ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗೆ ಜೈಲುವಾಸ: ಇಂದು ಜಾಮೀನಿಗಾಗಿ ಅರ್ಜಿ ಸಲ್ಲಿಕೆ

ಚಿತ್ರದುರ್ಗ ಸೆಪ್ಟೆಂಬರ್ 3: ಪ್ರೌಢಶಾಲೆಯ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗ ಮುರುಘಾ ಮಠದ ಮುರುಘಾ ಶ್ರೀಗಳನ್ನು 2 ನೇ ಅಪರ ಜಿಲ್ಲಾ ಕೋರ್ಟ್ ಎದುರು ಶುಕ್ರವಾರ ಹಾಜರುಪಡಿಸಲಾಗಿದ್ದು, ಸೆ. 5 ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಇಂದು ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಈ ಬಗ್ಗೆ ಮಠದ ಪರ ವಕೀಲ ಉಮೇಶ್, ಶ್ರೀಗಳಿಗೆ ಜಾಮೀನು ಕೋರಿ ಇಂದು ಕೋರ್ಟ್​ಗೆ ಮತ್ತೆ ಅರ್ಜಿ ಸಲ್ಲಿಸುತ್ತೇವೆ. ನಾವು ನಿನ್ನೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ರದ್ದಾಗಿದೆ. ಇಂದು ಮತ್ತೊಮ್ಮೆ ಜಾಮೀನಿಗೆ ಅರ್ಜಿ ಸಲ್ಲಿಸುತ್ತೇವೆ. ಮುರುಘಾಶ್ರೀಗಳಿಗೆ ಗೆದ್ದು ಬರುವ ವಿಶ್ವಾಸ ಇದೆ ಎಂದು ಅವರು ಹೇಳಿದರು.

ಪೋಕ್ಸೋ ಕಾಯ್ದೆ ಪ್ರಕರಣದಡಿ ಗುರುವಾರ ರಾತ್ರಿ ಮುರುಘಾಶರಣರನ್ನು ಬಂಧಿಸಿದ್ದ ಪೊಲೀಸರು ತಡರಾತ್ರಿ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿದಾಗ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಜಡ್ಜ್ ಆದೇಶಿಸಿದ್ದರು. ನಂತರ ಶುಕ್ರವಾರ ಎದೆ ನೋವು ಎಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶುಕ್ರವಾರ ರಾತ್ರಿ 8-9 ಸಮಯದಲ್ಲಿ ಹೆಚ್ಚಿನ ವಿಚಾರಣೆಗಾಗಿ ಡಿವೈಎಸ್ಪಿ ಕಛೇರಿಯಲ್ಲಿ ಕರೆದೊಯ್ದು ತನಿಖೆ ನಡೆಯುತ್ತಿದೆ.

Muruga Shri jailed in POCSO case: Bail application filed today

ಮುರುಘಾ ಸ್ವಾಮಿಜಿಗೆ ಜೈಲುವಾಸ
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಶರಣರನ್ನು ಗುರುವಾರ ರಾತ್ರಿ ಬಂಧಿಸಲಾಯಿತು. ಗುರುವಾರ ರಾತ್ರಿ 8 ಗಂಟೆಗೆ ಡಿವೈಎಸ್ಪಿ ಕಚೇರಿಗೆ ಪೊಲೀಸರು ಕರೆತಂದಿದ್ದರು. ಬಂಧನದ ದಿನ ಇಡೀ ರಾತ್ರಿ ಡಿವೈಎಸ್ಪಿ ಕಛೇರಿಯಲ್ಲಿ ಸರಿಯಾದ ನಿದ್ದೆ ಇಲ್ಲದೆ ಶ್ರೀಗಳು ಕಳೆದಿದ್ದಾರೆ ಎನ್ನಲಾಗಿದೆ.

ವಿಚಾರಣೆಗಾಗಿಯೇ ವಿಶೇಷ ತಂಡ ರಚಿಸಿರುವ ಎಸ್​.ಪಿ.ಪರಶುರಾಮ್​, ಡಿವೈಎಸ್ಪಿ ಅನಿಲ್​​​​​​ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಪೋಕ್ಸೋ, ಅಟ್ರಾಸಿಟಿ ಕೇಸ್​ ಬಗ್ಗೆ ಪಕ್ಕಾ ಮಾಹಿತಿ ಸಂಗ್ರಹ ಯತ್ನ ಮಾಡಲಾಗುತ್ತಿದ್ದು, ಸುಮಾರು ಎರಡು ಗಂಟೆಗಳ ಕಾಲ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಲಾಗಿದೆ. ಶುಕ್ರವಾರ ರಾತ್ರಿ 11 ಗಂಟೆ ನಂತರ ಸ್ವಾಮೀಜಿ ವಿಶ್ರಾಂತಿಗೆ ಜಾರಿದ್ದು, ನಿನ್ನೆ ಅರ್ಧ ದಿನ ಮೆಡಿಕಲ್​ ಟೆಸ್ಟ್​, ಅರ್ಧ ದಿನ ಕೋರ್ಟ್ ಟೆಸ್ಟ್​, ಪೊಲೀಸ್ ಕಸ್ಟಡಿಗೆ ಕೊಡ್ತಿದ್ದಂತೆ ಮತ್ತಷ್ಟು ಸುಸ್ತಾಗಿ ಹೋಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+