ಡೆತ್‌ನೋಟ್‌ನಲ್ಲಿ ಹೊಳಲ್ಕೆರೆ ಶಾಸಕರ ಹೆಸರು ಬರೆದಿಟ್ಟು SDA ನೌಕರ ಆತ್ಮಹತ್ಯೆ
ಚಿತ್ರದುರ್ಗ, ಆಗಸ್ಟ್, 006: ಗ್ರಾಮ ಪಂಚಾಯತಿಯ ದ್ವಿತೀಯ ದರ್ಜೆ ನೌಕರರೊಬ್ಬ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸದುರ್ಗ ತಾಲೂಕಿನ ಜಾನಕೊಂಡ ಗ್ರಾಮದಲ್ಲಿ ನಡೆದಿದೆ.
ಇನ್ನು ಮೃತ ವ್ಯಕ್ತಿಯನ್ನು ಉಪ್ಪರಿಗೆನಹಳ್ಳಿ ಗ್ರಾಮ ಪಂಚಾಯತಿಯ ಎಸ್‌ಡಿಎ ನೌಕರ ತಿಪ್ಪೇಸ್ವಾಮಿ ಎಂದು ತಿಳಿದುಬಂದಿದೆ.
ಮೃತ ತಿಪ್ಪೇಸ್ವಾಮಿಯು ತನ್ನ ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದಾರೆ. ಈ ಡೆತ್‌ನೋಟ್‌ನಲ್ಲಿ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಹೆಸರು ಬರೆದಿಟ್ಟು ಸಾವಿಗೀದ್ದಾರೆ.
"ನಾನು ಉಪ್ಪರಿಗೆನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದೆನೆ. ನಾನು ಸಾಯಲು ಕಾರಣವೇನೆಂದರೆ ಪಂಚಾಯತಿಯಲ್ಲಿ ಬಹಳ ಕಿರುಕುಳ ಕೊಡುತ್ತಿದ್ದರು. ದಿನಾಂಕ ಆಗಸ್ಟ್ 3,2023ರಂದು ಶಾಸಕ ಎ. ಚಂದ್ರಣ್ಣನವರು ನನ್ನನ್ನು ಅಮಾನತು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.

ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿ ಅವರು ಬರೀ ಎಸ್ಸಿ ಜನಾಂಗದಲ್ಲಿ ಕೆಲಸ ಮಾಡಿಕೊಡು ಎಂದು ಪಿಡಿಒ ಅವರನ್ನು ಹಿಂಸೆ ಕೊಡುತ್ತಿದ್ದರು. ಅಲ್ಲದೆ ಉಪ್ಪರಿಗೆನಹಳ್ಳಿ ಎಸ್ಸಿ ಜನಾಂಗದವರು ಅಂದರೆ ಮೋಹನ್ ಕುಮಾರ್ ಮತ್ತು ಸ್ನೇಹಿತರು ಸುಮಾರು 20ರಿಂದ 30 ಜನ ಹೆಸರು ಗೊತ್ತಿಲ್ಲ. ಮೋಹನ್ ಮತ್ತು ಮೂರ್ತಿ ಉಗ್ರಪ್ಪ, ರಾಜಣ್ಣ ಇವರು ಖಾತೆಯನ್ನು ಮಾಡಿಸಿಕೊಂಡಿರುತ್ತಾರೆ. ಹೀಗೆ ಕಾರಣಗಳನ್ನು ಆತ್ಮಹತ್ಯೆ ಪತ್ರದಲ್ಲಿ ಬರೆದು ದ್ವಿತೀಯ ದರ್ಜೆ ನೌಕರರ ಮೃತಪಟ್ಟಿದ್ದಾನೆ. ತನಿಖೆ ನಂತರ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಮೃತ ತಿಪ್ಪೇಸ್ವಾಮಿಯು ಮೂಲತಃ ಸೊಂಡೆಕೊಳ ಗ್ರಾಮದವರಾಗಿದ್ದು, ಹೊಳಲ್ಕೆರೆ ತಾಲೂಕಿನ ಉಪ್ಪರಿಗೆನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.












Click it and Unblock the Notifications