Vani Vilasa Sagara: ಬರೋಬ್ಬರಿ 89 ವರ್ಷದ ಬಳಿಕ ಎರಡನೇ ಭಾರಿ ಕೋಡಿ ಹರಿಯಲಿದೆ ಡ್ಯಾಂ ನೀರು
ಹಿರಿಯೂರು, ನವೆಂಬರ್ 02: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜನರ ದಶಕಗಳ ಬಳಿಕ ಮತ್ತೊಮ್ಮ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ನೀರು ಕೋಡಿ ಹರಿಯವುದನ್ನು ಕೆಲವೇ ದಿನಗಳಲ್ಲಿ ನೋಡಲಿದ್ದಾರೆ. ಏಕಂದರೆ ವಾಣಿವಿಲಾಸ ಸಾಗರ ಡ್ಯಾಂ ಬಹುತೇಕ ಭರ್ತಿಯಾಗಿದೆ. ಮೈದುಂಬಿ ಹರಿಯಲು ಕೇವಲ 2.75 ಅಡಿ ಬಾಕಿ ಇದೆ.
30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಈ ವಾಣಿ ವಿಲಾಸ ಸಾಗರ ಡ್ಯಾಂ ಭರ್ತಿಯಾಗಿ ಕೋಡಿ ಬೀಳಲು ಕೇವಲ 2.75 ಅಡಿಯಷ್ಟು ನೀರು ಸಂಗ್ರಹವಾಗುವುದು ಬಾಕಿ ಇದೆ. ನಿರಂತರ ಮಳೆಯಿಂದ ಭರ್ತಿಯಾಗಿರುವ ಡ್ಯಾಂ ನೀರು ಕೆಲವೇ ದಿನಗಳಲ್ಲಿ ಕೋಡಿ ಹರಿಯಲಿದೆ.

ಈ ಜಲಾಶಯದ ಒಟ್ಟು ಎತ್ತರ 135 ಅಡಿ ಇದ್ದು, ಅದರಲ್ಲಿ ನೀರು ಕೋಡಿ ಹರಿದು ಬೀಳಲು ಒಟ್ಟು 130 ಅಡಿವರೆಗೆ ನೀರು ಭರ್ತಿಯಾಗಬೇಕು. ಅದ್ಯ ನೀರಿನ ಮಟ್ಟ 127.15 ಅಡಿ ತಲುಪಿದೆ. ಡ್ಯಾಂ ಒಡಲು ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಡ್ಯಾಂ ನೀರು ನೋಡಲು ಅಕ್ಕಪಕ್ಕದ ಊರಿನವರು ಆಗಮಿಸುತ್ತಿದ್ದಾರೆ.
ಜಲಾಶಯಕ್ಕೆ ಹರಿದು ಬರುತ್ತಿದ್ದ ಒಳಹರಿವಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಕೋಡಿ ಬೀಳಲು ಸ್ವಲ್ಪ ಹಿನ್ನಡೆಯಾಗಿದೆ. ಇಂದು ವಾಣಿ ವಿಲಾಸ ಜಲಾಶಯಕ್ಕೆ 577 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. ಇದರಿಂದ ಜಲಾಶಯದಲ್ಲಿನ ನೀರಿನ ಮಟ್ಟ 127.15 ಅಡಿ ತಲುಪಿದೆ.
ಎರಡನೇ ಭಾರಿ ಕೋಡಿ ಹರಿಯಲಿದೆ ವಿವಿ ಸಾಗರ!
ವಾಣಿವಿಲಾಸ ಸಾಗರ ಮೇಲ್ಭಾಗದಲ್ಲಿ, ಚಿಕ್ಕಮಗಳೂರು, ಡ್ಯಾಂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಡ್ಯಾಂಗೆ ನೀರಿನ ಪ್ರಮಾಣ ಹೆಚ್ಚಾಗಿದೆ. ಈ ಹಿಂದೆ 1935ರಲ್ಲಿ ಜಲಾಶಯ ಮೊದಲ ಬಾರಿಗೆ ಮೈದುಂಬಿ ಹರಿದು ಕೋಡಿ ಬಿದ್ದಿತ್ತು. ಅದಾದ ನಂತರ 89 ವರ್ಷಗಳ ನಂತರ ಮೊದಲು ಬಾರಿಗೆ 2022ರಲ್ಲಿ ತುಂಬಿ ಹರಿದಿದ್ದ ಡ್ಯಾಂ ಈ ಭಾರಿ ಮತ್ತೆ ಕೋಡಿ ಹರಿಯುವ ಸಾಧ್ಯತೆ ಇದೆ.
ಎತ್ತಿನಹೊಳೆ, ಭದ್ರಾ ನೀರು ನಿರಂತರವಾಗಿ ಬಂದರೆ ಇಲ್ಲವೇ ಜಲಾಶಯದ ಮೇಲ್ಭಾಗ ಮಳೆ ಸುರಿದರೆ ವಿವಿ ಸಾಗರ ಜಲಾಶಯದ ಕೋಡಿ ಬೀಳುವ ದಿನ ದೂರವಿಲ್ಲ. ಜುಲೈ ತಿಂಗಳ ಅಂತ್ಯದಲ್ಲಿ 113.08 ರಷ್ಟಿದ್ದ ಜಲಾಶಯದ ನೀರಿನ ಮಟ್ಟ ಇಂದು ಶನಿವಾರ (ನವೆಂಬರ್ 2ಕ್ಕೆ) 127.15 ಅಡಿವರೆಗೆ ತುಂಬಿಕೊಂಡಿದೆ. ಕೇವಲ ನಾಲ್ಕು ತಿಂಗಳಲ್ಲಿ ಸುಮಾರು 14 ಅಡಿಯಷ್ಟು ನೀರು ಸಂಗ್ರಹವಾಗಿದೆ. ಇದರಿಂದ ತಾಲೂಕು, ಚಿತ್ರುದುರ್ಗ ಜಿಲ್ಲೆಯ ಜನರು ಫುಲ್ ಖಷಿಯಾಗಿದ್ದಾರೆ.
ಈ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಇರಲ್ಲ
ಹೆಚ್ಚಾಗಿ ಬರಗಾಲವೇ ಕಂಡು ಬರುವ ಈ ಪ್ರದೇಶದಲ್ಲಿ ಆಸರೆಯಾಗಿರುವ ಈ ವಿವಿ ಸಾಗರ ಜಲಾಶಯವು ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲೂಕುಗಳ ಜನರ ಕುಡಿಯುವ ನೀರಿನ ದಾಹ ನೀಗುತ್ತದೆ. 12135 ಹೆಕ್ಟರ್ ಜಲಾನಯನ ಪ್ರದೇಶಗಳಿಗೆ ನೀರು ಒದಗಿಸುತ್ತದೆ. ಜನರು ಮತ್ತು ಜಾನುವಾರುಗಳ ತತ್ವಾರ ನೀಗಿಸುತ್ತದೆ. ಈ ಭಾರಿ ಬೇಸಿಗೆಯಲ್ಲಿಯೂ ಸಹ
ಜಲಾಶಯದ ನಿರ್ಮಾಣದ ಕಾಲದಲ್ಲಿ ಸಂಪನ್ಮೂಲದ ಕೊರತೆ ಉಂಟಾಗಿದ್ದರಿಂದ ಮಹಾರಾಣಿಯವರ ಒಡವೆ ಅಡವಿಟ್ಟು ಹಣ ಹೊಂದಿಸಿ ಜಲಾಶಯ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದರು ಎನ್ನಲಾಗಿದೆ. ಮೈಸೂರು ಅರಸರ ದೂರದೃಷ್ಟಿಯ ಆಲೋಚನೆಯಿಂದ ನೂರಾರು ವರ್ಷಗಳಿಂದ ಈ ಭಾಗದ ಜನ ಜಾನುವಾರುಗಳ ಕುಡಿಯುವ ನೀರಿನ ದಾಹ ನೀಗಿ ಸಾವಿರಾರು ಎಕರೆ ನೀರಾವರಿ ಸೌಲಭ್ಯ ಪಡೆದಿವೆ. ಈ ಡ್ಯಾಂ ಬರೋಬ್ಬರಿ 129 ಕಿಮೀ ಉದ್ದದ ಕಾಲುವೆ ಹೊಂದಿದೆ.
ಶತಮಾನದ ಹಿಂದೆ ಕಲ್ಲು ಮತ್ತು ಗಾರೆಯಿಂದಲೇ ಕಟ್ಟಲಾಗಿರುವ ಈ ಜಲಾಶಯ ಇಂದಿಗೂ ಗಟ್ಟಿ ಮುಟ್ಟಾಗಿದೆ. ಜಲಾಶಯ ನಿರ್ಮಾಣವಾಗಿ 26 ವರ್ಷಗಳ ನಂತರ ಅಂದರೆ 1933 ರಲ್ಲಿ ಮೊದಲ ಬಾರಿಗೆ ಕೋಡಿ ಬಿದ್ದಿತ್ತು. ಸದ್ಯ ಈ ತಲೆಮಾರಿನ ಜನರು ಡ್ಯಾಂ ಕೋಡಿ ಬೀಳವುದನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿಯಲ್ಲಿ ಜನಿಸುವ ವೇದಾ ನದಿಯು ಮುಂದೆ ಸಾಗಿ ಕಡೂರಿನ ಬಳಿ ಅವತಿ ನದಿ ಜೊತೆ ಸೇರಿ ವೇದಾವತಿ ನದಿಯಾಗಿ ಹರಿದು ವಿವಿ ಸಾಗರಗೆ ಬಂದು ಸೇರುತ್ತದೆ. ಆ ಭಾಗದಲ್ಲಿ ಮಳೆ ಹೆಚ್ಚಾದರೆ ಡ್ಯಾಂ ಒಳಹರಿವು ಏರಿಕೆ ಆಗುತ್ತದೆ. 117 ವರ್ಷಗಳ ಇತಿಹಾಸವಿರುವ ಜಲಾಶಯದ ಎತ್ತರ 135.25 ಅಡಿ ಇದ್ದು ತಾಲೂಕಿನ ಮೂರನೇ ಒಂದು ಭಾಗದಷ್ಟು ರೈತರ ಜಮೀನುಗಳಿಗೆ ನೀರು ಒದಗಿಸುತ್ತದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications