ದಾವಣಗೆರೆ: ಕಾರು- ಬೈಕ್ ಅಪಘಾತದಲ್ಲಿ ವೈದ್ಯ ವಿದ್ಯಾರ್ಥಿನಿ ದುರಂತ ಸಾವು; ಹೆಲ್ಮೆಟ್ ಧರಿಸಿದ್ದರೆ...!?

ದಾವಣಗೆರೆ, ಡಿಸೆಂಬರ್ 16: ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿನ ಸ್ವಿಮ್ಮಿಂಗ್ ಪೂಲ್ ಬಳಿಯ ತಿರುವಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬಾಪೂಜಿ ಡೆಂಟಲ್ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ದಾರುಣ ಸಾವು ಕಂಡ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಸ್ಥಳದಲ್ಲಿದ್ದವರು ಆಕೆಯನ್ನು ಬದುಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ದಾವಣಗೆರೆಯ ಬಾಪೂಜಿ ಡೆಂಟಲ್ ಕಾಲೇಜಿನ ಸ್ನಾತಕೋತ್ತರ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ಹೈದರಾಬಾದ್ ಮೂಲಕ 25 ವರ್ಷದ ಪ್ರಿಯಾಂಕಾ ಮೃತಪಟ್ಟಿರುವ ದುರ್ದೈವಿ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಎಂದಿನಂತೆ ಕಾಲೇಜಿಗೆ ತೆರಳುತ್ತಿದ್ದ ಪ್ರಿಯಾಂಕಾ ಎಂಸಿಸಿ ಬಿ ಬ್ಲಾಕ್‌ನ 4ನೇ ಕ್ರಾಸ್‌ನಲ್ಲಿ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಕಾರಿನಲ್ಲಿ ವೈದ್ಯರೊಬ್ಬರು ವೇಗವಾಗಿ ಬರುತ್ತಿದ್ದರು. ಈ ವೇಳೆ ಎದುರುಗಡೆಯಿಂದಲೂ ಮೊಪೆಡ್‌ನಲ್ಲಿ ವೇಗವಾಗಿ ಬರುತ್ತಿದ್ದಾಗ ಮುಖಾಮುಖಿ ಡಿಕ್ಕಿ ಆಗಿದೆ. ಅಪಘಾತದ ಬಳಿಕ ಕೆಳಗಡೆ ಬಿದ್ದ ಯುವತಿಯ ತಲೆ ಫುಟ್‌ಪಾತ್‌ನ ಸಿಮೆಂಟ್ ಕಲ್ಲಿಗೆ ಬಡಿದಿದೆ. ಇದರಿಂದ ತೀವ್ರ ರಕ್ತಸ್ರಾವ ಉಂಟಾಯಿತು.

 Davanagere: 25-year-old Medical Student Dies In Road Accident

ಅಪಘಾತ ನಡೆಯುತ್ತಿದ್ದಂತೆ ಕೆಳಗಡೆ ಬಿದ್ದ ಯುವತಿಯ ರಕ್ಷಣೆಗೆ ಸುತ್ತಮುತ್ತಲಿದ್ದವರು ಆಗಮಿಸಸಿದ್ದಾರೆ. ಪೌರ ಕಾರ್ಮಿಕ ಮಹಿಳೆಯರೂ ಸಹ ಆಗಮಿಸಿ ಉಪಚರಿಸಿದರು. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರಿಯಾಂಕಾ ಮೃತಪಟ್ಟಿದ್ದಾರೆ.

ಹೆಲ್ಮೆಟ್ ಧರಿಸಿದ್ದರೆ ಉಳಿಯುತ್ತಿತ್ತಾ ಪ್ರಾಣ?
ಇನ್ನು ಮೊಪೈಡ್ ಬೈಕ್‌ನಲ್ಲಿ ಯುವತಿ ಪ್ರಿಯಾಂಕಾ ಬರುವಾಗ ಹೆಲ್ಮೆಟ್ ಅನ್ನು ತಲೆಗೆ ಧರಿಸಿರಲಿಲ್ಲ. ಕೈಯಲ್ಲಿಡಿದುಕೊಂಡು ಬರುತ್ತಿದ್ದ ಕಾರಣ ತಲೆಗೆ ಪೆಟ್ಟು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆಯ ಮೇಯರ್ ಎಸ್.ಟಿ. ವೀರೇಶ್ ಸೇರಿದಂತೆ ಬೈಕ್ ಸವಾರರು ಹೆಲ್ಮೆಟ್ ಧರಿಸಬೇಕೆಂಬ ಮನವಿ ಮಾಡಿದ್ದರೂ, ಹೆಲ್ಮೆಟ್ ಅನ್ನು ಧರಿಸದೇ ಕೆಲವರು ಈಗಲೂ ಓಡಿಸುತ್ತಿದ್ದಾರೆ. ಇನ್ನು ಪ್ರಿಯಾಂಕಾ ಹೆಲ್ಮೆಟ್ ಧರಿಸಿದ್ದರೆ ಪ್ರಾಣ ಉಳಿಯುತಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

 Davanagere: 25-year-old Medical Student Dies In Road Accident

ಹಂಪ್ಸ್ ಅಳವಡಿಕೆ ಆಗ್ರಹ
ಇನ್ನು ಎಂಸಿಸಿ ಬಿ ಬ್ಲಾಕ್ ಸೇರಿದಂತೆ ಹಲವೆಡೆ ತಿರುವಿನಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ತಿರುವಿನ ಬಳಿ ಹಂಪ್ಸ್ ಅಳವಡಿಸಿದರೆ ವೇಗಕ್ಕೆ ಕಡಿವಾಣ ಬೀಳುತ್ತದೆ. ಬೆಳಿಗ್ಗೆ ಮತ್ತು ಸಂಜೆಯ ಹೊತ್ತಲ್ಲಿ ವಾಹನಗಳ ಜೋರಾದ ಓಡಾಟ ಹೆಚ್ಚಾಗಿರುತ್ತದೆ. ಬೆಳಿಗ್ಗೆ ಕಾಲೇಜಿಗೆ ಹಾಗೂ ಕೆಲಸಕ್ಕೆ ಹೋಗುವವರು ಜೋರಾಗಿ ಬೈಕ್‌ನಲ್ಲಿ ಹೋಗುತ್ತಾರೆ. ಕಾರಿನಲ್ಲಿ ಬರುವವರೂ ಸಹ ಅಷ್ಟೇ. ಕೆಲಸಕ್ಕೆ ಹೋಗುವ ಧಾವಂತದಲ್ಲಿ ಇಂಥ ಅವಘಡಗಳು ಸಂಭವಿಸುತ್ತಿದ್ದು, ಅಪಾಯಕಾರಿ ತಿರುವಿನಲ್ಲಿ ಹಂಪ್ಸ್ ಅಳವಡಿಕೆ ಮಾಡದಿದ್ದರೂ ಪೊಲೀಸ್ ಬ್ಯಾರಿಕ್ಯಾಡ್ ಆದರೂ ಅಳವಡಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

Recommended Video

      ವಿರಾಟ್ ಪ್ರೆಸ್ ಮೀಟ್ ನಂತರ ಜಡೇಜಾ ಮಾಡಿದ ಟ್ವೀಟ್ ಫುಲ್ ವೈರಲ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+