ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ: ಮರಳಿ ಗೂಡು ಸೇರಿದ ಶಬರಿ ಮಲೆಯಲ್ಲಿ ಬಿಟ್ಟ ಪಾರಿವಾಳ

|
Google Oneindia Kannada News

ಚಿತ್ರದುರ್ಗ ಜನವರಿ 4: ಚಿತ್ರದುರ್ಗದಲ್ಲಿ ಆಶ್ಚರ್ಯಕರ ಸಂಗತಿಯೊಂದು ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾ. ಮೇಗಳಹಟ್ಟಿ ಗ್ರಾಮದಲ್ಲಿ ಪಾರಿವಾಳ ಪವಾಡ ಮಾಡಿದೆ. ಶಬರಿ ಮಲೆ ಯಾತ್ರೆಯಲ್ಲಿ ಬಿಟ್ಟ ಪಾರಿವಾಳ ಮರಳಿ ತನ್ನ ಗೂಡಿಗೆ ಸೇರಿದೆ. ಕೇರಳದಲ್ಲಿ ಬಿಟ್ಟ ಮಾಲಾದಾರಿಯ ಪಾರಿವಾಳ ಮರಳಿ ಗೂಡಿಗೆ ಬಂದಿದೆ. ಮೇಗಳಹಟ್ಟಿ ಗ್ರಾಮದ ವೆಂಕಟೇಶ್ ಅವರ ಪಾರಿವಾಳ ಜ.30 ರಂದು ಶಬರಿಮಲೆಯಲ್ಲಿ ಹಾರಿ ಬಿಟ್ಟಿದ್ದರು. ನಾಲ್ಕು ದಿನಗಳ ಬಳಿಕ ಆ ಪಾರಿವಾಳ ಮೇಗಳಹಟ್ಟಿ ಗ್ರಾಮಕ್ಕೆ ಆಗಮಿಸಿದೆ. ಪಾರಿವಾಳ ಆಗಮಿಸಿದ್ದನ್ನು ಕಂಡು ಗ್ರಾಮಸ್ಥರಲ್ಲಿ ಅಚ್ಚರಿ ಹುಟ್ಟುಹಾಕಿದೆ.

ಕೇರಳ ರಾಜ್ಯದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವು ವಿಶ್ವ ವಿಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿದೆ. ಈ ದೇವಸ್ಥಾನದ ಐತಿಹ್ಯಗಳೇ ಸಾಕು ನಮ್ಮನ್ನು ವಿಸ್ಮಯಗೊಳಿಸಲು. ಹೀಗಿರುವಾಗ ಪಾರಿವಾಳ ಅಯ್ಯಪ್ಪನ ಆಶೀರ್ವಾದ ಪಡೆದು ಪುನ: ಆಗಮಿಸಿದೆ ಎಂದು ಹೇಳಲಾಗುತ್ತದೆ.

ಕೇರಳ KSRTC: ಫೋನ್‌ ಪೇ ಕ್ಯೂಆರ್‌ ಕೋಡ್‌ ಬಳಸಿ ಟಿಕೆಟ್‌ ಖರೀದಿಸುವ ವ್ಯವಸ್ಥೆಕೇರಳ KSRTC: ಫೋನ್‌ ಪೇ ಕ್ಯೂಆರ್‌ ಕೋಡ್‌ ಬಳಸಿ ಟಿಕೆಟ್‌ ಖರೀದಿಸುವ ವ್ಯವಸ್ಥೆ

ಶಬರಿಮಲೆ ಎಂದೊಡನೆ ಎಲ್ಲರಿಗೂ ಅಯ್ಯಪ್ಪ ಸ್ವಾಮಿಯ ಹೆಸರು ತಟ್ಟನೆ ಮನಸ್ಸಿಗೆ ಬರುವುದು ಖಂಡಿತ.ಪಶ್ಚಿಮ ಘಟ್ಟ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಈ ಪವಿತ್ರ ಯಾತ್ರಾ ಸ್ಥಳವು ಕೇರಳ ರಾಜ್ಯದ ಪತನಂತಿಟ್ಟ ಜಿಲ್ಲೆಯ ಪೆರುನಾಡ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದೆ.

Pigeon left in Sabari hill returned to its nest

ಧಾರ್ಮಿಕ ದಂತಕಥೆಯ ಪ್ರಕಾರ, ಸಾಗರ ಮಂಥನದ ಸಮಯದಲ್ಲಿ, ಭಗವಾನ್ ವಿಷ್ಣುವಿನ ಮೋಹಿನಿ ರೂಪದಿಂದ ಆಕರ್ಷಿತನಾಗುತ್ತಾರೆ ಮತ್ತು ಈ ಕಾರಣದಿಂದಾಗಿ, ಒಂದು ಮಗು ಜನಿಸಿತು. ಅದನ್ನು ಪಂಪಾ ನದಿಯ ತೀರದಲ್ಲಿ ಬಿಡಲಾಗುತ್ತದೆ . ಈ ಸಮಯದಲ್ಲಿ, ರಾಜ ರಾಜಶೇಖರ ಅವರನ್ನು 12 ವರ್ಷಗಳ ಕಾಲ ಬೆಳೆಸಿದರು. ಈ ಮಗುವನ್ನೇ ನಂತರ ಅಯ್ಯಪ್ಪ ಸ್ವಾಮಿ ಎಂದು ಕರೆಯಲಾಯಿತು.

Pigeon left in Sabari hill returned to its nest

ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿ ಮತ್ತು ತಪಸ್ವಿಯಾಗಿದ್ದರು. ಅದಕ್ಕಾಗಿಯೇ 10 ರಿಂದ 50 ವರ್ಷ ವಯಸ್ಸಿನ ಹುಡುಗಿಯರು ಮತ್ತು ಮಹಿಳೆಯರು ಈ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಅಯ್ಯಪ್ಪ ದೇವರು ಬ್ರಹ್ಮಚಾರಿಯಾಗಿರುವ ಕಾರಣದಿಂದ ಮಹಿಳೆಯರಿಗೆ ಮಂದಿರಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಅಲ್ಲದೆ ಹಿಂದೂ ಧರ್ಮದ ಪ್ರಕಾರ ಋತುಮತಿಯಾಗುವ ವಯಸ್ಸಿನ ಹೆಣ್ಣು ಮಕ್ಕಳನ್ನು ದೇವಾಲಯದ ಒಳಗೆ ಬರಲು ಅವಕಾಶವಿಲ್ಲ ಎಂಬ ದಂತಕಥೆಯ ಸಲುವಾಗಿ ಈ ವಯಸ್ಸಿನ ಒಳಗಿನ ಹೆಂಗಸರನ್ನು ದೇವಾಲಯದೊಳಗೆ ಬಿಡುವುದಿಲ್ಲ. ಅಲ್ಲದೆ ಅಯ್ಯಪ್ಪ ಸ್ವತಃ ಬ್ರಹ್ಮಚಾರಿಯಾಗಿರುವುದರಿಂದಾಗಿ ಸಹ ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ ಎಂಬುದು ನಡೆದುಕೊಂಡು ಬಂದಿದೆ.

English summary
Pigeon left in Sabari hill Molakalmuru district Chitradurga district. Surprised by joining his house in Megalahatti village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X