'ಠಾಣೆಗೆ ಬೆಂಕಿ ಹಚ್ತೀವಿ' ಎಂದಿದ್ದ ಹೊಸದುರ್ಗ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ

ಚಿತ್ರದುರ್ಗ, ಜನವರಿ 08 : ಪೊಲೀಸ್ ಠಾಣೆಗೆ ಬೆಂಕಿ ಹಚ್ತೀವಿ ಎಂದಿದ್ದ ಚಿತ್ರದುರ್ಗ ಹೊಸದುರ್ಗದ ಬಿಜೆಪಿ ಶಾಸಕ ಎಂ.ಚಂದ್ರಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.

ಶಾಸಕ ಗೂಳಿಹಟ್ಟಿ ಶೇಖರ್ ಅವರ ಆತ್ಮಹತ್ಯೆ ಯತ್ನ ಮತ್ತು ಅದರ ನಂತರ ನಡೆದ ಘಟನೆಗಳಿಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸುತ್ತಾ, ಬಿಜೆಪಿ ಶಾಸಕ ಎಂ.ಚಂದ್ರಪ್ಪ ಅವರು, ಅಧಿಕಾರಿಗಳನ್ನು ಓಡಿಸಿಕೊಂಡು ಹೊಡೆಯುತ್ತೇವೆ, ಪೊಲೀಸ್ ಠಾಣೆಗೆ ಬೆಂಕಿ ಇಡುತ್ತೇವೆ ಎಂದು ಬೆದರಿಕೆ ಹಾಕಿದ್ದರು.

ಉದ್ರೇಕಕಾರಿ ಮತ್ತು ಹಿಂಸೆಗೆ ಪ್ರಚೋದಿಸುವ ಹೇಳಿಕೆ ನೀಡಿದ ಎಂ.ಚಂದ್ರಪ್ಪ ವಿರುದ್ಧ ಚಿತ್ರದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ನಿನ್ನೆಯೇ ಚರ್ಚೆ ನಡೆದಿತ್ತು.

Police case registered against Hosadurga BJP MLA M Chandrappa

ಮರಳು ದಂಧೆ ಸಂಬಂಧ ಪ್ರತಿಭಟನೆ ಮಾಡುತ್ತಿದ್ದ ಗೂಳಿಹಟ್ಟಿ ಶೇಖರ್ ಅವರು, ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರ ಮೇಲೂ ಪೊಲೀಸರು ಆತ್ಮಹತ್ಯೆಗೆ ಯತ್ನದ ಪ್ರಕರಣ ದಾಖಲಿಸಿದ್ದಾರೆ.

ಗೂಳಿಹಟ್ಟಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದರೆ ಠಾಣೆಗೆ ಬೆಂಕಿ ಇಡುತ್ತೇವೆ, ಅಧಿಕಾರಿಗಳಿಗೆ ಹೊಡೆಯುತ್ತೇವೆ ಎಂದು ಎಂ.ಚಂದ್ರಪ್ಪ ಹೇಳಿದ್ದರು. ಜೊತೆಗೆ ಚಿತ್ರದುರ್ಗ ಜಿಲ್ಲಾ ಎಸ್‌ಪಿ ಬಗ್ಗೆಯೂ ಲಘುವಾಗಿ ಮಾತನಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+