ರಾಂಪುರದಲ್ಲಿ ಭೀಕರ ಅಪಘಾತ: ಲಾರಿ, ಆಟೋ ಡಿಕ್ಕಿ, 13 ಸಾವು

Posted By:
Subscribe to Oneindia Kannada

ಮೊಳಕಾಲ್ಮುರು (ಚಿತ್ರದುರ್ಗ), ಮಾರ್ಚ್ 18: ಆಟೋ, ಲಾರಿ ಮತ್ತು ಟೆಂಪೋ ಟ್ರಾವೆಲರ್ ನಡುವಿನ ಸಂಭವಿಸಿದ ಅಪಘಾತದಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ 13 ಜನರು ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆ ಮೊಳಕಾಲ್ಮುರು ಬಳಿಯ ರಾಂಪುರದ (ಎಲೆ ರಾಂಪುರ) ಬಳಿ ನಡೆದಿದೆ.

ರಾಂಪುರ ಸಮೀಪದ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ, ಟೆಂಪೋ ಟ್ರಾವಲರ್ ನಲ್ಲಿದ್ದ ಶಹಾಪುರ ಮೂಲದ ಏಳು ಮಂದಿಗೆ ಗಾಯಗಳಾಗಿವೆ.

Lorry hits auto, kills 13 passengers in Rampura

ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯ ಟೈಯರ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ, ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಆಟೋಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಆನಂತರ, ಲಾರಿಯು ಹತ್ತಿರದಲ್ಲೇ ಸಾಗುತ್ತಿದ್ದ ಟೆಂಪೋ ಟ್ರಾವೆಲರ್ ಗೂ ಡಿಕ್ಕಿ ಹೊಡೆದಿದೆ.

ಬೆಂಗಳೂರಿನಿಂದ ಕೂಲಿಕೆಲಸ ಮುಗಿಸಿ ಟಿಟಿಯಲ್ಲಿ ತೆರಳುತ್ತಿದ್ದ ಗುಲ್ಬರ್ಗಾ ಹಿಲ್ಲೆ ಶಹಾಪುರ ಮೂಲದ ಕಾರ್ಮಿಕರು, ಆಟೋದಲ್ಲಿದ್ದ ಬಿಜಾಪುರ ಮೂಲದ ಕುಲುಮೆ ಕಾರ್ಮಿಕರು ಸ್ಥಳದಲ್ಲೇ ಸಾವು. ಮೃತರ ವಿವರ ತಿಳಿದುಬಂದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a scarry road accident near Rampura of Molakalmuru taluk, Chitradurga district, 13 people killed when a lorry after its tyre blasts, hits an auto rickshaw carrying 13 people including driver. All the passengers in auto killed on spot. Incident happened on March 18, 2017.
Please Wait while comments are loading...