2ನೇ ಹಂತದ ಗ್ರಾ.ಪಂ ಚುನಾವಣೆ: ದಾವಣಗೆರೆಯ 3 ತಾಲ್ಲೂಕಿನಲ್ಲಿ ಭಾನುವಾರ ಮತದಾನ

ದಾವಣಗೆರೆ, ಡಿಸೆಮಬರ್ 26: ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿ ಭಾನುವಾರ 2ನೇ ಹಂತದ ಗ್ರಾ.ಪಂ ಚುನಾವಣೆ ನಡೆಯಲಿದ್ದು, ಒಟ್ಟು 1,112 ಗ್ರಾಂ.ಪಂ ಸ್ಥಾನಗಳಿಗೆ ಮತದಾನ ನಡೆಯಲಿದೆ.

ಹರಿಹರ, ಚನ್ನಗಿರಿ ಹಾಗೂ ನ್ಯಾಮತಿ ತಾಲ್ಲೂಕುಗಳ 101 ಗ್ರಾಮ ಪಂಚಾಯಿತಿಗಳ 586 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಹರಿಹರ ತಾಲ್ಲೂಕಿನ 23 ಗ್ರಾಮ ಪಂಚಾಯಿತಿಗಳ 151 ಮತಗಟ್ಟೆಗಳು, ಚನ್ನಗಿರಿ ತಾಲೂಕಿನ 61 ಗ್ರಾಮ ಪಂಚಾಯಿತಿಗಳ 342 ಮತಗಟ್ಟೆಗಳಲ್ಲಿ ಹಾಗೂ ನ್ಯಾಮತಿ ತಾಲೂಕಿನ 17 ಗ್ರಾಮ ಪಂಚಾಯಿತಿಗಳ 93 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಚನ್ನಗಿರಿ ತಾಲೂಕುನಲ್ಲಿ 2,29,616 ಮತದಾರರು, ಹರಿಹರ ತಾಲ್ಲೂಕಿನಲ್ಲಿ 1,00,629 ಮತದಾರರು ಮತ್ತು ನ್ಯಾಮತಿ ತಾಲೂಕಿನ 59,704 ಮತದಾರರು ಸೇರಿದಂತೆ ಒಟ್ಟಾರೆ 3,90,012 ಮತದಾರರಿದ್ದಾರೆ.

Davanagere: 2nd Phase Gram Panchayat Election: Polls In 3 Taluk Of Davanagere

ಚನ್ನಗಿರಿ ತಾಲೂಕಿನಲ್ಲಿ 45 ಸೂಕ್ಷ್ಮ, 47 ಅತಿ ಸೂಕ್ಷ್ಮ ಮತಗಟ್ಟೆಗಳು ಹಾಗೂ 267 ಸಾಮಾನ್ಯ ಮತಗಟ್ಟೆಗಳು, ಹರಿಹರ ತಾಲ್ಲೂಕಿನಲ್ಲಿ 17 ಸೂಕ್ಷ್ಮ, 17 ಅತಿಸೂಕ್ಷ್ಮ ಹಾಗೂ 133 ಸಾಮಾನ್ಯ ಮತಗಟ್ಟೆಗಳು, ನ್ಯಾಮತಿ ತಾಲ್ಲೂಕಿನಲ್ಲಿ 11 ಸೂಕ್ಷ್ಮ, 15 ಅತಿಸೂಕ್ಷ್ಮ ಮತ್ತು 71 ಸಾಮಾನ್ಯ ಮತಗಟ್ಟೆಗಳಿದ್ದು, ಒಟ್ಟಾರೆ 480 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಹರಿಹರ 55, ಚನ್ನಗಿರಿ 94, ನ್ಯಾಮತಿಯ 15 ಸ್ಥಾನ ಸೇರಿದಂತೆ 164 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಮೂರು ತಾಲೂಕುಗಳಲ್ಲಿ 6 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ.

ಮಾಸ್ಟರಿಂಗ್ ಮತ್ತು ಡಿ ಮಾಸ್ಟರಿಂಗ್ ಮತ್ತು ಮತ ಎಣಿಕೆ ಕೇಂದ್ರಗಳು

ನ್ಯಾಮತಿ: ಕರ್ನಾಟಕ ಪಬ್ಲಿಕ್ ಸ್ಕೂಲ್ ,ಶಿವಾನಂದಪ್ಪ ಬಡಾವಣೆ ರಸ್ತೆ

ಹರಿಹರ: ಸೆಂಟ್ ಮೇರಿಸ್ ಕಾನ್ವೆಂಟ್ ಶಾಲೆ, ಹರಪನಹಳ್ಳಿ ರಸ್ತೆ

ಚನ್ನಗಿರಿ: ಸರ್ಕಾರಿ ಪದವಿ ಪೂರ್ವ ಕಾಲೇಜು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+