ಉತ್ತರ ಪ್ರದೇಶ ಮಾದರಿಯಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ - ಯಡಿಯೂರಪ್ಪ

Subscribe to Oneindia Kannada

ಚಿತ್ರದುರ್ಗ, ಮೇ 19: ಬರ ಅಧ್ಯಯನ ಪ್ರವಾಸ ಮಾಡುತ್ತಿರುವ ಬಿಜೆಪಿ ನಾಯಕರ ತಂಡ ಇಂದು ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿದೆ.

ಈ ವೇಳೆ ಚಿತ್ರದುರ್ಗದಲ್ಲಿ ಮಾತನಾಡಿದ ಯಡಿಯೂರಪ್ಪ 2018ರ ಕರ್ನಾಟಕ ವಿಧಾನಸಭೆ ಚುನಾವಣೆ ಉತ್ತರ ಪ್ರದೇಶದ ಮಾದರಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

BS Yeddyurappa

ಬಿಜೆಪಿಯಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದೇವೆ. ಜನರ ಅಭಿಪ್ರಾಯವೇ ಅಂತಿಮ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಚುನಾವಣಾ ತಯಾರಿಗೆ ಆಗಸ್ಟ್ 3ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ನಂತರ ಟಿಕೆಟ್ ಹಂಚಿಕೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

BS Yeddyurappa

ಇ೦ದು ಜಿತ್ರದುರ್ಗ ಜಿಲ್ಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಪಕ್ಷದ ಜನಸ೦ಪರ್ಕ ಯಾತ್ರೆಯ ಅ೦ಗವಾಗಿ ಜಿಲ್ಲೆಯ ಪಕ್ಷದ ಕಚೇರಿಯಲ್ಲಿ ಮುಖ೦ಡರೊ೦ದಿಗೆ ಸಭೆ ನಡೆಸಿದರು. ನ೦ತರ ಚೆನ್ನಕ್ಕಿಹೊ೦ಡದ ದಲಿತ ಕಾಲೋನಿಗೆ ಭೇಟಿ ನೀಡಿದರು. ಡಾ.ಬಾಬಾ ಸಾಹೇಬ್ ಅ೦ಬೇಡ್ಕರ್ ಅವರಿಗೆ ಮಾಲಾರ್ಪಣೆ ಸಲ್ಲಿಸಿದ ನ೦ತರ ಅಲ್ಲಿನ ನಿವಾಸಿಗಳೊ೦ದಿಗೆ ಅವರ ಸಮಸ್ಯೆಗಳ ಕುರಿತು ಚರ್ಚಿಸಿದರು.

ಯಾತ್ರೆಯ ಸ೦ದರ್ಭದಲ್ಲಿ, ಎಲ್ಲೆಡೆಯು ನಿರೀಕ್ಷೆ ಮೀರಿದ ಜನಬೆ೦ಬಲ ವ್ಯಕ್ತವಾಗುತ್ತಿದ್ದು, ಪಕ್ಷದ ನೂರಾರು ಕಾರ್ಯಕರ್ತರು, ನಾಯಕರು, ಸ್ಥಳೀಯ ಮುಖ೦ಡರು ರಾಜ್ಯಾಧ್ಯಕ್ಷರ ಜೊತೆಯಲ್ಲಿ ಪಾಲ್ಗೊ೦ಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
We will follow Uttar Pradesh model in ticket distriution said BJP state president BS Yeddyurappa in Chitradurga.
Please Wait while comments are loading...