Vani Vilas Sagar Dam: ಉಕ್ಕಿ ಹರಿದ ನದಿಗಳಿಂದ ಅಣೆಕಟ್ಟಿಗೆ ಕಾಯಕಲ್ಪ, ಒಳಹರಿವು ಭಾರೀ ಹೆಚ್ಚಳ
ಬೆಂಗಳೂರು, ಜುಲೈ 28: ರಾಜ್ಯದ ಮಲೆನಾಡಿನ ಭಾಗದಲ್ಲಿ ಮಳೆ ತಕ್ಕ ಮಟ್ಟಿಗೆ ಬಿಡುಗೆ ನೀಡಿದೆ. ಆದರೆ ನದಿಗಳು, ಜಲಾಶಯಗಳ ಒಳಹರಿವು ಮತ್ತು ಹೊರ ಹರಿವು ಇನ್ನೂ ಕಡಿಮೆ ಆಗಿಲ್ಲ. ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಬಿದ್ದ ಮಳೆಗೆ ಕೆರೆಗಳ ನೀರು ಭರ್ತಿಯಾಗಿದ್ದು, ಚಿತ್ರದುರ್ಗದ ಜನರಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.
ಬರಗಾಲ ಪ್ರದೇಶ ಅಂತಲೇ ಕರೆಸಿಕೊಳ್ಳುವ ಈ ಭಾಗದಲ್ಲಿ ವಾಣಿವಿಲಾಸ ಸಾಗರ ನಿರೇ ಆಧಾರ. ಚಿತ್ರದುರ್ಗ, ಹಿರಿಯೂ, ಚಳ್ಳಕೆರೆ ವ್ಯಾಪ್ತಿಯ ಜನರಿಗೆ ನೀರು ನೀಡುವ ಡ್ಯಾಂಗೆ ಚಿಕ್ಕಮಗಳೂರು ಸಮೀಪದ ಅಯ್ಯನಕೆರೆಯಿಂದ ನೀರು ಬಂದಿದೆ. ಮಳೆಯಿಂದಾಗಿ ಅಯ್ಯನಕೆರೆ ನದಿಯ ಒಳಹರಿವು ಹೆಚ್ಚಾಗಿದ್ದು, ಅದು ವೇದಾವತಿ ನದಿಗೆ ಬಂದು ಸೇರುತ್ತಿದೆ.

ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ವಾಣಿವಿಲಾಸ ಸಾಗರ ಜಲಾಶಯವು ಜಿಲ್ಲೆಯ ಸುಮಾರು 2000 ಹೆಕ್ಟೇರ್ ಗಿಂತಲೂ ಅಧಿಕ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತದೆ. ಇದೀಗ ಈ ಡ್ಯಾಂ ಭರ್ತಿಯಾಗುತ್ತಿದೆ. ವೇದಾವತಿ ನದಿ ಮೈದುಂಬಿ ಹರಿಯುತ್ತಿದೆ. ಜನರಲ್ಲಿ ಕುಡಿಯುವ ನಿರೀನ ಕುರಿತು ವಿಶ್ವಾಸ ಹೆಚ್ಚಾಗುವಂತೆ ಮಾಡಿದೆ.
ವೇದಾವತಿ ನದಿಗೆ ಕಾಯಕಲ್ಪ
ಶನಿವಾರ ಮದಗದಕೆರೆ ಉಕ್ಕಿ ಹರಿದಿತ್ತು, ಇಂದು ಅಯ್ಯನಕೆರೆ ಉಕ್ಕಿ ಹರಿಯುತ್ತಿರುವುದು ವೇದಾವತಿ ನದಿಗೆ ಕಾಯಕಲ್ಪ ನೀಡಿದೆ. ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಕೆರೆಗಳು, ನದಿಗಳಲ್ಲಿ ನೀರಿನ ಒಳಹರಿವು ಏರಿಕೆ ಆಗಿದೆ.
ಪ್ರವಾಸಿಸ್ಥಳವು ಆಗಿರುವ ವಾಣಿ ವಿಲಾಸ ಸಾಗರದಲ್ಲಿ ಡ್ಯಾಂ ನಲ್ಲಿ ಭಾನುವಾರ ಅತ್ಯಧಿಕ ಒಳಹರಿವು ಕಂಡು ಬಂದಿದೆ. ಈ ಭಾಗದಲ್ಲಿ ಅಷ್ಟಾಗಿ ಮಳೆ ಆಗಿರಲಿಲ್ಲ. ಚಿಕ್ಕಮಗಳೂರು, ಅರಣ್ಯ ಪ್ರದೇಶಗಳ ಮಳೆ ನಿರೇ ಆಸರೆಯಾಗಿತ್ತು. ಇದೀಗ ಅಲ್ಲೆಲ್ಲ ನದಿ, ಕೆರೆಗಳು ಭರ್ತಿಯಾಗಿ ವೇದಾವತಿ ನದಿಯತ್ತ ಹರಿಯುತ್ತಿವೆ ಈ ನೀರು ಮುಂದಿನ ಬೇಸಿಗೆವರೆಗೂ ನೀರಾವರಿಗೆ, ಕುಡಿಯಲು ಅನುಕೂಲವಾಗಲಿದೆ.
ಈ ಅಣೆಕಟ್ಟಿನ ಒಟ್ಟು ಸಾಮರ್ಥ್ಯ 652 ಟಿಎಂಸಿ ಹೊಂದಿದೆ. ಹೊರ ಹರಿವು 147ಕ್ಯೂಸೆಕ್ ಮಾತ್ರವಿದೆ. ಒಳಹರಿವಿನ ಬಗ್ಗೆ ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಬೇಕಿದ್ದು, ಸದ್ಯದ ಪ್ರಕಾರ ಭಾರೀ ಪ್ರಮಾಣದಲ್ಲಿ ಒಳಹರಿವು ಏರಿಕೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜದ ಮಳೆ ಮುನ್ಸೂಚನೆ
ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಅಬ್ಬರಿಸಿದ್ದ ವರುಣ ತುಸು ಬಿಡುವು ನೀಡಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಆಗಾಗ ಸಾಧಾರಣದಿಂದ ಭಾರಿ ಮಳೆ ಆಗಬಹುದು ಎಂದು ಮುಂದಿನ ಮೂರು ದಿನಗಳ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
Vani Vilasa sagara to see some inflow 🤩👌🏻 https://t.co/fB1Y6ZlBAw
— ರವಿ ಕೀರ್ತಿ ಗೌಡ (@ravikeerthi22) July 27, 2024
ಅರಬ್ಬಿ ಸಮುದ್ರದಲ್ಲಿ ಎದ್ದಿರುವ ವೈಪರಿತ್ಯದಲ್ಲಿ ಏನಾದರೂ ಮತ್ತಷ್ಟು ತೀವ್ರತೆ ಕಂಡು ಬಂದರೆ, ಮತ್ತೆ ಮುಂಗಾರು ಚುರುಕುಗೊಳ್ಳುವ ಸಾಧ್ಯತೆ ಹೆಚ್ಚಿದೆ. ಸದ್ಯ ಒಂದಷ್ಟು ಕಡೆಗಳಲ್ಲಿ ಹುಗುರ, ಸಾಧಾರಣೆ ಮಳೆ ನಿರೀಕ್ಷೆ ಇದೆ.












Click it and Unblock the Notifications