ನುಗ್ಗೆ ಸೊಪ್ಪು ಕೀಳಲು ಹೋದವ ವಿದ್ಯುತ್ ತಂತಿ ಸ್ಪರ್ಶಿಸಿ ಸಾವು

ಚಿತ್ರದುರ್ಗ, ಜುಲೈ 4: ನುಗ್ಗೆ ಸೊಪ್ಪು ಕೀಳಲು ಹೋದಾಗ ವಿದ್ಯುತ್ ತಂತಿ ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ ನಡೆದಿದೆ.

ಸೋಮಶೇಖರ್ (21) ಮೃತ ದುರ್ದೈವಿ. ಇಂದು ಬೆಳ್ಳಿಗ್ಗೆ ಮನೆಯ ಆವರಣದಲ್ಲಿದ್ದ ನುಗ್ಗೆ ಮರದಲ್ಲಿ ಸೊಪ್ಪು ಕೀಳಲು ಸೋಮಶೇಖರ್ ಹೋಗಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ.

young boy died by electric shock in chitradurga

ಮರದ ನಡುವೆ ವಿದ್ಯುತ್ ತಂತಿ ಹಾದು ಹೋಗಿದ್ದು, ಕೋಲಿಗೆ ಕತ್ತಿ ಸಿಗಿಸಿಕೊಂಡು ಸೊಪ್ಪು ಕೀಳಲು ಹೋದ ಸಂದರ್ಭ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾನೆ. ತನ್ನ ತಾತ ಹನುಮಂತಪ್ಪ ಅವರ ಮನೆಯಲ್ಲಿ ಸೋಮಶೇಖರ್ ವಾಸವಾಗಿದ್ದನು ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+