ಚಿತ್ರದುರ್ಗದಲ್ಲಿ ಆನೆ ದಾಳಿಗೆ ಗರ್ಭಿಣಿ ಬಲಿ

Posted By:
Subscribe to Oneindia Kannada

ಚಿತ್ರದುರ್ಗ, ಆಗಸ್ಟ್ 28 : ಕಾಡಾನೆ ದಾಳಿಯಿಂದಾಗಿ ಗರ್ಭಿಣಿ ಮೃಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಹಿರಿಯೂರು ತಾಲೂಕಿನ ಬಳಘಟ್ಟ ಗ್ರಾಮದ ಬಳಿ ಶನಿವಾರ ಸಂಜೆ ಕಾಡಾನೆ ಕಾಣಿಸಿಕೊಂಡಿತ್ತು. ಭಾನುವಾರ ಬೆಳಗ್ಗೆ 7 ತಿಂಗಳ ಗರ್ಭಿಣಿ ತಿಮ್ಮಕ್ಕ (22) ಅವರ ಮೇಲೆ ದಾಳಿ ಮಾಡಿದ ಆನೆ ಅವರನ್ನು ಕೊಂದು ಹಾಕಿದೆ.[ಜಂಬೂಸವಾರಿಯಲ್ಲಿ ಕೊಡಗಿನ ಆನೆಗಳದ್ದೇ ಕಾರುಬಾರು!]

Hiriyur

ಬಳಘಟ್ಟದಿಂದ ಮಾರಿಕಣಿವೆಯತ್ತ ಕಾಡಾನೆ ಸಾಗಿದ್ದು ಮಾರ್ಗದಲ್ಲಿ ಭರಮಗಿರಿ ಬಳಿ ನೀಲಮ್ಮ ಎಂಬುವವರ ಮೇಲೆ ದಾಳಿ ಮಾಡಿದೆ. ನೀಲಮ್ಮ ಅವರ ಕಾಲಿಗೆ ಗಾಯವಾಗಿದ್ದು, ಖಾಸ್ಪಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.[ಮಡಿಕೇರಿಯ ಕಾಫಿ ತೋಟಗಳಲ್ಲಿ ಕಾಡಾನೆಗಳ ರಂಪಾಟ]

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
22-year-old pregnant woman Timmakka killed in elephant attack at Balagatta village Hiriyur, Chitradurga district. Forest department officers visited the spot.
Please Wait while comments are loading...