ಚಿತ್ರದುರ್ಗ: ಕತ್ತಲಲ್ಲಿ ಕ್ಯಾಂಡಲ್ ಹಿಡಿದು ಚಿಕಿತ್ಸೆ ನೀಡ್ತಾರೆ.. ಇದೆಂಥಾ ಸರ್ಕಾರಿ ಆಸ್ಪತ್ರೆ?: ರೋಗಿಗಳ ಆಕ್ರೋಶ.!
ಚಿತ್ರದುರ್ಗ , ಮೇ, 21: ಜಿಲ್ಲೆಯ ಮೊಳಕಾಲ್ಮುರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದೆ ವೈದ್ಯರು ಕ್ಯಾಂಡಲ್ ಹಚ್ಚಿ ರೋಗಿಗಳಿಗೆ ಚಿಕಿತ್ಸೆ ನೀಡಿದ ಘಟನೆ ನಡೆದಿದೆ. ಮೊಳಕಾಲ್ಮೂರು ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ವಿದ್ಯುತ್ ಕಣ್ಣ ಮುಚ್ಚಲೆಯಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಪಟ್ಟಣದಲ್ಲಿರುವ 100 ಹಾಸಿಗಳ ಸರ್ಕಾರಿ ಆಸ್ಪತ್ರೆ ಇದಾಗಿದೆ. ಇಂತಹ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದ ಕಾರಣ ಅಲ್ಲಿನ ವೈದ್ಯರು ಹಾಗೂ ನರ್ಸ್ ಸಿಬ್ಬಂದಿಗಳು ಮೇಣದಬತ್ತಿ ಹಚ್ಚಿಕೊಂಡು ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಜನರೇಟರ್ ಕೆಟ್ಟು 7 ದಿನಗಳಾಗಿವೆ. ದುರಸ್ಥಿ ಮಾಡಿಸುವ ಕೆಲಸವನ್ನು ಆಸ್ಪತ್ರೆಯ ಮೇಲಾಧಿಕಾರಿಗಳಾಗಲಿ ಅಥವಾ ಅಲ್ಲಿನ ಶಾಸಕರಾಗಲಿ ಮುಂದೆ ಬಂದಿಲ್ಲದಿರುವುದು ದುರಂತದ ಸಂಗತಿಯಾಗಿದೆ.
ಈ ಹಿಂದೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರು ಶಾಸಕನಾಗಿದ್ದ ಅವಧಿಯಲ್ಲಿ ಇದೇ ಆಸ್ಪತ್ರೆಯಲ್ಲಿ 23 ಬೆಡ್‌ಗಳ ಐಸಿಯು, ಆಕ್ಸಿಜನ್ ಪ್ಲಾಂಟ್, ಏರ್ಪ್ಲೋ ಆಪರೇಶನ್ ಥೇಟರ್, ಎಲ್ಲಾ ಬೆಡ್‌ಗಳಿಗೂ ಆಕ್ಸಿಜನ್ ಕನೆಕ್ಟಿವಿಟಿ, 12ಕ್ಕೂ ಹೆಚ್ಚು ತಜ್ಞ ವೈದ್ಯರು, ಜನೌಷಧಿ ಕೇಂದ್ರ ಸ್ಥಾಪನೆ, ಹೆಚ್ಚುವರಿ ಆಂಬ್ಯುಲೆನ್ಸ್‌ನಂತಹ ಕಾರ್ಯಗಳನ್ನು ಮಾಡಿದ್ದರು.
ಎಫ್‌ಎಸ್‌ಎಲ್ ವರದಿಯಲ್ಲಿ ಏನಿದೆ?: ಚಿತ್ರದುರ್ಗ ನಗರದ ಬೆಂಗಳೂರು ರಸ್ತೆಯ ಪಾಳು ಬಿದ್ದ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಅಸ್ಥಿಪಂಜರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ವರದಿ ಬಂದಿದ್ದು, ವರದಿಯಲ್ಲಿ ನಿದ್ದೆ ಮಾತ್ರೆ ಅಂಶ ಪತ್ತೆಯಾಗಿದೆ.
ನಿವೃತ್ತ ಎಇಈ ಜಗನಾಥ್ ರೆಡ್ಡಿ, ಪತ್ನಿ ಪ್ರೇಮ ಲೀಲಾ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣ, ನರೇಂದ್ರ ಹೀಗೆ ಐವರು ಸಾಮೂಹಿಕವಾಗಿ ಮನೆಯಲ್ಲಿ ಮೃತಪಟ್ಟಿದ್ದರು. ಇವರ ಅಸ್ಥಿಪಂಜರಗಳು ಮೃತಪಟ್ಟು 4-5 ವರ್ಷಗಳ ಬಳಿಕ, ಮೃತದೇಹಗಳು ಪತ್ತೆಯಾಗಿದ್ದವು. ಈ ಸಾವಿನ ಕಾರಣ ತಿಳಿಯಲು FSLಗೆ ಪೊಲೀಸರು ವರದಿ ಕಳುಹಿಸಿದ್ದರು.
ಇದೀಗ ಮೃತದೇಹ ಮರಣೋತ್ತರ ಪರೀಕ್ಷೆ ಮಾಡಿ ವರದಿ ಬಂದಿದ್ದು, ಐವರ ಮೃತದೇಹಗಳಲ್ಲಿ ಬಹುತೇಕ ನಿದ್ರೆ ಮಾತ್ರೆಯ ಅಂಶ ಪತ್ತೆ. ಇನ್ನು ಈ ವರದಿಯಲ್ಲಿ ನಿದ್ದೆಮಾತ್ರೆ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಎಫ್‌ಎಸ್‌ಎಲ್ ವರದಿ ಪ್ರಕರಣದ ತನಿಖಾಧಿಕಾರಿ ಕೈ ಸೇರಿದ್ದು, ನಿದ್ರೆ ಮಾತ್ರೆ ಸೇವಿಸಿ ಮೃತಪಟ್ಟದ್ದನ್ನು ಅಲ್ಲಗಳೆಯುವಂತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಪ್ರಕರಣ ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ವಿಚಾರವಾಗಿ ಎಸ್ಪಿ ಸುದ್ದಿಗೋಷ್ಠಿ ನಡೆಸಿ ನಂತರ ಮಾಹಿತಿ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications