ಆಲೂರು: ಗ್ರಾಮ ಪಂಚಾಯಿತಿ ಪಿಡಿಒಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು-ಕಾರಣ ಏನು?-ಇಲ್ಲಿದೆ ಮಾಹಿತಿ
ಹಿರಿಯೂರು, ಜೂನ್, 30: ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಿಲ್ಲ ಎಂಬ ವಿಚಾರಕ್ಕೆ ಆಲೂರು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಪಿಡಿಒ ಮೇಲೆ ಹಲ್ಲೆ ನಡೆಸಿರುವ ಘಟನೆ ಹೊಸಯಳನಾಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ.
ಹಿರಿಯೂರು ತಾಲೂಕಿನ ಹೊಸಯಳನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೂರು ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಪಿಡಿಒ ವಿವೇಕ್ ಅವರಿಗೆ ಮನವಿ ಮಾಡಿದ್ದರಂತೆ. ಅದ್ಯಾಕೋ ಏನೋ ಪಿಡಿಓ ಮತ್ತು ಗ್ರಾಮಸ್ಥರ ನಡುವೆ ಮಾತಿಗೆ ಮಾತು ಬೆಳೆದು ಗ್ರಾಮಸ್ಥರು ಪಿಡಿಒ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸರೆಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಬೋರ್‌ವೆಲ್ ರಾಮಚಂದ್ರಪ್ಪ, ಅಜ್ಜಯ್ಯ, ಸಿದ್ದರಾಮೇಶ್ವರ ಹಾಗೂ ಬಾಲ ರಾಮಯ್ಯ ಈ ನಾಲ್ವರು ಗ್ರಾಮ ಪಂಚಾಯಿತಿ ಪಿಡಿಒ ವಿವೇಕ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ಪ್ರಕರಣ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎನ್ನಲಾಗಿದೆ.
ರಸ್ತೆ ಅಗಲೀಕರಣ ಕಾರ್ಯ: ಹಿರಿಯೂರು ನಗರದ ಟಿಬಿ ಸರ್ಕಲ್‌ನಿಂದ ತಾಲೂಕು ಕಛೇರಿ ಬಳಿ ಇರುವ ವೇದಾವತಿ ನದಿ ಸೇತುವೆವವರೆಗೂ ರಸ್ತೆ ಅಗಲೀಕರಣದ ಮರಗಳ ಕಟಾವು ಕಾರ್ಯ ಭರದಿಂದ ಸಾಗಿದೆ.
ಆರಂಭಿಸಿದ ನಗರಸಭೆ ಅಧಿಕಾರಿಗಳು ರಸ್ತೆಯ ಎರಡೂ ಬದಿಗಳಲ್ಲಿದ್ದ ವಿವಿಧ ಅಂಗಡಿಗಳ ಬೋರ್ಡ್‌ಗಳು, ರಸ್ತೆ ಬದಿ ತರಕಾರಿ ಅಂಗಡಿಗಳು, ಕೆಲವು ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿದರು. ಅಲ್ಲದೆ ತಾಲೂಕು ಕಛೇರಿ ಮುಂಭಾಗದಲ್ಲಿದ್ದ ಮರಗಳನ್ನು ಜೆಸಿಬಿ ಹಾಗೂ ಕಟಾವು ಮಿಷನ್ ಬಳಸಿ ಮರಗಳ ಕಟಾವು ಕಾರ್ಯ ಆರಂಭಿಸಿದರು.
ಸಭೆ ನಡೆಸಿದ್ದ ಡಿಸಿ, ಸಚಿವರಯ: ನಗರದ ರಸ್ತೆ ಅಗಲೀಕರಣದ ಬಗ್ಗೆ ಇತ್ತಿಚೀಗಷ್ಟೇ ನಗರಸಭೆ ಸಭಾಂಗ, ರೋಟರಿ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ನಗರಸಭೆ ಅಧಿಕಾರಿಗಳು, ವರ್ತಕರು ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸಿ, ಎಲ್ಲರೂ ಮುಕ್ತವಾಗಿ ರಸ್ತೆ ಅಗಲೀಕರಣಕ್ಕೆ ಸಮ್ಮತಿ ಸೂಚಿಸಿದ್ದರು. ಪುಟ್‌ಪಾತ್ ಮೇಲೆ ಇಟ್ಟುಕೊಂಡಿದ್ದ ಅಂಗಡಿಗಳನ್ನು ಸ್ವಯಂ ತೆರವು ಮಾಡಿಕೊಳ್ಳಬೇಕೆಂದು ನಗರಸಭೆ ಅಧಿಕಾರಿಗಳು ಅರಿವು ಮೂಡಿಸಿದ್ದರು. ತೆರವುಗೊಳಿಸದ ಅಂಗಡಿಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು.
ರಸ್ತೆ ಬಂದ್: ಮರ ಕಟಾವು ಕಾರ್ಯ ಹಿನ್ನೆಲೆ ರಸ್ತೆ ಬಂದ್ ಮಾಡಲಾಯಿತು. ಚಿತ್ರದುರ್ಗ, ಹೊಸದುರ್ಗ, ಚಳ್ಳಕೆರೆ ಕಡೆಯಿಂದ ಬಂದ ವಾಹನಗಳನ್ನು ಬೈಪಾಸ್ ರಸ್ತೆ ಮೂಲಕ ರಂಜಿತಾ ಹೋಟೆಲ್ ಮೂಲಕ ಸಂಪರ್ಕ ಕಲ್ಪಿಸಲಾಯಿತು. ಇನ್ನು ಹುಳಿಯಾರು, ಶಿರಾ, ತುಮಕೂರು ಕಡೆಯಿಂದ ಬಂದಂತಹ ವಾಹನಗಳು ಮತ್ತು ಕೆಎಸ್ಆರ್ಟಿಸಿ ಬಸ್ ಗಳು ಕೆಎಸ್ಆರ್ಟಿಸಿ ನಿಲ್ದಾಣ ತಲುಪಿ ಮರಳಿ ಬೈಪಾಸ್ ರಸ್ತೆ ಮೂಲಕ ಚಿತ್ರದುರ್ಗ, ಚಳ್ಳಕೆರೆ ಕಡೆಗೆ ತಲುಪಿದವು. ನಗರದೊಳಗೆ ಆಟೋ, ಕಾರು, ಬೈಕ್ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ರಸ್ತೆ ಅಗಲೀಕರಣ ಕಾಮಗಾರಿ ಅನಿವಾರ್ಯದಿಂದ ಪರದಾಡಬೇಕಾಯಿತು.
ಕಿರಿದಾದ ರಸ್ತೆಯಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ವಾಹನ ಸವಾರರು ನಿಟ್ಟಿಸಿರು ಬಿಟ್ಟಿದ್ದು, ಬಹುದಿನಗಳ ಕನಸು ನನಸಾಗುತ್ತಿದೆ.












Click it and Unblock the Notifications