ಚಿತ್ರದುರ್ಗ: ತಂದೆಯನ್ನೇ ಕೊಲೆಗೈದು ಪೊಲೀಸ್ ಠಾಣೆಗೆ ಬಂದ ಪಾಪಿ ಮಗ, ಯಾವ ವಿಚಾರಕ್ಕೆ ಗೊತ್ತಾ?
ಚಿತ್ರದುರ್ಗ, ನವೆಂಬರ್, 06: ಸಾಕಿ ಸಲಹಿದ ತಂದೆಯನ್ನೇ ಮಗ ಬರ್ಬರವಾಗಿ ಹತ್ಯೆ ಮಾಡಿದ್ದು, ಬಳಿಕ ಆರೋಪಿ ಮಗ ಪೊಲೀಸ್ ಠಾಣೆಗೆ ಬಂದ ಘೋರ ಘಟನೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ವರವು ಕಾವಲು ಬಳಿ ಈ ಘಟನೆ ನಡೆದಿದ್ದು, ಸೂರಯ್ಯ (55) ವರ್ಷ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೊಲೆಯಾದ ವ್ಯಕ್ತಿಯನ್ನು ಚಳ್ಳಕೆರೆ ತಾಲೂಕಿನ ಬತ್ತಯ್ಯನ ಹಟ್ಟಿ ನಿವಾಸಿಯಾಗಿದ್ದು, ಮಗ ಮೋಹನ್ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ತಂದೆಯನ್ನು ಹತ್ಯೆ ಮಾಡಿದ ಬಳಿಕ ಮಗ ನೇರವಾಗಿ ಚಳ್ಳಕೆರೆ ಠಾಣೆಗೆ ಬಂದು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾನೆ.

ತಡರಾತ್ರಿ ಕುಡಿದ ಮತ್ತಿನಲ್ಲಿ ತಂದೆ- ಮಗನ ನಡುವೆ ಜಗಳ ನಡೆದಿತ್ತು. ಇಂದು ಬೆಳಗಿನ ಜಾವದಲ್ಲಿ ತಂದೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಸಮೀವುಲ್ಲಾ ಭೇಟಿ, ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಈ ಘಟನೆ ಚಳ್ಳಕೆರೆಯ ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.












Click it and Unblock the Notifications