮುಂಜಾನೆಯೇ ವ್ಯಾಪಾರ ವಹಿವಾಟು ನಡೆದು ನಂತರ ಮುಚ್ಚಲಾಯಿತು.

Davanagere: A Young Woman Argued With PSI

ಹಾಲು, ಕಿರಾಣಿ ಅಂಗಡಿ, ಮೆಡಿಕಲ್ ಶಾಪ್, ಹಣ್ಣಿನ ಅಂಗಡಿ, ಆಸ್ಪತ್ರೆ ಹಾಗೂ ಮಾಂಸದಂಗಡಿ ತೆರೆದಿದ್ದವು. ಆದರೆ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಮಾಂಸದ ಅಂಗಡಿಗಳಿಗೆ ಬೇಡಿಕೆ ಇರಲಿಲ್ಲ. ಮದ್ಯದ ಅಂಗಡಿಗಳು ಬಂದ್ ಆಗಿದ್ದವು. ಕೆಎಸ್ಆರ್ಟಿಸಿ, ಖಾಸಗಿ ಬಸ್ ಗಳು, ಕ್ಯಾಬ್ ಗಳು ಸಂಚರಿಸುತ್ತಿಲ್ಲ. ಅಲ್ಲಲ್ಲಿ ಆಟೋಗಳು ಸಂಚರಿಸಿದವು. ದೇವಾಲಯ, ಮಸೀದಿ, ಚರ್ಚ್‌ಗಳು ಬಂದ್ ಆಗಿದ್ದವು.

English summary
Davanagere has responded well to Sunday's lockdown. The shops were bandh. In major circles, police provided tight security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X