ಚಿತ್ರದುರ್ಗದಲ್ಲಿ ಏ. 26 ಕ್ಕೆ ಸರ್ಕಾರದಿಂದ ಸಾಮೂಹಿಕ ವಿವಾಹ
ಚಿತ್ರದುರ್ಗ, ಫೆಬ್ರವರಿ 23: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಆಯೋಜಿಸಿರುವ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮುಂದಿನ ಏಪ್ರಿಲ್ 26 ರಂದು ಚಿತ್ರದುರ್ಗ ಜಿಲ್ಲೆಯ ಮೂರು ಸ್ಥಳಗಳಲ್ಲಿ ನಡೆಯಲಿದೆ.
ಸಾಮೂಹಿಕ ವಿವಾಹ ನಡೆಯುವ ಜಿಲ್ಲೆಯ ಸ್ಥಳಗಳೆಂದರೆ, ಹಿರಿಯೂರು ತಾಲ್ಲೂಕಿನ ವದ್ದಿಕೆರೆ ಗ್ರಾಮದ ಶ್ರೀ ಕಾಲಭೈರವೇಶ್ವರ ದೇವಾಲಯ, ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಹಾಗೂ ಹೊಸದುರ್ಗ ತಾಲೂಕಿನ ಶ್ರೀ ಗವಿ ರಂಗನಾಥ ಸ್ವಾಮಿ ದೇವಾಲಯ ಇಲ್ಲಿ ಸಾಮೂಹಿಕ ವಿವಾಹ ಜರುಗಲಿದೆ.
ಸರ್ಕಾರದಿಂದ ನಡೆಯುವ ಈ ವಿವಾಹ ಕಾರ್ಯಕ್ರಮ ಉಚಿತವಾಗಿದ್ದು, ಜಿಲ್ಲೆಯ ಸಮಸ್ತ ಬಡ ಕುಟುಂಬದವರು ಹಾಗೂ ಸರಳವಾಗಿ ವಿವಾಹ ಬಯಸಿರುವವರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದು ಎಂದು ಧಾರ್ಮಿಕ ದತ್ತಿ ಇಲಾಖೆ ಹೇಳಿದೆ.

ಸರ್ಕಾರದಿಂದ ವರನಿಗೆ ಪ್ರೋತ್ಸಾಹ ಧನವಾಗಿ ಹೂವಿನ ಹಾರ, ಪಂಚೆ, ಶಲ್ಯ ಖರೀದಿಗಾಗಿ 5 ಸಾವಿರ ಕೊಡಲಾಗುವುದು. ವಧುವಿಗೆ ಪ್ರೋತ್ಸಾಹ ಧನವಾಗಿ ಹೂವಿನ ಹಾರ, ಧಾರೆ ಸೀರೆ ಮತ್ತು ರವಿಕೆ ಕಣ ಖರೀದಿಗಾಗಿ 10 ಸಾವಿರ ಹಣ ಕೊಡಲಾಗುವುದು.
ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು (ಅಂದಾಜು 8 ಗ್ರಾಂ ತೂಕ) ಕೊಡಲಾಗುವುದು.

ನವದಂಪತಿಗಳಿಗೆ 40 ಸಾವಿರ ನಗದು ಹಣ ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಉಚಿತ ಸಹಾಯವಾಣಿ 1800 4256654 ನಂಬರ್ ಗೆ ಕರೆ ಮಾಡಬಹುದು.












Click it and Unblock the Notifications