ಗಣೇಶೋತ್ಸವ ಶೋಭಾಯಾತ್ರೆ: ಹತ್ಯೆಯಾದ ಹಿಂದೂ ಕಾರ್ಯಕರ್ತರ ಭಾವಚಿತ್ರ ಮೆರವಣಿಗೆ

ಚಿತ್ರದುರ್ಗ, ಸೆಪ್ಟೆಂಬರ್ 10 : ಹಿಂದೂ ಮಹಾಗಣಪತಿ ವಿಸರ್ಜನೆ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಹತ್ಯೆಯಾಗಿ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರ ಭಾವಚಿತ್ರ ಹಾಗೂ ಸಾವರ್ಕರ್ ಪೋಟೋ ಮೆರವಣಿಗೆ ಮಾಡಲಾಗಿದೆ.

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಹಮ್ಮಿಕೊಂಡಿದ್ದ ಹಿಂದೂ ಮಹಾಗಣಪತಿ ವಿಸರ್ಜನೆ ಶೋಭಾಯಾತ್ರೆ ಕಾರ್ಯಕ್ರಮ ನಡೆಯಿತು. ಇದರಲ್ಲಿ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶಿವು ಉಪ್ಪಾರ್, ಹರ್ಷ ಹಿಂದೂ, ಪ್ರವೀಣ್ ನೆಟ್ಟಾರು, ರುದ್ರೇಶ್ ಸೇರಿದಂತೆ ಹತ್ಯೆಯಾಗಿದ್ದ 12 ಹಿಂದೂ ಕಾರ್ಯಕರ್ತರ ಭಾವಚಿತ್ರಗಳನ್ನು ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಮಾಡಲಾಯಿತು.

ಧರ್ಮ ಬದ್ಧತೆಯ ರೂಪವೇ ಹಿರಿಯೂರು ನಗರವಾಗಿದೆ. ಗಣೇಶೋತ್ಸವ ಜಾಗೃತಿಯ ಆಧಾರದ ಮೇಲೆ ನಿಂತಿದೆ. ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ ನಡೆದವು, ಆಗ ಹಿಂದೂಗಳನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಗರ್ಭಗುಡಿಯೊಳಗಿದ್ದ ಗಣಪತಿ ದೇವಸ್ಥಾನ ಬಿಟ್ಟು ಬೀದಿಗೆ ಬಂದು ನಿಂತಿದ್ದ. ಹಿಂದೂಗಳು ಜಾಗೃತರಾಗಲಿ ಎಂದು ವರ್ಷಕ್ಕೊಮ್ಮೆ ತಪ್ಪದೇ ಬರುವವನು ಗಣಪತಿ ಎಂದು ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ತಿಳಿಸಿದರು.

Portrait Procession of slain Hindu activists in Ganesha Shobha Yatra in Chitradurga

ಹಿಂದೂಗಳನ್ನು ಒಗ್ಗೂಡಿಸಲು ದೇವಸ್ಥಾನದಿಂದ ಗಣಪತಿ ನಡು ರಸ್ತೆಗೆ ಬಂದಿದ್ದಾನೆ. ಸುಮಾರು 200 ವರ್ಷಗಳ ಹಿಂದೆ ಬ್ರಿಟಿಷರು, ಡಚ್ಚರು, ಪೋರ್ಚುಗೀಸರು ನಮ್ಮ ಮೇಲೆ ದಾಳಿ ಮಾಡುವಾಗ ಛತ್ರಪತಿ ಶಿವಾಜಿ ಆದರ್ಶಗಳನ್ನು ಗುರಿಯಾಗಿಟ್ಟುಕೊಂಡು ಬಾಲಗಂಗಾಧರ ತಿಲಕರು ಗಣೇಶೋತ್ಸವಕ್ಕೆ ಪ್ರಾರಂಭ ಮಾಡಿದರು ಎಂದು ತಿಳಿಸಿದರು.

ಭಾರತದಲ್ಲಿ ಹಿಂದೂ ಜಾಗೃತಿಗಾಗಿ ಪ್ರತಿ ಊರಿಗೂ ಕರೆ ಕೊಟ್ಟವರು ವೀರ ಸಾವರ್ಕರ್, ಭಾರತದ ಇತಿಹಾಸದಲ್ಲೂ ಶತ್ರುಗಳಿಂದಲೂ ವೀರ ಎಂದು ಕರೆಸಿಕೊಂಡ ಏಕೈಕ ಸ್ವಾತಂತ್ರ್ಯ ಹೋರಾಟಗಾರ ಎಂದರೆ ಅದು ವೀರ ಸಾರ್ವಕರ್. ಅವರ ಬಗ್ಗೆ ಎಲ್ಲರೂ ತಿಳಿಯಬೇಕಿದೆ. ಕೆಲವರಿಗೆ ಸಾವರ್ಕರ್ ಹೆಸರು ಕೇಳಿದರೆ ಉರಿಯುತ್ತದೆ. ಸಾವರ್ಕರ್ ವಿರುದ್ಧ ಸಾಲು ಸಾಲು ಆರೋಪ ಮಾಡುವವರಿಗೆ ಹೇಳಬೇಕಿದೆ. ಇಡೀ ಇತಿಹಾಸ ಎರಡು ಬಾರಿ ಇಡೀ ಜೀವನದುದ್ದಕ್ಕೂ ಕಾಲಾಪಾನಿ ಶಿಕ್ಷೆಗೆ ಗುರಿಯಾಗಿದ್ದ ಏಕೈಕ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+