ಹೊಸದುರ್ಗದಲ್ಲಿ ಭಾರಿ ಸಿಡಿಲು, ಮಳೆಗೆ ಇಬ್ಬರ ಸಾವು

ಚಿತ್ರದುರ್ಗ, ಮೇ 02: ಚಿತ್ರದುರ್ಗದಲ್ಲಿ ನಿನ್ನೆ ಭಾರಿ ಗಾಳಿ, ಮಳೆಯಿಂದಾಗಿ ಒಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದು, ಮತ್ತೋರ್ವ ವ್ಯಕ್ತಿ ತೆಂಗಿನಮರ ಉರುಳಿ ಮೃತಪಟ್ಟಿರುವ ಘಟನೆ ಹೊಸದುರ್ಗ ತಾಲ್ಲೂಕಿನಲ್ಲಿ ನಡೆದಿದೆ.

ಹೊಸದುರ್ಗ ತಾಲ್ಲೂಕಿನ ಮಧುರೆ ಗ್ರಾಮದ ಹೊಲದಲ್ಲಿ ತೆಂಗಿನ ಮರದ ಕೆಳಗೆ ಕುಳಿತಿರುವಾಗ ಮರಕ್ಕೆ ಸಿಡಿಲು ಬಡಿದು ಗೀತಮ್ಮ (45) ಎಂಬುವರು ಮೃತಪಟ್ಟಿದ್ದಾರೆ.,ಶ್ರೀರಾಂಪುರ ಹೋಬಳಿಯ ಆಲ್ಗಟ್ಟ ಗ್ರಾಮದ ರೇಣುಖಾರಾದ್ಯ (35) ಎಂಬ ರೈತನ ಮೇಲೆ ತೆಂಗಿನ ಮರವೊಂದು ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

Two Died Due To Heavy Rain And Thunder In Hosadurga

ವಿಷಯ ತಿಳಿದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಪೊಲೀಸರು ಮತ್ತು ತಹಶೀಲ್ದಾರ್ ತಿಪ್ಪೇಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದೇ ತಾಲ್ಲೂಕಿನ ಮಾಡದಕೆರೆ ಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಸುರಿದ ಗಾಳಿ ಮಳೆಗೆ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ನೀರು ಕುಡಿಯಲು ಹೋದ ಎರಡು ಎಮ್ಮೆಗಳು ಸಾವಿಗೀಡಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+