ಲಾಕ್ ಡೌನ್ ನಡುವೆ ಈಜಲು ಹೋದ ಹೊಳಲ್ಕೆರೆ ತಾಲ್ಲೂಕಿನ ಯುವಕ ಸಾವು
ಚಿತ್ರದುರ್ಗ, ಏಪ್ರಿಲ್ 30: ಲಾಕ್ ಡೌನ್ ಮಧ್ಯೆಯೂ ಯುವಕನೊಬ್ಬ ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಹೊಸದುರ್ಗದ ರಾಕೇಶ್ (21) ಮೃತ ಯುವಕ. ಸ್ನೇಹಿತರೊಂದಿಗೆ ಈತ ಇಂದು ಸಂಜೆ ತಾಲ್ಲೂಕಿನ ಗೌಡಿಹಳ್ಳಿ ಕೆರೆಯಲ್ಲಿ ಈಜಲು ಹೋಗಿದ್ದಾನೆ. ಈ ಸಂದರ್ಭದಲ್ಲಿ ನೀರಿನ ಹರಿವಿನಲ್ಲಿ ಸಿಲುಕಿಕೊಂಡು ಯುವಕ ಸಾವನ್ನಪ್ಪಿದ್ದಾನೆ.

ವಿಷಯ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಶೋಧ ಕಾರ್ಯ ನಡೆಸಿ ಯುವಕನ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ರಾಮಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಘಟನೆ ನಡೆದಿದೆ.











Click it and Unblock the Notifications