ಕಾವೇರಿ ವಿಚಾರದಲ್ಲಿ ಸಂಸದರು ಧ್ವನಿ ಎತ್ತಬೇಕು-ಸಚಿವ ಮಧು ಬಂಗಾರಪ್ಪ

ಚಿತ್ರದುರ್ಗ, ಸೆಪ್ಟೆಂಬರ್‌ 27: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ವಿಚಾರದಲ್ಲಿ ರಾಜ್ಯದ ಸಂಸದರು ಧ್ವನಿ ಎತ್ತಲಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆರೋಪಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರದಲ್ಲಿ ಸಂಸದರು ಏನು ಮಾಡುತ್ತಿದ್ದಾರೆ..? ಕಾವೇರಿ ವಿಚಾರವಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

State MPs Should Raise Their Voice On Cauvery Issue

ಸರ್ಕಾರ ಮಟ್ಟದಲ್ಲಿ ಕೆಲವು ಕಾನೂನುಗಳು ಇರುತ್ತವೆ. ಅದೇ ಪ್ರಕಾರವಾಗಿ ಕೆಲವು ತೀರ್ಮಾನಗಳು ಆಗುತ್ತದೆ, ಅವರು ಕೂಡ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಕೋರ್ಟ್‌ನವರು ಸಿಡಬ್ಲೂಸಿಗೆ ಹಾಕಿದ್ದಾರೆ. ಸಿಡಬ್ಲೂಸಿ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಇತ್ತ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪಗೆ ಏನಾಗಿದೆ ?. ದೆಹಲಿಗೆ ಹೋಗಿ ಒತ್ತಾಯ ಮಾಡಬೇಕು ಎಂದು ಎಂದರು.

ಕಾವೇರಿ ನೀರಿನ ಬಗ್ಗೆ ವಾಸ್ತವಾಂಶ ಅವರಿಗೂ ಗೊತ್ತಿದೆ ಅಲ್ವಾ, ವಾಸ್ತವಾಂಶ ಗೊತ್ತಿದ್ದ ಮೇಲೆ ನಮ್ಮ ಮೇಲೆ ಗೂಬೆ ಕೂರಿಸುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ. ವಾಸ್ತವಾಂಶ ನೋಡಿಕೊಂಡು ಹೋರಾಟ ಮಾಡುತ್ತಿದ್ದೇವೆ. ನೀರೇ ಇಲ್ಲ ಅಂದ್ರೆ ನೀರು ಕೊಡಿ ಅಂದ್ರೆ ಹೆಂಗೆ ಕೊಡೋದು..? ನಮ್ಮಲ್ಲಿ ನೀರಿಲ್ಲ, ನೀರು ಕೊಡಲು ಆಗಲ್ಲ ಸಿಡಬ್ಲೂಸಿನ ಬದಲಾವಣೆ ಮಾಡಿ ಅಂತ ಯಡಿಯೂರಪ್ಪ ಹೇಳಬೇಕು. ಅದನ್ನ ಬಿಟ್ಟು ಇಲ್ಲಿ ಬಂದು ನಮ್ಮನ್ನ ಬ್ಲೇಮ್ ಗೇಮ್ ಆಡೋದು ಮುಖ್ಯ ಅಲ್ಲ ಎಂದು ಬಿಜೆಪಿಯನ್ನು ದೂರಿದರು.

State MPs Should Raise Their Voice On Cauvery Issue

ಇನ್ನು ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು, ಅದೆಲ್ಲ ಕಾನೂನು ಬದ್ಧವಾಗಿ ಪ್ರಕ್ರಿಯೆ ಆಗುತ್ತದೆ.ಮುಂದಿನ ವರ್ಷವೇ ಹೊಸ ಪಠ್ಯ ಮಾಡುವುದು. ಈಗಾಗಲೇ ನಾನು ಬಂದಾಗಲೇ ಬದಲಾವಣೆ ಮಾಡಿದ್ದೇನೆ. ಅದನ್ನು ಮುಂದುವರೆದ ಭಾಗ ಮುಂದುವರೆಯುತ್ತದೆ ಎಂದು ತಿಳಿಸಿದರು.

ಕಾವೇರಿ ವಿಚಾರದಲ್ಲಿ ರಾಜ್ಯದಲ್ಲಿ ಬಂದ್ ವಿಚಾರದಲ್ಲಿ ಹೋರಾಟ ಹತ್ತಿಕ್ಕುವ ಕೆಲಸ ಆಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಉತ್ತರ ಕೊಡುವ ಪ್ರಶ್ನೆ ಅಲ್ಲವೇ ಅಲ್ಲ. ಕೇಂದ್ರ ಹಾಗೂ ಸಿಡಬ್ಲೂಸಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ನೀರು ಇಲ್ಲ ಅಂತ ವಾಸ್ತು ಸ್ಥಿತಿ ನೋಡಿದರೆ ಅವರಿಗೆ ಅರ್ಥ ಆಗುತ್ತದೆ. ಅರ್ಥ ಮಾಡಿಸುವಲ್ಲಿ ಯಾರೂ ಮಾಡ್ಬೇಕು..? ರಾಜ್ಯದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಬಿಜೆಪಿ ಇದೆ. ಉದ್ದೇಶ ಪೂರ್ವಕವಾಗಿ ಇದನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಇದನ್ನು ಯಡಿಯೂರಪ್ಪ ನಾಯಕತ್ವದಲ್ಲಿ ಸಂಸದರು ಹೋಗಿ ಅರ್ಥ ಮಾಡಿಸಬೇಕು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+