'ಅಮಿತ್ ಶಾ ತಂತ್ರಗಾರಿಕೆ, ಮೋದಿಯ ಮೋಡಿ ನಡೆಯಲ್ಲ'
ಚಿತ್ರದುರ್ಗ, ಅ.14 : 'ಅಮಿತ್ ಶಾ ತಂತ್ರಗಾರಿಕೆಯಾಗಲಿ, ಮೋದಿಯ ಮೋಡಿಯಾಗಲಿ ಕರ್ನಾಟಕದಲ್ಲಿ ಎಲ್ಲಿಯೂ ನಡೆಯುವುದಿಲ್ಲ' ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.
ಚಿತ್ರದುರ್ಗದಲ್ಲಿ ಸೋಮವಾರ ಮಾತನಾಡಿದ ಆಂಜನೇಯ, 'ನಾವು ಜನಪರವಾದ ಆಡಳಿತ ಮಾಡುತ್ತಿದ್ದೇವೆ. ಬಿಜೆಪಿಯವರಿಂದ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ' ಎಂದರು.

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ದೇಶದಲ್ಲೇ ಮಾದರಿ ಆಡಳಿತ ನೀಡುತ್ತಿದೆ. ಆದ್ದರಿಂದ, ಅಮಿತ್ ಶಾ ತಂತ್ರಗಾರಿಕೆಯಾಗಲಿ, ಮೋದಿ ಮೋಡಿಯಾಗಲಿ ಕರ್ನಾಟಕದಲ್ಲಿ ಎಲ್ಲಿಯೂ ನಡೆಯುವುದಿಲ್ಲ' ಎಂದು ತಿಳಿಸಿದರು.
ತಲೆ ಕೆಡಿಸಲು ಮುಂದಾಗುತ್ತಿದ್ದಾರೆ : 'ಕಳೆದ ನಾಲ್ಕು ವರ್ಷಗಳಿಂದ ಮನೆಯಲ್ಲಿ ಕುಳಿತಿದ್ದ ಬಿಜೆಪಿ ನಾಯಕರು ಇದೀಗ ದಿಢೀರನೆ ಎದ್ದು ಮೋದಿ ಅಭಿವೃದ್ಧಿ ಮಾಡಿದ್ರು ಎಂದು ಮನೆ-ಮನೆಗೆ ಸ್ಟಿಕ್ಕರ್ ಅಂಟಿಸುವ ಕೆಲಸ ಮಾಡುತ್ತಿದ್ದಾರೆ' ಎಂದು ಶಾಸಕ ಬೈರತಿ ಬಸವರಾಜು ಲೇವಡಿ ಮಾಡಿದ್ದಾರೆ.
ಸೋಮವಾರ ಕೊತ್ತನೂರಿನಲ್ಲಿ ಮಾತನಾಡಿದ ಅವರು ,'ಬಿಜೆಪಿ ನಾಯಕರಿಗೆ ತಕ್ಕ ಪಾಠ ಕಲಿಸಿ, ಅಭಿವೃದ್ಧಿ ಮಾಡುತ್ತಿರುವುದು ನಾವು. ನಮ್ಮ ಅಭಿವೃದ್ಧಿ ಕೆಲಸಕ್ಕೆ ಮತ ನೀಡಿ. ಬಿಜೆಪಿಯವರು ತಮ್ಮ ಮಾತಿನ ಮೂಲಕ ತಲೆ ಕೆಡಿಸಲು ಮುಂದಾಗುತ್ತಿದ್ದಾರೆ' ಎಂದು ಹೇಳಿದರು.












Click it and Unblock the Notifications