ಚಿತ್ರದುರ್ಗ ಸರ್ಕಾರಿ ಜಿಲ್ಲಾಸ್ಪತ್ರೆಗೆ ನಳಿನ್ ಕುಮಾರ್ ಭೇಟಿ
ಚಿತ್ರದುರ್ಗ, ಸೆಪ್ಟೆಂಬರ್ 16: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಂದು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೇಟಿ ನೀಡಿದ್ದ ಸಂದರ್ಭ ಆಸ್ಪತ್ರೆ ಶುದ್ಧವಾಗಿಲ್ಲದ್ದನ್ನು ಗಮನಿಸಿ ಆಸ್ಪತ್ರೆಯ ವೈದ್ಯರು, ಸ್ವಚ್ಛತಾ ಏಜನ್ಸಿ ಉಸ್ತುವಾರಿಗೆ ತರಾಟೆ ತೆಗೆದುಕೊಂಡರು. ಸ್ವಚ್ಛತಾ ಏಜನ್ಸಿಯನ್ನು ಬ್ಲಾಕ್ ಲಿಸ್ಟ್ ಹಾಕುವಂತೆ ಗರಂ ಆದರು.

ನಂತರ ಆಸ್ಪತ್ರೆ ಆವರಣದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿ ತಾವೂ ಕಸ ಗುಡಿಸಿದರು. ನಂತರ ಆಸ್ಪತ್ರೆ ಆವರಣದಲ್ಲಿ ಗಿಡ ನೆಟ್ಟರು. ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಸಂಸದ ಎ.ನಾರಾಯಣಸ್ವಾಮಿ, ಶಾಸಕ ತಿಪ್ಪಾರೆಡ್ಡಿ ಇದ್ದರು.












Click it and Unblock the Notifications