ಎಚ್ಡಿಕೆಗೆ ಭಾರತ ಬಿಟ್ಟು ತೊಲಗಿ ಎಂದು ತಿರುಗೇಟು ನೀಡಿದ ಶ್ರೀರಾಮುಲು
Recommended Video
ಮಿಣಿ ಮಿಣಿ ಕುಮಾರಣ್ಣ ಭಾರತ ಬಿಟ್ಟು ತೊಲಗಬೇಕಂತೆ..! | Oneindia Kannada
ಚಿತ್ರದುರ್ಗ, ಜನವರಿ 24: ನೆರೆ ದೇಶ ಪಾಕಿಸ್ತಾನದ ಮೇಲೆ ಅಪಾರ ಪ್ರೀತಿ ಇದ್ದರೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಭಾರತ ಬಿಟ್ಟು ತೊಲಗಲಿ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ನಿನ್ನೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದ ಸಚಿವ ಬಿ.ಶ್ರೀರಾಮುಲು ಅವರು, ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದರು.
""ಕುಮಾರಸ್ವಾಮಿ ಅವರು ದೇಶದ ಬಗ್ಗೆ ಚಿಂತಿಸುವ ರಾಜಕಾರಣಿ ಅಲ್ಲ, ಪಾಕಿಸ್ತಾನದ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ದೇಶ ಬಿಟ್ಟು ತೊಲಗಿ, ಪಾಕಿಸ್ತಾನದ ಬಗ್ಗೆ ಇಷ್ಟು ಪ್ರೀತಿ ಇದ್ದಾಗ ಭಾರತದಲ್ಲಿ ಏಕೆ ಇರಬೇಕು'' ಎಂದು ಪ್ರಶ್ನೀಸಿದರು.

ಈ ರೀತಿ ಡಬಲ್ ಸ್ಟ್ಯಾಂಡಿಂಗ್ ರಾಜಕಾರಣ ಮಾಡಬೇಡಿ, ಕುಮಾರಸ್ವಾಮಿ ಮಾತನಾಡುವಾಗ ಓಟ್ ಬ್ಯಾಂಕ್ ರಾಜಕಾರಣಕ್ಕೆ ಆ ರೀತಿ ಮಾತನಾಡುತ್ತಾರೆ. ಮಾಜಿ ಪ್ರಧಾನಿ ಮಂತ್ರಿಗಳ ಮಗನಾಗಿ, ಅದರಲ್ಲೂ ಮಾಜಿ ಮುಖ್ಯಮಂತ್ರಿಯಾಗಿ ನಿಮ್ಮ ಹೇಳಿಕೆಗಳು ಭಾರತಿಯರಿಗೆ ನೋವು ತರುತ್ತವೆ ವಾಗ್ದಾಳಿ ಎಂದರು.












Click it and Unblock the Notifications