Get Updates
Get notified of breaking news, exclusive insights, and must-see stories!

ಮುರುಘಾ ಮಠದ ಆಡಳಿತಾಧಿಕಾರಿ ವಿರುದ್ಧವೂ ಲೈಂಗಿಕ ದೌರ್ಜನ್ಯ ಆರೋಪ, ದೂರು

ಚಿತ್ರದುರ್ಗ, ಆಗಸ್ಟ್‌ 27: ಜಿಲ್ಲೆಯ ಮುರುಘಾ ಮಠ ಶಿವಮೂರ್ತಿ ಮುರುಘಾ ಶರಣರ ವಿರುದ್ದ ಪೋಕ್ಸೋ ಕಾಯ್ದೆಯಡಿ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಕಮಹಾದೇವಿ ವಸತಿ ನಿಲಯದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಜಿಲ್ಲೆ ಮತ್ತು ಮಠದ ಭಕ್ತರಲ್ಲಿ ಸಾಕಷ್ಟು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಪರ ವಿರೋಧವಾಗಿ ಮಾತುಗಳು ಕೇಳಿ ಬರುತ್ತಿವೆ.

ಶರಣರು ವಿರುದ್ಧ ಮಕ್ಕಳು ಮೈಸೂರು ಠಾಣೆಯಲ್ಲಿ ದೂರು ದಾಖಲಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀಗಳಿಗೆ ನೋವಾಗಿದೆ ಎಂದು ವಕೀಲ ವಿಶ್ವನಾಥ ಹೇಳಿದರೆ, ಮತ್ತೊಂದು ಕಡೆ ಮಾಧ್ಯಮಗಳಲ್ಲಿ ಬಂದ ವಿಷಯ ಸ್ವಾಮೀಜಿಗಳ ತೇಜೋವಧೆಗೆ ಕಾರಣವಾಗಿದೆ ಎಂದು ವೀರಶೈವ ಸಂಘದ ಅಧ್ಯಕ್ಷ ಎಲ್ ಬಿ. ರಾಜಶೇಖರ್ ಹೇಳಿದ್ದಾರೆ.

ಸ್ವಾಮೀಜಿಗಳಿಗೆ ಹಿತ ಶತೃಗಳಿದ್ದು ಅವರು ಈ ಕೆಲಸ ಮಾಡುತ್ತಿದ್ದಾರೆ. ಚಿತ್ರದುರ್ಗದ ಜನತೆ ಹಾಗೂ ನಮ್ಮ ಸಮಾಜ ಇದನ್ನ ಖಂಡಿಸುತ್ತೇವೆ. ಮಠದ ಆಡಳಿತಾಧಿಕಾರಿ ಹಾಗೂ ಸ್ವಾಮೀಜಿ ನಡುವೆ ಈ ಮನಸ್ತಾಪವಿದೆ. ಆತನೇ ಈ ಕೆಲಸ ಮಾಡಿದ್ದಾರೆ, ಮಕ್ಕಳನ್ನ ಕರೆದುಕೊಂಡು ಹೋಗಿ ಮೈಸೂರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮುರುಘಾ ಶರಣರು ಸೇರಿ 5 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಇದಕ್ಕಾಗಿ ಎರಡು ವರ್ಷದಿಂದ ಷಡ್ಯಂತ್ರ ನಡೆಯುತ್ತಿದೆ. ನಾನು ಯಾವುದೇ ತಪ್ಪು ಮಾಡಿಲ್ಲ, ಏನೇ ಬಂದರು ಎದುರಿಸೋಣ ಎಂದು ಸಲಹಾ ಸಮಿತಿಯಲ್ಲಿ ಸ್ವಾಮೀಜಿ ಹೇಳಿದ್ದಾರೆ. ಆಡಳಿತಾಧಿಕಾರಿಗೆ ಹೆಚ್ಚಿನ ಅಧಿಕಾರ ನೀಡುವ ವಿಚಾರವಾಗಿ ವೈಮನಸ್ಸು ಉಂಟಾಗಿದೆ ಎಂದು ತಿಳಿಸಿದರು.

Murugha Mutt Girls Hostel Warden Register a Complaint Against Administrator SK Basavaraj

ವಿದ್ಯಾರ್ಥಿನಿಯರ ನಾಪತ್ತೆ ದೂರು
ಆಗಸ್ಟ್ 24ರಂದು ವಿದ್ಯಾರ್ಥಿ ನಿಲಯದ ಗೇಟ್ ಪಾಸ್ ಪಡೆದ ಇಬ್ಬರು ವಿದ್ಯಾರ್ಥಿನಿಯರು ಹೊರಗೆ ಹೋಗಿದ್ದರು. ಹೀಗೆ ಹೊರಗೆ ಹೋದ ಅಪ್ರಾಪ್ತ ಬಾಲಕಿಯರು ವಾಪಸ್ ಬಾರದ ಕಾರಣ ಆಗಸ್ಟ್‌ 26 ರಂದು ಚಿತ್ರದುರ್ಗ ಮುರುಘಾ ಮಠದ ಮಹಿಳಾ ವಸತಿ ನಿಲಯದ ವಾರ್ಡನ್‌ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಲಿಖಿತ ದೂರನ್ನು ನೀಡಿದ್ದರು ಎಂದು ಚಿತ್ರದುರ್ಗ ಎಸ್‌ಪಿ ಪರಶುರಾಮ್ ತಿಳಿಸಿದ್ದಾರೆ.

ಕಾಟನ್‌ಪೇಟೆಯಲ್ಲಿ ವಿದ್ಯಾರ್ಥಿನಿಯರ ಪತ್ತೆ
ವಿದ್ಯಾರ್ಥಿನಿಲಯದಿಂದ ಆಗಸ್ಟ್‌ 24ರಂದು ಹೊರಟಿದ್ದ ವಿದ್ಯಾರ್ಥಿನಿಯರು ಅದೇ ದಿನ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ತಾಪ್ತಿಯಲ್ಲಿ ಕಾಣಿಸಿಕೊಂಡಿದ್ದು, ಪೊಲೀಸರು ಈ ಮಾಹಿತಿಯನ್ನು ಮಠಕ್ಕೆ ಹಾಗೂ ಆಡಳಿತಾಧಿಕಾರಿ ಎಸ್ ಕೆ ಬಸವರಾಜುಗೆ ತಿಳಿಸಿದ್ದಾರೆ. ಆದರೆ ಬಸವರಾಜು ಮತ್ತು ಪತ್ನಿ ಸೌಭಾಗ್ಯ ಬಸವರಾಜು ಆಗಸ್ಟ್‌ 25ರಂದು ಬೆಳಗ್ಗೆ 5:00 ಗಂಟೆಗೆ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಕಾಟನ್ ಪೇಟೆ ಪೊಲೀಸ್ ಠಾಣೆಯಿಂದ ತಮ್ಮ ವಶಕ್ಕೆ ಪಡೆದುಕೊಂಡಿರುತ್ತಾರೆ. ಆದರೆ, ಅಪ್ರಾಪ್ತ ವಿದ್ಯಾರ್ಥಿನಿಯರನ್ನು ವಶಕ್ಕೆ ಪಡೆದ ಬಗ್ಗೆ ಅವರಿಬ್ಬರು ಪೋಷಕರಿಗಾಗಲಿ ಅಥವಾ ವಿದ್ಯಾರ್ಥಿನಿಲಯಕ್ಕಾಗಲಿ ಒಪ್ಪಿಸದೇ ಅನಧಿಕೃತವಾಗಿ ಆಗಸ್ಟ್‌ 27ರವರೆಗೆ ತಮ್ಮ ವಶದಲ್ಲಿಯೇ ಇಟ್ಟುಕೊಂಡಿದ್ದಾರೆ. ಈ ಕುರಿತು ಎಸ್‌ಕೆ ಬಸವರಾಜು ವಿರುದ್ಧ ದೂರು ದಾಖಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

Murugha Mutt Girls Hostel Warden Register a Complaint Against Administrator SK Basavaraj

ಮಠಧ ಆಡಳತಾಧಿಕಾರಿ ವಿರುದ್ಧವೂ ಲೈಂಗಿಕ ದೌರ್ಜನ್ಯ ಆರೋಪ

"ಮಠದ ಆಡಳಿತಾಧಿಕಾರಿಯಾಗಿರುವ ಎಸ್ ಕೆ ಬಸವರಾಜ್ ಮೇಲೆ ಲೈಂಗಿರ ದೌರ್ಜನ್ಯ ಆರೋಪ ಕೂಡ ಕೇಳಿಬಂದಿದೆ. ವಿದ್ಯಾರ್ಥಿ ನಿಲಯದ ತಪಾಸಣೆ ನೆಪದಲ್ಲಿ ಮಹಿಳಾ ನಿಲಯದ ಪಾಲಕರದ ತಮ್ಮೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದರು. ಜುಲೈ 27 ರಂದು ಸಂಜೆ 6 ಗಂಟೆ ವೇಳೆಗೆ ವಿದ್ಯಾರ್ಥಿ ನಿಲಯದಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ತನ್ನ ದೇಹದ ಅಂಗಾಂಗಗಳನ್ನು ಮುಟ್ಟಿ ಎಳೆದಾಡಿ, ತಬ್ಬಿಕೊಂಡು, ಬಲತ್ಕರಿಸಲು ಯತ್ನಿಸಿದ್ದರು. ತಾನು ವಿರೋಧಿಸಿದಾಗ ಕೊಲೆ ಬೆದರಿಕೆ ಹಾಕಿದ್ದಾರೆ" ಎಂದು ನಿಲಯ ಪಾಲಕರು ಎಸ್‌ಕೆ ಬಸವರಾಜ್ ದೂರಿನಲ್ಲಿ ವಿವರಿಸಿದ್ದಾರೆ.

ಈ ದೂರಿನ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ 385/2022, ಕಲಂ , 341,342, 363, 120(ಬಿ) ರೀತ್ಯಾ ಪ್ರಕರಣ ದಾಖಲಾಗಿದ್ದು, ಪ್ರಕರಣ ತನಿಖೆ ನಡೆಯುತ್ತಿದೆ ಎಂದು ಚಿತ್ರದುರ್ಗ ಜಿಲ್ಲಾ ವರಿಷ್ಠಾಧಿಕಾರಿ ಪರುಶುರಾಮ್ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+