"ಗೊಲ್ಲರಹಟ್ಟಿಗೆ ಸಂಸದರ ಪ್ರವೇಶ ತಡೆದ ಘಟನೆ ವೈಭವೀಕರಿಸಿದ್ದೇಕೆ?"

ಚಿತ್ರದುರ್ಗ, ಸೆಪ್ಟೆಂಬರ್ 29: ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಪ್ರವೇಶ ಕಲ್ಪಿಸಲಿಲ್ಲ ಎಂಬ ಪ್ರಕರಣವನ್ನು ವಿನಾಕಾರಣ ವೈಭವೀಕರಿಸಲಾಗಿದೆ. ಇದರಲ್ಲಿ ರಾಜಕೀಯ ಕೋಮುವಾದಿಗಳ ಷಡ್ಯಂತ್ರ ಅಡಗಿದೆ ಎಂದು ರಾಜ್ಯ ಕಾಡುಗೊಲ್ಲರ ಸಂಘದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

"ಹಿಂದಿನಿಂದಲೂ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಇಂತಹ ಯಾವುದೇ ಘಟನೆಗಳು ಜರುಗಿರಲಿಲ್ಲ. ಈ ಜಿಲ್ಲೆಯನ್ನಾಳಿದ ಕೆ.ಎಚ್.ರಂಗನಾಥ್, ಡಿ.ಮಂಜುನಾಥ್, ಆಂಜನೇಯ, ಮಾಜಿ ಸಂಸದ ಚಂದ್ರಪ್ಪ ಇವರ ಅಧಿಕಾರದ ಕಾಲದಲ್ಲಿ ಹೀಗೆಲ್ಲ ಆಗಿರಲಿಲ್ಲ. ಆದರೆ ಈಗ ಏಕಾಏಕಿ ಈ ಘಟನೆ ನಡೆಯಲು ಹೇಗೆ ಸಾಧ್ಯ? ಚುನಾವಣಾ ಸಂದರ್ಭದಲ್ಲಿ ಸಂಸದರಿಗೆ ಈ ಅನುಭವ ಯಾಕೆ ಆಗಲಿಲ್ಲ" ಎಂದು ಪ್ರಶ್ನಿಸಿದರು ಸಂಘದ ಸಿ.ಶಿವು ಯಾದವ್.

State Kadugolla Organisation Opposed Glorification Of Gollarahatti Incident

"ಈ ದೇಶದಲ್ಲಿ ಜಾತಿ ವ್ಯವಸ್ಥೆ ಇದೆ ಎಂದಿರುವ ಸಂಸದರು ಚಿತ್ರದುರ್ಗ ಲೋಕಸಭಾ ಮೀಸಲು ಕ್ಷೇತ್ರದಿಂದ ಯಾಕೆ ಸ್ಪರ್ಧೆ ಮಾಡಿದರು? ಈ ಪೆಮ್ಮನಹಳ್ಳಿ ಘಟನೆ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವುದು ಸ್ಪಷ್ಟವಾಗಿ ತಿಳಿಯುತ್ತದೆ" ಎಂದು ಅನುಮಾನ ವ್ಯಕ್ತಪಡಿಸಿದರು. "ಕಾಡುಗೊಲ್ಲರು ಅವರ ನಂಬಿಕೆಯನ್ನು ಅನುಸರಿಸಿದರೆ ತಪ್ಪೇ? ಈ ಘಟನೆಯನ್ನು ಅನವಶ್ಯಕವಾಗಿ ವೈಭವೀಕರಿಸಲಾಗಿದೆ" ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+