ಚಳ್ಳಕೆರೆಯಲ್ಲಿ ಆಸ್ತಿ ವೈಷಮ್ಯಕ್ಕೆ ದಾಯಾದಿಗಳ ಮಾರಾಮಾರಿ
ಚಿತ್ರದುರ್ಗ, ಏಪ್ರಿಲ್ 25: ಆಸ್ತಿ ವೈಷಮ್ಯದ ಹಿನ್ನೆಲೆಯಲ್ಲಿ ದಾಯಾದಿಗಳ ನಡುವೆ ಚಿತ್ರದುರ್ಗ ಜಿಲ್ಲೆಯಲ್ಲಿ ಮಾರಾಮಾರಿ ನಡೆದಿದೆ. ಲಾಕ್ ಡೌನ್ ನಡುವೆಯೂ ಬೀದಿಗೆ ಬಂದು ಕಿತ್ತಾಡಿಕೊಂಡಿದ್ದಾರೆ.
Recommended Video
ರಸ್ತೆ ಮಧ್ಯದಲ್ಲೇ ಎರಡು ಎತ್ತುಗಳ ನಡುವೆ ಬಿಗ್ ಫೈಟ್ | Oneindia Kannada
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆನ್ನೂರು ಗ್ರಾಮದಲ್ಲಿ ದಾಯಾದಿಗಳ ನಡುವೆ ಮಾರಾಮಾರಿ ನಡೆದಿದೆ. ಗಲಾಟೆಯಲ್ಲಿ ಇಬ್ಬರು ಗಾಯಗೊಂಡಿರುವ ಕಿರೀಟಪ್ಪ ಮತ್ತು ಶಾರದಮ್ಮ ಚಳ್ಳಕೆರೆ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಚಿವ ಶ್ರೀರಾಮುಲು ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ಮುಖಂಡ ಗೋವಿಂದಪ್ಪನ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದ್ದು, ಗೋವಿಂದಪ್ಪ, ಆತನ ಮಕ್ಕಳು ಮತ್ತು ಅಳಿಯಂದಿರು ಕಲ್ಲು, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ತಳುಕು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications