Get Updates
Get notified of breaking news, exclusive insights, and must-see stories!

Vani Vilasa Sagara Dam: ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭ: ಪ್ರಸ್ತುತ ನೀರಿನ ಮಟ್ಟ ತಿಳಿಯಿರಿ

Vani Vilasa Sagara Dam: ಹಿರಿಯೂರಿನ ತಾಲೂಕಿನಲ್ಲಿ ವಾಣಿ ವಿಲಾಸ ಸಾಗರ (ಮಾರಿಕಣಿವೆ) ಡ್ಯಾಂ ರಾಜ್ಯದ ಹಳೇ ಅಣೆಕಟ್ಟುಗಳಲ್ಲಿ ಒಂದಾಗಿದೆ. ಇದೀಗ ಇದು ಮತ್ತೆ ತುಂಬುವ ಹಂತದಲ್ಲಿದೆ. ಹಾಗಾದ್ರೆ ಇಂದು (ಅಕ್ಟೋಬರ್ 12) ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಇತಿಹಾಸ ಪ್ರಸಿದ್ಧ ವಾಣಿ ವಿಲಾಸ ಸಾಗರ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿದೆ. ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ಈ ಜಲಾಶಯ ಈಗಾಗಲೇ 2025ರ ಜನವರಿಯಲ್ಲಿ ಮೊದಲ ಬಾರಿಗೆ ಭರ್ತಿ ಆಗಿತ್ತು. ಇದೀಗ ಇದೇ ವರ್ಷದಲ್ಲಿ ಎರಡನೇ ಬಾರಿ ಭರ್ತಿಯಾಗುವ ಸನಿಹದಲ್ಲಿದೆ. ಇನ್ನೂ ಒಂದು ದಿನದೊಳಗೆ ತುಂಬಿದರೂ ಆಶ್ಚರ್ಯವಿಲ್ಲ. ಹಾಗಾದ್ರೆ ಇದೀಗ ಸದ್ಯ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.

Vani Vilasa Sagara Dam Water Level 127 90 ft Reached

ಇದೀಗ ಭರ್ತಿಯಾದ್ರೆ, ವರ್ಷದದಲ್ಲಿ ಎರಡು ಬಾರಿ ತುಂಬಿದಂತಾಗಲಿದ್ದು, ಇದು ಹೊಸ ದಾಖಲೆಯಾಗಲಿದೆ. ಯಾಕಂದ್ರೆ ಇದುವರೆಗೂ ವರ್ಷದಲ್ಲಿ ಎರಡು ಬಾರಿ ತುಂಬಿದ ಇತಿಹಾಸವಿಲ್ಲ. ಇದೀಗ ಮಾರಿಕಣಿವೆ ಅಥವಾ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗುವ ಸನಿಹದಲ್ಲಿದೆ. ಮತ್ತೊಂದೆಡೆ, ಇದುವರೆಗೂ ನಾಲ್ಕನೇ ಬಾರಿಗೆ ಕೋಡಿ ಬಿದ್ದ ಹೆಗ್ಗಳಿಕೆ ಗಿಟ್ಟಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ವಾಣಿ ವಿಲಾಸ ಸಾಗರ ಜಲಾಶಯವನ್ನು 'ಮಾರಿಕಣಿವೆ' ಅಂತಲೂ ಕರೆಯಲಾಗುತ್ತದೆ. ಇದು ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿದ್ದು, ಇದನ್ನು ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದೀಗ ಈ ಜಲಾಶಯ ಇದುವರೆಗೂ ನಾಲ್ಕನೇ ಬಾರಿಗೆ ಭರ್ತಿಯಾಗಿ ದಾಖಲೆ ಸೃಷ್ಟಿಸಿ ಹೊಸ ಇತಿಹಾಸ ಪಟ್ಟಿಗೆ ಸೇರಲು ಸಜ್ಜಾಗಿದೆ.

2025ರ ಆರಂಭದಲ್ಲಿ ಅಂದರೆ ಜನವರಿಯಲ್ಲಿ ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದಿತ್ತು. ಅದು ಮಳೆ ನೀರಿನಿಂದಲ್ಲ, ಭದ್ರ ಡ್ಯಾಂನಿಂದ ಬಿಟ್ಟ ನೀರಿನಿಂದ. ಇನ್ನೂ ಇದೀಗ ಮಳೆರಾಯನ ಆರ್ಭಟ ಮುಂದುವರೆದಿದ್ದು, ಪ್ರಸ್ತುತ ಅಕ್ಟೋಬರ್‌ 12 ಶುಕ್ರವಾರ ನೀರಿನ ಮಟ್ಟ 129.55 ಅಡಿ ತಲುಪಿದ್ದು, ಭರ್ತಿಯಾಗಲು ಕೇವಲ 1 ಅಡಿಯಷ್ಟೇ ಬಾಕಿಯಿದೆ.

ವಾಣಿ ವಿಲಾಸ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ 130 ಅಡಿ (30 ಟಿಎಂಸಿ) ಆಗಿದ್ದು, ಇದೀಗ ನೀರಿನ ಮಟ್ಟ 129.55 ಅಡಿ ಇದ್ದರೆ, 1,455 ಕ್ಯೂಸೆಕ್‌ ಒಳಹರಿವು ಇದೆ. ಆದರೆ, ಹೊರಹರಿವಿಲ್ಲ. ಇನ್ನೂ ಕೇವಲ 1 ಅಡಿ ನೀರು ಬಂದ್ರೆ ಮತ್ತೆ ಭರ್ತಿಯಾಗಲಿದ್ದು, ಈ ಮೂಲಕ ಇದುವರೆಗೂ ನಾಲ್ಕು ಬಾರಿ ಕೋಡಿ ಬಿದ್ದ ಖ್ಯಾತಿ ಪಡೆದುಕೊಳ್ಳಲಿದೆ.

ಪ್ರಸ್ತುತ ನೀರಿನ ಮಟ್ಟ

* ನೀರಿನ ಸಂಗ್ರಹಣ ಸಾಮರ್ಥ್ಯ: 130 ಅಡಿ
* ಇಂದಿನ ನೀರಿನ ಮಟ್ಟ: 129.55 ಅಡಿ
* ಒಳಹರಿವು: 1,455 ಕ್ಯೂಸೆಕ್‌

ಯಾವ್ಯಾವಾಗ ಡ್ಯಾಂ ಭರ್ತಿ?: 1933ರಲ್ಲಿ ಜಲಾಶಯಕ್ಕೆ 135.25 ಅಡಿ ನೀರು ಸಂಗ್ರಹ ಆಗುವ ಮೂಲಕ ಮೊದಲ ಬಾರಿಗೆ ಕೋಡಿ ಬಿದ್ದು, ಇತಿಹಾಸ ಸೃಷ್ಟಿಸಿತ್ತು. ಬಳಿಕ 2022ರಲ್ಲಿ 135, 2025ರ ಜನವರಿ ತಿಂಗಳಲ್ಲಿ 130 ಅಡಿ ನೀರು ಬಂದಿದ್ದು, ಈ ವೇಳೆ ಕೋಡಿ ಬಿದ್ದು ಮೂರನೇ ಬಾರಿ ದಾಖಲೆ ಸೃಷ್ಟಿಸಿತ್ತು. ಇದೀಗ ಮತ್ತೆ ಭರ್ತಿಯಾದ್ರೆ, ನಾಲ್ಕನೇ ಬಾರಿ ಆದಂತಾಗಲಿದೆ.

ಯಾವ್ಯಾವ ವರ್ಷ ನೀರಿನ ಮಟ್ಟ ಎಷ್ಟು?: 1917ರಲ್ಲಿ 120.60 ಅಡಿ, 1918 - 121.30, 1919 - 128.30, 1920 - 125.50, 1932 - 125.50, ಅಡಿ, 1933 - 135.25 ಅಡಿ, 1934 - 130.24 ಅಡಿ, 1935 - 123.22 ಅಡಿ, 1956 - 125 ಅಡಿ, 1957 - 125.05 ಅಡಿ, 1958 - 124.50 ಅಡಿ, 2000 - 122.50 ಅಡಿ, 2021 - 125.50 ಅಡಿ, 2022 - 135 ಅಡಿ, 2024ರಲ್ಲಿ 128.40 ಅಡಿ, 2025 ಜನವರಿಯಲ್ಲಿ 130 ಅಡಿ ನೀರು ಸಂಗ್ರ ಆಗಿತ್ತು.

1907ರಲ್ಲಿ ನಿರ್ಮಾಣ ಆಗಿರುವ ಈ ಡ್ಯಾಂಗೆ ಸುಮಾರು 117 ವರ್ಷಗಳ ಕಾಲ ಇತಿಹಾಸ ಇದೆ. ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ "ವೇದಾ" ನದಿ ಕಡೂರಿನ ಬಳಿ "ಅವತಿ" ಎಂಬ ನದಿಯನ್ನು ಸೇರಿ ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ. ಇದು ಕೋಟೆನಾಡು ಅಂತಲೇ ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗ ಜಿಲ್ಲೆಯ ಜೀನವಾಡಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+