ಬಡವರಿಗೆ ಉಚಿತ ಕೋವಿಡ್ ಸೆಂಟರ್ ತೆರೆಯಲು ಮುಂದಾದ ಮುರುಘಾ ಶ್ರೀ
ಚಿತ್ರದುರ್ಗ, ಮೇ 20: ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲದೆ ಸೋಂಕಿತರು ಪರದಾಡುವಂತಾಗಿದೆ.
ಈ ಮಧ್ಯೆಯೇ ಉಚಿತವಾಗಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಮುಂದಾಗಿದ್ದಾರೆ. ನಗರದ ಖಾಸಗಿ ಹೋಟೆಲ್ ನವೀನ್ ರೆಸಿಡೆನ್ಸಿ ಹಾಗೂ SJM ಶಾಲೆಯನ್ನು ಕೋವಿಡ್ ಕೇಂದ್ರವನ್ನಾಗಿ ಮಾಡಲು ಮುರುಘಾ ಶ್ರೀಗಳು ಮುಂದೆ ಬಂದಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ನೋಡಿ ಶ್ರೀಗಳು ಮಾನವೀಯತೆ ಮೆರೆದಿದ್ದು, ಇಂದು (ಗುರುವಾರ) ಖಾಸಗಿ ಹೋಟೆಲ್ ಹಾಗೂ ಶಾಲೆಗೆ ಭೇಟಿ ನೀಡಿದ ಪರಿಶೀಲನೆ ನಡೆಸಿದರು.

ಮುರುಘಾ ಮಠದ ವತಿಯಿಂದ ಸಜ್ಜುಗೊಳ್ಳುತ್ತಿರುವ ಕೋವಿಡ್ ಕೇರ್ ಸೆಂಟರ್‌ನ್ನು ಶ್ರೀಗಳು ವೀಕ್ಷಣೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುರುಘಾ ಶರಣರು, ಚಿತ್ರದುರ್ಗ ಜಿಲ್ಲೆಯಲ್ಲಿ ಉಚಿತ ಕೊವೀಡ್ ಕೇರ್ ಸೆಂಟರ್ ತೆರೆಯಲು ನಿರ್ಧರಿಸಿದ್ದೇವೆ ಎಂದರು.
ಬೆಡ್, ಮಂಚ, ವೈದ್ಯಕೀಯ ಸಿಬ್ಬಂದಿಗಳ ಕುರಿತು ತಯಾರಿಯಲ್ಲಿದ್ದೇವೆ. ಈ ಕುರಿತು ಜಿಲ್ಲಾಡಳಿತದ ಸಹಕಾರ ಕೂಡಾ ಕೇಳಿದ್ದೇವೆ ಎಂದರು. ಎಲ್ಲಾ ಸಿದ್ಧತೆ ಮಾಡಿಕೊಂಡು ಬಡವರಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತೇವೆ ಎಂದರು.

Recommended Video
ಕೊರೊನಾ ಸೋಂಕಿತರಿಂದ ಯಾವುದೇ ಶುಲ್ಕವನ್ನು ವಸೂಲಿ ಮಾಡುವುದಿಲ್ಲ ಎಂದ ಮುರಾಘಾ ಶ್ರೀಗಳು, ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸೇವೆ ಆರಂಭ ಮಾಡಿದ್ದೇವೆ ಎಂದು ತಿಳಿಸಿದರು.












Click it and Unblock the Notifications