ಲಕ್ಕವ್ವನಹಳ್ಳಿ ಡ್ಯಾಂನಲ್ಲಿ ಈಜಲು ಹೋದ ಯುವಕ ಸಾವು

ಚಿತ್ರದುರ್ಗ, ಅಕ್ಟೋಬರ್ 16: ಹಿರಿಯೂರು ನಗರಕ್ಕೆ ಹೊಂದಿಕೊಂಡಿರುವ ಲಕ್ಕವ್ವನಹಳ್ಳಿ ಡ್ಯಾಂ ಕಳೆದ ಒಂದು ವಾರದಿಂದ ತುಂಬಿ ಹರಿಯುತ್ತಿದ್ದು, ಇಂದು ಅಲ್ಲಿ ಈಜಲು ಹೋಗಿದ್ದ ಮುಜೀಬ್ (18) ಎಂಬಾತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಡ್ಯಾಂಗೆ ಹೊಸ ನೀರು ಬಂದಿದ್ದರಿಂದ ಡ್ಯಾಂ ವೀಕ್ಷಿಸಲು ಇಂದು ಮಧ್ಯಾಹ್ನ ಸಮಯದಲ್ಲಿ ಮುಜೀಬ್ ಕುಟುಂಬದವರ ಜೊತೆ ಹೋಗಿದ್ದನು. ಡ್ಯಾಂನಲ್ಲಿ ಮುಜೀಬ್ ಈಜಲು ಹೋಗಿದ್ದಾಗ ಮುಳುಗಿ ಸಾವನ್ನಪ್ಪಿದ್ದಾನೆ.

Young Man Died While Swimming In Lakkavvanahalli Dam In Hiriyuru

ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಹಿರಿಯೂರು ನಗರ ಪೋಲಿಸರು ಭೇಟಿ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಕಳೆದ ವಾರವಷ್ಟೇ ಮಳೆಯಾಗಿತ್ತು. ಹೀಗಾಗಿ ಜಿಲ್ಲೆಯ ಹಿರಿಯೂರಿನ ಹಲವು ಕೆರೆ ಕಟ್ಟೆಗಳು, ಚೆಕ್ ಡ್ಯಾಂ ತುಂಬಿ ಹರಿಯುತ್ತಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+